ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರೀತಿ ಎಂಬುದು ಇದು ಮೃದುತ್ವ, ಅನ್ಯೋನ್ಯತೆ, ರಕ್ಷಣೆ, ಆಕರ್ಷಣೆ, ವಾತ್ಸಲ್ಯ ಮತ್ತು ನಂಬಿಕೆಯನ್ನು ಒಳಗೊಂಡಿರುತ್ತದೆ. ಈ ಪ್ರೀತಿಯು ನಿಕಟತೆ, ಉತ್ಸಾಹ ಮತ್ತು ಬದ್ಧತೆಯಿಂದ ಗುರುತಿಸಲ್ಪಟ್ಟ ಭಾವನೆಗಳು ಮತ್ತು ನಡವಳಿಕೆಗಳ ಮಿಶ್ರಣವಾಗಿದೆ.
ಇದನ್ನು ಓದಿ : ಪಡ್ಡೆ ಹೈಕ್ಳ ನಿದ್ದೆ ಕದಿಯಲು ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟ್ಟ Sunnyleone.!
ಆದರೆ ಪ್ರೀತಿ ಅನ್ನೋದು ಅತಿಯಾದಾಗ ಏನಾಗುತ್ತೆ ಎಂಬುದಕ್ಕೆ ವಿಡಿಯೋವೊಂದು ವೈರಲ್ ಆಗಿದೆ. ಪ್ರೀತಿಯಿಂದ ಮುದ್ದಾಡುತ್ತಿದ್ದ ಜೋಡಿ ಹೇಗೆ ಕಿತ್ತಾಡಿಕೊಂಡಿದೆ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಒಬ್ಬರಿಗೊಬ್ಬರು ಕೆನ್ನೆ ಸವರುತ್ತಾ ಇಬ್ಬರೂ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ಇಬ್ಬರು ಕ್ಯಾಮೆರಾ ಮುಂದೆಯೇ ಕಚ್ಚಾಡಿಕೊಂಡಿದ್ದಾರೆ.
ಕಾರಿನ ಮುಂಭಾಗದ ಸೀಟುಗಳಲ್ಲಿ ಗಂಡ ಹೆಂಡತಿ ಕುಳಿತಿದ್ದಾರೆ. ಗಂಡನ ಭುಜಕ್ಕೆ ಒರಗಿ ಹೆಂಡತಿ ಆರಾಮವಾಗಿ ಕುಳಿತಿರುತ್ತಾಳೆ. ಆಗ ಮಡದಿ ಕೆನ್ನೆ ಮೇಲೆ ಗಂಡ ಮೃದುವಾಗಿ ತಟ್ಟುತ್ತಾನೆ. ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಮಡದಿಯೂ ಗಂಡನ ಕೆನ್ನೆ ತಟ್ಟುತ್ತಾಳೆ. ನಂತರ ಗಂಡ ಸ್ವಲ್ಪ ಜೋರಾಗಿಯೇ ಕೆನ್ನೆಗೆ ತಟ್ಟಿದ್ದಾನೆ. ಇದಕ್ಕೆ ಹೆಂಡತಿಯೂ ಸಹ ಹಾಗೆಯೇ ಮಾಡಿದ್ದಾಳೆ.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
ಕೆನ್ನೆಗೆ ಏಟು ಜೋರಾದಂತೆ ಇಬ್ಬರ ಮಧ್ಯೆ ಜಗಳ ಶುರುವಾಗಿದ್ದು, ಗಂಡನ ಕೆನ್ನೆಗೆ ಹೆಂಡತಿ, ಹೆಂಡತಿ ಕೆನ್ನೆಗೆ ಹೆಂಡತಿ ಜೋರಾಗಿ ಹೊಡೆದಾಡುಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.
@thakuraman1111 ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. 9.85 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ನೆಟ್ಟಿಗರು ಕಮೆಂಟ್ಸ್ ಮಾಡಿದ್ದಾರೆ.