Friday, June 14, 2024
spot_img
spot_img
spot_img
spot_img
spot_img
spot_img

Health : ಆರೋಗ್ಯವಂತ ವ್ಯಕ್ತಿಯ ದೇಹದ ತೂಕ ಮತ್ತು ಎತ್ತರ ಎಷ್ಟಿರಬೇಕು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮನುಷ್ಯ ಆರೋಗ್ಯವಂತನಾಗಿರಲು ಆತನ ತೂಕ ಎಷ್ಟಿರಬೇಕು.? ಇನ್ನು ಇಷ್ಟು ಎತ್ತರವಿದ್ದ (height) ವ್ಯಕ್ತಿಯ ತೂಕ ಎಷ್ಟಿರಬೇಕು.

ವ್ಯಕ್ತಿಯ ಎತ್ತರಕ್ಕೂ ಹಾಗು ತೂಕಕ್ಕೂ ಏನಾದರೂ ಸಂಬಂಧ ಇದೆಯೇ.? ಅಥವಾ ಎತ್ತರಕ್ಕೆ ಅನುಗುಣವಾಗಿ ಎಷ್ಟು ತೂಕ ಇರಬೇಕು.? ಯಾವ ವಯಸ್ಸಿನಲ್ಲಿ ಎಷ್ಟು ತೂಕವಿದ್ದರೆ (weight) ಉತ್ತಮ.? ಇಂತಹ ಸಾಕಷ್ಟು ಪ್ರಶ್ನೆಗಳು ಅನೇಕರಲ್ಲಿ ಇವೆ.

ಇದನ್ನು ಓದಿ : ಆಟವಾಡುತ್ತಿದ್ದ ಮಗುವನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದ ಮಂಗ ; ಆಶ್ಚರ್ಯಕರ ವಿಡಿಯೋ Viral.!

ವಿಶ್ವ ಆರೋಗ್ಯ ಸಂಸ್ಥೆ ಬಾಡಿ ಮಾಸ್ ಇಂಡೆಕ್ಸ್ (BMI) ಹೇಳುವ ಪ್ರಕಾರ ಕಡಿಮೆ ತೂಕ, ಸಾಮಾನ್ಯ ತೂಕ, ಅಧಿಕ ತೂಕ ಮತ್ತು ಬೊಜ್ಜು ಮುಂತಾದ ವಿವಿಧ ವಿಧಗಳಲ್ಲಿ ವರ್ಗೀಕರಿಸಬಹುದು.

ವ್ಯಕ್ತಿಯ ತೂಕವನ್ನು ಕಿಲೋ ಗ್ರಾಂಗಳಲ್ಲಿ ಭಾಗಿಸಿ ಅವುಗಳ ಎತ್ತರದ ಚೌಕವನ್ನು ಮೀಟರ್‌ಗಳಲ್ಲಿ ಭಾಗಿಸಿ (divide) ಲೆಕ್ಕ ಮಾಡಲಾಗುತ್ತದೆ.

ಒಂದು ಮಗು ಜನಿಸಿದ ಸಮಯದಲ್ಲಿ ಅದು ಗಂಡಾಗಿದ್ದರೆ ಅದರ ತೂಕ 3.3 ಕೆಜಿ ಇರಬೇಕು. ಅದೇ ಹೆಣ್ಣು ಮಗುವಾಗಿದ್ದರೆ 3.2 ಕೆಜಿ ಇರಬೇಕು ಎಂದು ವೈದ್ಯಕೀಯ ಲೋಕವು ತಿಳಿಸುತ್ತದೆ.

ಅಂತೆಯೇ 3 ರಿಂದ 5 ತಿಂಗಳ ಹೆಣ್ಣು ಮಗುವಿನ ತೂಕ 5.4 ಕೆಜಿ ಸಮೀಪದಲ್ಲಿರಬೇಕು. ಗಂಡು ಮಗುವಿನ ತೂಕ 6 ಕೆಜಿ ಇರಬೇಕು.

ಒಂದು ವರ್ಷ ತುಂಬಿದ ಮಗುವಿನ ತೂಕ 9.2 ಕೆಜಿ ಇರಬೇಕು. ಹೆಣ್ಣಾಗಿದ್ದರೆ 8.6 ಕೆಜಿ ಹೊಂದಿರಬೇಕು.

10 ರಿಂದ 11 ವರ್ಷದ ಬಾಲಕರ ತೂಕ 31 ಕೆಜಿ ಇರಬೇಕು. ಬಾಲಕಿಯ ತೂಕ 30 ಕೆಜಿ ಸಮೀಪದಲ್ಲಿ ಇರಬೇಕು.

19 ವರ್ಷದಿಂದ 29 ವರ್ಷದೊಳಗಿನ ಪುರುಷರು ಎಂಭತ್ತು ಕೆಜಿ ಮತ್ತು ಮಹಿಳೆಯರು 73 ಕೆಜಿ ತೂಕವಿರಬೇಕು.

ವಯಸ್ಕರಲ್ಲಿ ಎತ್ತರಕ್ಕೆ ಅನುಗುಣವಾಗಿ ತೂಕ ಇದ್ದು 6 ಇಂಚು ಉದ್ದದ ವ್ಯಕ್ತಿಯ ಸಾಮಾನ್ಯ ತೂಕ 53 ರಿಂದ 67 ಕೆಜಿ ನಡುವೆ ಇರಬೇಕು.

5 ಅಡಿ 8 ಇಂಚು ಎತ್ತರದ ವ್ಯಕ್ತಿಯ ಸಾಮಾನ್ಯ ತೂಕವು 56 ರಿಂದ 71 ಕೆಜಿಯ ನಡುವೆ ಇರಬೇಕು.

ಇದನ್ನು ಓದಿ : Air show ವೇಳೆ ಮುಖಾಮುಖಿ ಡಿಕ್ಕಿಯಾದ ವಿಮಾನ : ಓರ್ವ ಪೈಲಟ್ ಸಾವು ; ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ.!

5 ಅಡಿ 10 ಇಂಚು ಇರುವ ಸಾಮಾನ್ಯ ವ್ಯಕ್ತಿಯ ತೂಕ 59 ರಿಂದ 75 ಕೆಜಿ ಇರಬೇಕು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

 

spot_img
spot_img
- Advertisment -spot_img