Sunday, September 15, 2024
spot_img
spot_img
spot_img
spot_img
spot_img
spot_img
spot_img

ಮಸ್ತ್ ಡ್ಯಾನ್ಸ್ ಮಾಡಿದ ಖ್ಯಾತ ಪೊಲೀಸ್ ಅಧಿಕಾರಿ Suspend, ಅಂತದ್ದೇನಾಯ್ತು.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪಿಸ್ತೂಲ್​ ತೋರಿಸಿ ಬರ್ತ್ ಡೇ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ದ ತಿಹಾರ್ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ದೀಪಕ್ ಶರ್ಮಾರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಪಿಸ್ತೂಲ್​ ಹಿಡಿದ ವೇಳೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ : ಗೂಗಲ್‌ನಲ್ಲಿ ಈ ವಿಷಯಗಳನ್ನು ಹುಡುಕಲೇಬೇಡಿ ; ಇಲ್ಲಾಂದ್ರೆ ಜೈಲುವಾಸ Guarantee.!

ಪೂರ್ವ ದೆಹಲಿಯಲ್ಲಿ ರಾಜಕೀಯ ನಾಯಕರೊಬ್ಬರು ಆಯೋಜಿಸಿದ್ದ ಪಾರ್ಟಿಯಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅವರ ಖಲ್ ನಾಯಕ್ ಸಿನಿಮಾದ​ ನಾಯಕ್ ನಹಿ, ಖಲ್ನಾಯಕ್ ಹೂನ್ ಮೈನ್​ ಸಾಂಗ್​ಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಇವರ ಜೊತೆ ಇನ್ನಿಬ್ಬರು ಕೂಡ ಡ್ಯಾನ್ಸ್ ಮಾಡಿದ್ದಾರೆ.

ದೀಪಕ್ ಶರ್ಮಾ ಅವರು ದೆಹಲಿಯ ತಿಹಾರ್ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಆಗಿದ್ದು, ಬರ್ತ್​​ಡೇ ಪಾರ್ಟಿಯಲ್ಲಿ ಗನ್​ ಹಿಡಿದುಕೊಂಡು ಡ್ಯಾನ್ಸ್ ಮಾಡಿದ್ದರು.

ವಿಡಿಯೋ ವೈರಲ್ ಬೆನ್ನಲ್ಲೇ ಸಾಕಷ್ಟು ವಿರೋಧ ಕೇಳಿ ಬಂದ ಹಿನ್ನೆಲೆ ದುರ್ವರ್ತನೆ ತೋರಿದ್ದಾರೆ ಎಂದು ಉನ್ನತ ಅಧಿಕಾರಿಗಳು ದೀಪಕ್ ಶರ್ಮಾರನ್ನ ಅಮಾನತುಗೊಳಿಸಿದ್ದಾರೆ. ಅಲ್ಲದೇ ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ.

ಇದನ್ನು ಓದಿ : ಯುವತಿಗೆ ಲೈಂಗಿಕವಾಗಿ ಸಹಕರಿಸುವಂತೆ ಬೇಡಿಕೆ ಇಟ್ಟ ಪ್ರಾಂಶುಪಾಲ ; ವಿಡಿಯೋ Viral.!

ಮತ್ತೊಂದೆಡೆ, ಪಿಸ್ತೂಲ್​ ದೀಪಕ್ ಶರ್ಮಾ ಅವರದ್ದೇ ಅಥವಾ ಇಲ್ಲವೇ ಎಂದು ಪರಿಶೀಲಿಸಲಾಗುತ್ತಿದೆ. ದೀಪಕ್ ಶರ್ಮಾ ಅವರು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಪಿಸ್ತೂಲ್ ತೋರಿಸಿ ನೃತ್ಯ ಮಾಡಿದ್ದಾರೆ.

ಈ ವಿಡಿಯೋ ಎಲ್ಲೆಡೆ ವೈರಲ್ ಆದ ಬೆನ್ನಲ್ಲೇ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಈ ಕುರಿತು ತಿಹಾರ್ ಜೈಲು ಅಧಿಕಾರಿಗಳಿಗೆ ದೆಹಲಿ ಪೊಲೀಸರು ಸಂಪರ್ಕಿಸಿದ್ದಾರೆ ಎಂದು ತಿಳಿಸಿದ್ದಾರೆ.

ದೀಪಕ್ ಶರ್ಮಾ ಅವರು ತಮ್ಮ ಕಟ್ ಮಸ್ತ್​​ ಆದ ದೇಹದಿಂದ ಸಖತ್ ಫೇಮಸ್​. ಅಲ್ಲದೇ ಇವರಿಗೆ ಇನ್​ಸ್ಟಾದಲ್ಲಿ ಬರೋಬ್ಬರಿ 4.41K ಫಾಲೋವರ್ಸ್ ಇದ್ದಾರೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img