Sunday, December 8, 2024
HomeSpecial NewsBPL ರೇಷನ್‌ ಕಾರ್ಡ್‌ ರದ್ದತಿಯ ಬಗ್ಗೆ ಆಹಾರ ಸಚಿವರು ಹೇಳಿದ್ದೇನು.?
spot_img

BPL ರೇಷನ್‌ ಕಾರ್ಡ್‌ ರದ್ದತಿಯ ಬಗ್ಗೆ ಆಹಾರ ಸಚಿವರು ಹೇಳಿದ್ದೇನು.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ಸುದ್ದಿ, ಬೆಂಗಳೂರು : ಬಡವರ ಬದುಕಿಗೆ ಆಧಾರವಾಗಿರುವ ಬಿಪಿಎಲ್ (BPL) ಪಡಿತರ ಚೀಟಿ ರದ್ದತಿ ರಾಜ್ಯಾದ್ಯಂತ ಗೊಂದಲ ಮೂಡಿಸಿದೆ. ಬಿಪಿಎಲ್ ಪಡಿತರ ಚೀಟಿ ರದ್ದತಿಯಿಂದ ಕೆಲ ಅರ್ಹ (eligible) ಫಲಾನುಭವಿಗಳು ಕಂಗಾಲಾಗಿದ್ದಾರೆ. Cancel ಆದ ಕಾರ್ಡ್‌ಗಳ ಪಟ್ಟಿ ನೋಡಿ ಪಡಿತರ ಅಂಗಡಿಗೆ ಬಂದವರು ಅಳಲು ತೋಡಿಕೊಂಡಿದ್ದಾರೆ.

ಆಹಾರ ಸಚಿವ ಕೆ.ಎಚ್. ಮುನಿಯಪ್ಪ (K.H. Muniyappa) ಅವರು ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಬಿಪಿಎಲ್ ಕಾರ್ಡ್ ಆಗಲಿ, ಎಪಿಎಲ್ ಕಾರ್ಡ್ ಆಗಲಿ ಯಾವುದೇ ಕಾರ್ಡ್ ರದ್ದು (No any one card canceled) ಮಾಡಿಲ್ಲ.

ಇದನ್ನು ಓದಿ : Special news : ಯಾವುದೇ ಪ್ರಯೋಗಗಳನ್ನು ಮನುಷ್ಯರಿಗಿಂತ ಮುಂಚೆ ಇಲಿಗಳ ಮೇಲೆ ಮಾಡುವುದೇಕೆ.?

ಬಿಪಿಎಲ್ ಕಾರ್ಡ್‌ ಪಡೆದವರಲ್ಲಿ ಅರ್ಹತೆ ಇಲ್ಲದವರಲ್ಲಿ ಶೇ.20-25ರಷ್ಟು ಮಂದಿ ಸೇರಿದ್ದಾರೆ. ಅಂದರೆ ಬಡವರಲ್ಲದವರು, ಅರ್ಹತೆ ಇಲ್ಲದವರೂ ಸೇರಿಕೊಂಡಿದ್ದಾರೆ. ಜನರು ಭಯಪಡುವ ಅಗತ್ಯವಿಲ್ಲ, ಯಾವುದೇ ಕಾರ್ಡ್ ರದ್ದು ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಸಂಪೂರ್ಣ ಪರಿಷ್ಕರಣೆ : 

ಈಗ ಬಿಪಿಎಲ್‌ಗೆ ಅರ್ಹತೆ ಇಲ್ಲದವರೂ ಎಪಿಎಲ್‌ನಲ್ಲಿರುತ್ತಾರೆ. ಯಾರಾದರೂ ಬಿಪಿಎಲ್ ಕಾರ್ಡ್ ಕಳೆದುಕೊಂಡರೆ ಮತ್ತೆ ಸೇರಿಸುತ್ತೇವೆ. ಯಾರೂ ಭಯಪಡುವ ( worry about) ಅಗತ್ಯವಿಲ್ಲ. ಯಾವುದೇ ಕಾರ್ಡ್ ರದ್ದುಗೊಳ್ಳುವುದಿಲ್ಲ.

ಇದನ್ನು ಓದಿ : ನೋ ಕೇಬಲ್, ನೋ ಸೆಟ್ಟಾಪ್ ಬಾಕ್ಸ್, ; ಉಚಿತ 500 ಚಾನೆಲ್ ಟಿವಿ ಸರ್ವೀಸ್ BSNL ನಿಂದ.!

ಮುಂದಿನ 15-20 ದಿನಗಳಲ್ಲಿ ಬಿಪಿಎಲ್ ಕಾರ್ಡ್ ಅನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗುವುದು (revised). ಹೊಸ ಕಾರ್ಡ್ ಕೂಡ ನೀಡಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ಸಿಎಂ ಹೇಳಿದ್ದೇನು?

ಬಿಪಿಎಲ್ ಪಡಿತರ ಚೀಟಿ ರದ್ದು ವಿಚಾರಕ್ಕೂ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯೆ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ಬಗ್ಗೆ ಬಡವರು ಆತಂಕ ಪಡುವ ಅಗತ್ಯವಿಲ್ಲ. ಅರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ (BPL cards of the eligible ones) ಮುನಿಯಪ್ಪ ಅವರಿಗೆ ಸೂಚಿಸಿದ್ದೇನೆ.

ಇದನ್ನು ಓದಿ : ರಾತ್ರಿ ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲು ಸೇವಿಸುವುದರಿಂದ ಆಗುವ benefits ಗೊತ್ತೇ.?

ಬಡವರಿ (the poor) ಗೆ ಯಾವುದೇ ಕಾರಣಕ್ಕೂ ಕಾರ್ಡ್ ರದ್ದು ಮಾಡಬಾರದು. ಬಿಪಿಎಲ್ ನವರು ಬಿಟ್ಟರೆ ಅರ್ಜಿ ಸಲ್ಲಿಸಿದರೆ ಕಾರ್ಡ್ ಕೊಡುತ್ತೇವೆ. ನಮ್ಮ ಸರ್ಕಾರ (Govt) ಯಾವಾಗಲೂ ಬಡವರ ಪರವಾಗಿರುತ್ತದೆ ಎಂದು CM ಸಿದ್ದರಾಮಯ್ಯ ಹೇಳಿದರು.

ಹಿಂದಿನ ಸುದ್ದಿ : Special news : ಯಾವುದೇ ಪ್ರಯೋಗಗಳನ್ನು ಮನುಷ್ಯರಿಗಿಂತ ಮುಂಚೆ ಇಲಿಗಳ ಮೇಲೆ ಮಾಡುವುದೇಕೆ.?

ಜನಸ್ಪಂದನ ನ್ಯೂಸ್, ಡೆಸ್ಕ್ : ವಿಜ್ಞಾನಿಗಳು (Scientists), ಈ ಜಗತ್ತಿನಲ್ಲಿ ಭೂಮಿಯ ಮೇಲೆ ಲಕ್ಷಾಂತರ ಜೀವಿಗಳಿದ್ದರೂ ಸಹ ಯಾವುದೇ ಪ್ರಯೋಗಗಳನ್ನು (experiments) ನಡೆಸಬೇಕಾದರೆ ಇಲಿಗಳನ್ನು ಏಕೆ ಬಳಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮನುಷ್ಯನ ಮೇಲೆ ಯಾವುದೇ ಪ್ರಯೋಗವನ್ನು ಮಾಡುವ ಮೊದಲು ವಿಜ್ಞಾನಿಗಳು ಅದನ್ನು ಇಲಿಗಳ (rat) ಮೇಲೆ ಪ್ರಯೋಗಿಸುತ್ತಾರೆ.

ಮನುಷ್ಯ ಮತ್ತು ಇಲಿ ಪರಸ್ಪರ ಭಿನ್ನವಾಗಿದ್ದರೂ (Although different from each other), ಅವುಗಳ ಜೀನೋಮ್ ಗಳಲ್ಲಿ ಅನೇಕ ಹೋಲಿಕೆಗಳಿವೆ. ವಿಜ್ಞಾನಿಗಳು ಸಹ ಇಲಿ ಮತ್ತು ಮಾನವನ ಡಿಎನ್‌ಎ ಹೆಚ್ಚಿನ ಪ್ರಮಾಣದಲ್ಲಿ ಹೋಲುತ್ತದೆ ಎಂದು ತಿಳಿಸುತ್ತಾರೆ.

 

ಇಲಿಗಳು ಮತ್ತು ಮನುಷ್ಯರ ಮೆದುಳಿನ ರಚನೆ, ಪ್ರತಿರಕ್ಷಣಾ ವ್ಯವಸ್ಥೆ (Immune system), ಹಾರ್ಮೋನ್ ವ್ಯವಸ್ಥೆ (hormone system) ಮತ್ತು ಅಂಗಗಳ ಕಾರ್ಯಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಸಾಮ್ಯತೆ ಇದೆ. ಹೀಗಾಗಿ ಪ್ರಯೋಗದ ಫಲಿತಾಂಶಗಳು ಮಾನವ ದೇಹದ ಮೇಲೆ ಹೇಗೆ ಪರಿಣಾಮ (effect) ಬೀರುತ್ತವೆ ಎಂಬುದನ್ನು ಇದರಿಂದ ತಿಳಿದುಕೊಳ್ಳಲು ಸಾಧ್ಯ. ಆದರಿಂದಾಗಿ ಮಾನವರ ಮೇಲೆ ಪ್ರಯೋಗ ಮಾಡುವ ಮೊದಲು ಇಲಿಗಳ ಮೇಲೆ ಪ್ರಯೋಗಗಳನ್ನು ಮಾಡಲು ಇದು ಕಾರಣ ಎನ್ನಬಹುದು.

 

 

ಇಲಿಗಳನ್ನು ಪ್ರಯೋಗಗಳಿಗೆ ಬಳಸಲು ಇನ್ನೊಂದು ಕಾರಣ ಅವುಗಳ ಜೀವಿತಾವಧಿ. ಇಲಿಗಳ ಜೀವಿತಾವಧಿ (lifetime) ಚಿಕ್ಕದಾಗಿದ್ದು, ಅವು ವೇಗವಾಗಿ ಸಂತಾನೋತ್ಪತ್ತಿ (Breeding) ಮಾಡುತ್ತವೆಯಂತೆ.

 

 

ಅಲ್ಲದೇ ಪ್ರಯೋಗಾಲಯದಲ್ಲಿ ಇಲಿಗಳು ನಿಯಂತ್ರಿತ ಪರಿಸರದಲ್ಲಿ (Controlled environment) ಇರಿಸಬಹುದಾದ ಜೀವಿಗಳಾಗಿವೆ. ಅವುಗಳ ಜೀವನಶೈಲಿ, ಆಹಾರ, ಮತ್ತು ನಡವಳಿಕೆಯ ಎಲ್ಲಾ ಅಂಶಗಳನ್ನು ಸುಲಭವಾಗಿ ತಿಳಿಯಬಹುದು. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ (laboratory) ಇಲಿಗಳನ್ನು ಬಳಸುವುದಕ್ಕೆ ಇನ್ನೊಂದು ಕಾರಣವಿದೆ. ಇಲಿಗಳ ಮೇಲೆ ಯಾವುದೇ ಪ್ರಯೋಗದ ಪರಿಣಾಮವು ತುಂಬಾ ವೇಗವಾಗಿರುತ್ತದೆಯಂತೆ.

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments