Wednesday, May 22, 2024
spot_img
spot_img
spot_img
spot_img
spot_img
spot_img

Health : ನಾವು ನೀರು ಕಡಿಮೆ ಕುಡಿದರೆ ಏನಾಗಬಹುದು.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ದೇಹಕ್ಕೆ ನೀರು ಎಷ್ಟು ಮುಖ್ಯ ಎಂದು ತಿಳಿದಿದ್ದರೂ, ಅನೇಕ ಜನರು ಸಾಕಷ್ಟು ನೀರು (Water) ಕುಡಿಯುವುದಿಲ್ಲ. ಅಗತ್ಯವಾದ ಪ್ರಮಾಣದ ನೀರನ್ನು ಕುಡಿಯದಿರುವುದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ (Negative) ಪರಿಣಾಮ ಬೀರುತ್ತದೆ

ಕಣ್ಣಿನ ಸಮಸ್ಯೆ :
ನೀರಿನ ಕೊರತೆಯು ಬಾಯಿ ಮತ್ತು ಗಂಟಲಿನ ಮೇಲೆ ಮಾತ್ರವಲ್ಲ, ಕಣ್ಣುಗಳ ಮೇಲೂ ಪರಿಣಾಮ (Effect) ಬೀರುತ್ತದೆ. ಕಣ್ಣುಗಳು (Eyes) ಒಣಗುತ್ತವೆ ಮತ್ತು ಕೆಂಪಾಗುತ್ತವೆ.

ಇದನ್ನು ಓದಿ : ರಾಜ್ಯದಲ್ಲಿ ದಾಖಲೆ ಬರೆದ ಬಿಸಿಲು : ಈ ಜಿಲ್ಲೆಗಳಿಗೆ Red Alert ಘೋಷಿಸಿದ ಹವಾಮಾನ ಇಲಾಖೆ.

ಹೊಟ್ಟೆಯ ಸಮಸ್ಯೆಗಳು :
ಮಲಬದ್ಧತೆ (Constipation), ಆಸಿಡಿಟಿ ಮತ್ತು ಎದೆಯುರಿ ಸಮಸ್ಯೆ ಉಂಟಾಗುವುದು.

ಏಕಾಗ್ರತೆಯ ಕೊರತೆ :
ಯಾವ ಕೆಲಸದ ಮೇಲೆಯೂ ಗಮನವನ್ನು ಕೇಂದ್ರೀಕರಿಸಲು (Concentration) ಸಾಧ್ಯವಾಗುವುದಿಲ್ಲ. ಅಲ್ಲದೆ ನೀವು ದೀರ್ಘಕಾಲ ಏನನ್ನೂ ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.

ಮೂತ್ರದಲ್ಲಿ ಸಮಸ್ಯೆ :
ದೇಹದಲ್ಲಿ ನೀರಿನ ಕೊರತೆ ಇದ್ದಾಗ ಮೂತ್ರ ದಪ್ಪ ಹಳದಿ ಬಣ್ಣಕ್ಕೆ (Yellow color) ತಿರುಗುತ್ತದೆ. ಇದರೊಂದಿಗೆ ಮೂತ್ರದ (Urine) ಪ್ರಮಾಣವು ಕೂಡ ಸಾಮಾನ್ಯಕ್ಕಿಂತ ಕಡಿಮೆಯಿರುತ್ತದೆ ಮತ್ತು ಮೂತ್ರ ವಿಸರ್ಜನೆಯ ನಂತರ, ಖಾಸಗಿ ಭಾಗದಲ್ಲಿ (Private parts) ಉರಿ ಅಥವಾ ತುರಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಒಣ ಚರ್ಮದ ಸಮಸ್ಯೆ :
ದೇಹದಲ್ಲಿ ನೀರಿನ ಕೊರತೆಯು ಚರ್ಮದಲ್ಲಿ ಶುಷ್ಕತೆಯನ್ನು (Dry skin) ಉಂಟುಮಾಡುತ್ತದೆ. ಒಣ ಚರ್ಮದ ಸಮಸ್ಯೆ ಇದ್ದರೆ, ಅದು ನಿರ್ಜಲೀಕರಣದ ಲಕ್ಷಣವಾಗಿರಬಹುದು.

ತಲೆನೋವು :
ಆಗಾಗ ತಲೆನೋವು ಸಮಸ್ಯೆ (Head ache) ಎದುರಾಗುತ್ತದೆ. ನಮ್ಮ ಮೆದುಳು ಶೇಕಡಾ 90 ರಷ್ಟು ನೀರಿನಿಂದ ಕೂಡಲ್ಪಟ್ಟಿರುವುದರಿಂದ ದೇಹದ ಹೈಡ್ರೇಶೇನ್ ಲೆವೆಲ್ ಕಡಿಮೆಯಾದಾಗ ತಲೆನೋವಿನ ಸಮಸ್ಯೆ ಕಾಡುತ್ತದೆ.

ಕೀಲು ನೋವಿನ ಸಮಸ್ಯೆ :
ನಿರ್ಜಲೀಕರಣವು (Dehydration) ಕೀಲು ನೋವನ್ನು ಉಂಟು ಮಾಡುತ್ತದೆ. ಈಗಾಗಲೇ ಸಮಸ್ಯೆ ಇದ್ದರೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ.

ಸುಸ್ತು :
ಏನೇ ಕೆಲಸ ಮಾಡಿದರೂ, ಮಾಡದೆ ಇದ್ದರೂ ಸುಸ್ತಾಗುತ್ತಿರುವುದು (Tired). ಪದೇ ಪದೇ ರೆಸ್ಟ್ ಮಾಡಬೇಕೆನಿಸುವುದು ಕೂಡ ದೇಹದಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವ ಸಂಕೇತವಾಗಿರಬಹುದು.

ಇದನ್ನು ಓದಿ : ವಿಷದ ಇಂಜೆಕ್ಷನ್ ಚುಚ್ಚಿದ ದುರುಳರು : ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಪೊಲೀಸ್ ಕಾನ್ಸ್‌ಟೇಬಲ್.!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img