Monday, October 7, 2024
spot_img
spot_img
spot_img
spot_img
spot_img
spot_img
spot_img

Health : ಏಳು ದಿನಗಳ ತನಕ ಎಳನೀರು ಸೇವಿಸಿದರೆ ಏನಾಗುತ್ತದೆ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಎಳನೀರು ರುಚಿಕರ ಮತ್ತು ತುಂಬಾ ಆರೋಗ್ಯಕರ. ಇದು ವಿಟಮಿನ್ ಸಿ, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಸೋಡಿಯಂ, ಸತು, ತಾಮ್ರ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

ಸತತವಾಗಿ ಏಳು ದಿನಗಳವರೆಗೆ ಪ್ರಥಮ ಆಹಾರವಾಗಿ ಎಳನೀರು ಸೇವಿಸಿದರೆ ಏನಾಗುತ್ತದೆ?

ಇದನ್ನು ಓದಿ : ತಂದೆ ಇಲ್ಲದ ಮಕ್ಕಳಿಗೆ ಸಿಗುತ್ತೆ 24 ಸಾವಿರ ರೂ. ಸ್ಕಾಲರ್‌ಶಿಪ್; ಮಾನದಂಡಗಳೇನು ಗೊತ್ತಾ.?

ತೆಂಗಿನ ನೀರು ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಹೋರಾಡುತ್ತದೆ. ಅದೇ ಸಮಯದಲ್ಲಿ, ಇದು ಉತ್ತಮ ಕೊಲೆಸ್ಟ್ರಾಲ್ (ಹೆಚ್ ಡಿ. ಎಲ್) ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತೊಂದು ಅಧ್ಯಯನದಲ್ಲಿ, ತೆಂಗಿನ ನೀರಿನ ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಪರಿಣಾಮಗಳು ಸುಲಭವಾಗಿ ದೊರಕುವ ಔಷಧವಾದ ಲೊವಾಸ್ಟಾಟಿನ್ ಅನ್ನು ಹೋಲುತ್ತವೆ ಎಂದು ಕಂಡುಬಂದಿದೆ.

ಅಜೀರ್ಣತೆಯ ಕಾರಣದಿಂದ ಹೊಟ್ಟೆ ಸರಿಯಿಲ್ಲದಿದ್ದರೆ ಎಳನೀರು ಕುಡಿಯುವ ಮೂಲಕ ಶಮನ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಅಜೀರ್ಣತೆಗೆ ಅತಿ ಆಮ್ಲೀಯತೆಯೇ ಕಾರಣವಾಗುತ್ತದೆ ಹಾಗೂ ಎಳನೀರು ಇದಕ್ಕು ಸರಿಪಡಿಸುವ ಮೂಲಕ ಹೊಟ್ಟೆಯ ಉರಿ, ಹುಳಿತೇಗು, ಎದೆಯುರಿ ಮೊದಲಾದ ತೊಂದರೆಗಳನ್ನು ಅತಿ ಶೀಘ್ರದಲ್ಲಿ ಶಮನಗೊಳಿಸುತ್ತದೆ.

ಇದನ್ನು ಓದಿ : Health : ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸ್ಪೂನ್ ತುಪ್ಪ ತಿನ್ನಬೇಕು.? ಜಾಸ್ತಿ ತಿಂದ್ರೆ ಏನಾಗುತ್ತೆ ಗೊತ್ತಾ.?

ಇದರಲ್ಲಿ ಕ್ಯಾಲೋರಿಗಳು ಅತಿ ಕಡಿಮೆ ಇದು ಎಳನೀರನ್ನು ನಮ್ಮ ಜಠರ ಅತಿ ಸುಲಭವಾಗಿ ಮತ್ತು ಪರಿಪೂರ್ಣವಾಗಿ ಜೀರ್ಣಿಸಿಕೊಳ್ಳುತ್ತದೆ. ಅಲ್ಲದೇ ಎಳನೀರಿನಲ್ಲಿ ಜೀರ್ಣರಸಗಳಿಗೆ ಪೂರಕವಾದ ಕಿಣ್ವಗಳಿದ್ದು ಜೀರ್ಣಕ್ರಿಯೆಯನ್ನು ಇನ್ನಷ್ಟು ಸುಲಭವಾಗಿಸುತ್ತದೆ. ತನ್ಮೂಲಕ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ ಹಾಗೂ ತೂಕ ಇಳಿಕೆಯ ಉದ್ದೇಶ ಶೀಘ್ರವಾಗಿ ನೆರವೇರುತ್ತದೆ

ಎಳನೀರಿನಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಹಾಗಾಗಿ, ಹೃದಯದ ಮಟ್ಟಿಗೆ ಎಳನೀರು ಅತ್ಯುತ್ತಮವಾದ ಆಹಾರವಾಗಿದೆ. ಅಲ್ಲದೇ ಕೆಟ್ಟ ಎಲ್ ಡಿ ಎಲ್ ಕೊಲೆಸ್ಟ್ರಾಲ್ ತಗ್ಗಿಸಿ ಒಳ್ಳೆಯ ಹೆಚ್ ಡಿ. ಎಲ್ ಹೆಚ್ಚಿಸುವ ಮೂಲಕ ಹೃದಯದ ಮೇಲಿನ ಹೊರೆಯನ್ನು ತಗ್ಗಿಸುತ್ತದೆ ಹಾಗೂ ತನ್ಮೂಲಕ ಹೃದಯಕ್ಕೆ ಎದುರಾಗುವ ತೊಂದರೆಗಳಿಂದ ಕಾಪಾಡುತ್ತದೆ.

ಇದನ್ನು ಓದಿ : ರೇಷನ್ ಕಾರ್ಡ್ ರದ್ದು ಪಟ್ಟಿ ಬಿಡುಗಡೆ : ನಿಮ್ಮ ಹೆಸರಿದೆಯೇ? ಈ ರೀತಿ Check ಮಾಡಿ.!

ಇದರಲ್ಲಿರುವ ಎಲೆಕ್ಟ್ರೋಲೈಟುಗಳು ದಣಿದ ದೇಹಕ್ಕೆ ಶಕ್ತಿಯನ್ನು ಒದಗಿಸುವ ಜೊತೆಗೇ ಬೆವರು, ಅತಿಸಾರ, ವಾಂತಿ ಮೊದಲಾದ ಕಾರಣಗಳಿಂದ ದೇಹದಿಂದ ನಷ್ಟವಾಗಿದ್ದ ನೀರಿನಂಶವನ್ನು ಮರು ಹುರಿದುಂಬಿಸುತ್ತದೆ.

ಎಳನೀರಿನಲ್ಲಿ ಮೆಗ್ನೀಶಿಯಂ ಪ್ರಮಾಣ ಹೆಚ್ಚಾಗಿರುವ ಕಾರಣ ಇದು ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಲೂ ಸಾಧ್ಯವಾಗುತ್ತದೆ. ಆದರೆ ತಲೆನೋವು ಉಲ್ಬಣಗೊಂಡ ಬಳಿಕ ಏನು ಸೇವಿಸಿದರೂ ತಲೆನೋವು ಕಡಿಮೆಯಾಗದ ಕಾರಣ ತಲೆನೋವು ಪ್ರಾರಂಭವಾದ ಬಳಿಕ ಎಷ್ಟು ಬೇಗನೇ ಸಾಧ್ಯವೋ ಅಷ್ಟೂ ಬೇಗನೇ ಕುಡಿದುಬಿಡಬೇಕು.

ಇದನ್ನು ಓದಿ : ಕಾರಿನ ಇಂಜಿನ್ ಲೈಫ್ ದ್ವಿಗುಣವಾಗಬೇಕೆ.? ಸ್ಟಾರ್ಟ್ ಮಾಡುವಾಗ 40 ಸೆಕೆಂಡ್ ಹೀಗೆ ಮಾಡಿ.!

ಥೈರಾಯ್ಡ್ ಗ್ರಂಥಿಯ ಸ್ರವಿಕೆ ಹೆಚ್ಚುತ್ತದೆ ಹಾಗೂ ಜೀರ್ಣಕ್ರಿಯೆಯೂ ಉತ್ತಮಗೊಂಡಿರುವುದು ಗಮನಕ್ಕೆ ಬರುತ್ತದೆ.

ನಿಮ್ಮ ರೋಗ ನಿರೋಧಕ ಶಕ್ತಿ ಉತ್ತಮಗೊಂಡಿದ್ದು ಸುಲಭವಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳಿಗೆ ಬಗ್ಗದೇ ಪ್ರತಿರೋಧ ಒಡ್ಡುವುದು ಗಮನಕ್ಕೆ ಬರುತ್ತದೆ.

ಇದನ್ನು ಓದಿ : Health : ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬೇಕೆ.? ಹಾಗಿದ್ರೆ ಈ ಆಹಾರ ಪದಾರ್ಥಗಳನ್ನು ಸೇವಿಸಿ.!

ಈ ಅಭ್ಯಾಸವನ್ನು ವಾರಕ್ಕೆ ನಿಲ್ಲಿಸದೇ ಮುಂದುವರೆಸುವ ಮೂಲಕ ಜೀರ್ಣಶಕ್ತಿ ಇನ್ನಷ್ಟು ಉತ್ತಮಗೊಳ್ಳುತ್ತದೆ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img