Saturday, July 13, 2024
spot_img
spot_img
spot_img
spot_img
spot_img
spot_img

ತನಗೆ ಹೊಡೆಯಲು ಬಂದ ವ್ಯಕ್ತಿಯನ್ನು ಈ ಮುಗ್ದ ಹಸು ಮಾಡಿದ್ದೇನು ಗೋತ್ತೇ.? ಈ Videio ನೋಡಿ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸುಖಾ ಸುಮ್ಮನೆ ತಮ್ಮ ತಂಟೆಗೆ ಯಾರಾದ್ರೂ ಬಂದ್ರೆ ಎಂತಹ ಸಾದು ಪ್ರಾಣಿಯಾದರೂ ಕೋಪಗೊಳ್ಳುತ್ತವೆ ಎನ್ನುವುದಕ್ಕೆ ಜೀವಂತ ಉದಾಹರಣೆ ಎನ್ನುವಂತಹ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸಾದು ಪ್ರಾಣಿಯು ಸಹ ತಮ್ಮ ತಂಟೆಗೆ ಯಾರೇ ಬಂದರೂ ಅವರ ಮೇಲೆ ದಾಳಿ ನಡೆಸುತ್ತವೆ.

ಕಾಡು ಪ್ರಾಣಿಗಳೇ ಆಗಿರಲಿ ಅಥವಾ ಸಾಕು ಪ್ರಾಣಿಗಳೇ ಆಗಿರಲಿ ಅವುಗಳ ಸ್ವಭಾವ ನಡತೆಯನ್ನು ತಕ್ಷಣಕ್ಕೆ ಹೀಗೆ ಎಂದು ಹೇಳುವುದು ತೀರಾ ಕಷ್ಟ. ಕೆಲವೊಂದು ಬಾರಿ ಸಾದು ಪ್ರಾಣಿಗಳೂ ಕೂಡಾ ವೈಲೆಂಟ್‌ ಆಗುತ್ತವೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ.

ಇದನ್ನೂ ಓದಿ : ಈ ವಿಚಾರಗಳ ಬಗ್ಗೆ ಗಂಡನ ಹತ್ತಿರ ಎಂದು ಬಾಯಿ ಬಿಡಲ್ವಂತೆ ಹೆಂಡತಿ.!

ವಿಡಿಯೋದಲ್ಲೇನಿದೆ.?

ತನ್ನಷ್ಟಕ್ಕೆ ತಾನು ದಾರಿಯಲ್ಲಿ ಹಸು ಒಂದು ಹೋಗುತ್ತಿದೆ. ಆ ವೇಳೆ ಓರ್ವ ಮಧ್ಯವಯಸ್ಸಿನ ವ್ಯಕ್ತಿ ಕೈಯಲ್ಲಿ ದೊಣ್ಣೆ (ಕಟ್ಟಿಗೆ) ಯನ್ನು ಹಿಡಿದು ಆ ಹುಸುವಿಗೆ ಹೊಡೆಯಲು ಹೋಗಿದ್ದಾನೆ. ಆ ವ್ಯಕ್ತಿ ಬರುವುದನ್ನು ಗಮನಿಸಿದ ಹಸು ಒಮ್ಮೆಗೆ ವೈಲೆಂಟ್‌ ಆಗಿ ಬಿಟ್ಟಿದೆ. ನೀನು ನನ್ನನ್ನು ಹೊಡೆಯಲು ಬರುತ್ತಿಯಾ ಅಂದದ್ದೆ ಕೊಂಬಿನಿಂದ ತಿವಿದು ಎತ್ತಿ ಬಿಸಾಕಿದೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ವಿಡಿಯೋವನ್ನು ಶುಭಾಂಗಿ ಪಂಡಿತ್‌ (Babymishra_) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ಕೈಯಲ್ಲಿ ದೊಣ್ಣೆಯನ್ನು ಎತ್ತಿಕೊಂಡು ಬಂದು ತನ್ನ ಪಾಡಿಗೆ ನಿಂತಿದ್ದ ಹಸುವಿನ ಮೇಲೆ ಹೊಡೆಯಲು ಬರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ : KRCL : ಕೊಂಕಣ್ ರೈಲ್ವೇಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

ಹೀಗೆ ಹಿಂದಿನಿಂದ ಬಂದು ಆ ವ್ಯಕ್ತಿ ಹಸುವಿಗೆ ಜೋರಾಗಿ ಹೊಡೆಯುತ್ತಾನೆ. ನೋವನ್ನು ತಾಳಲಾರದೆ ಹಸು ಮಗ್ನೇ ಸುಖಾ ಸುಮ್ಮನೆ ನನಗೆ ಹೊಡಿತೀಯಾ ಎನ್ನುತ್ತಾ ಆತನ ಬಳಿ ನುಗ್ಗಿ ಕೊಂಬಿನಿಂದ ತಿವಿದು ಆ ವ್ಯಕ್ತಿಯನ್ನು ಎತ್ತಿ ಬಿಸಾಡಿದೆ.

ಜೂನ್‌ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.3 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹಸುವಿಗೆ ಹೊಡೆದಿದ್ದಕ್ಕೆ ಆತನಿಗೆ ತಕ್ಕ ಶಾಸ್ತಿಯಾಗಿದೆ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

spot_img
spot_img
- Advertisment -spot_img