ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ನಡಿಗೆಯ ಶೈಲಿಯು ವ್ಯಕ್ತಿತ್ವದ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ ಎಂಬ ಮಾತಿದೆ. ಇದು ಅಕ್ಷರಶಃ ನಿಜ. ಸಾಮಾನ್ಯವಾಗಿ, ಒಬ್ಬರ ವ್ಯಕ್ತಿತ್ವವನ್ನು ಅವರ ನಡವಳಿಕೆಯಿಂದ ನಿರ್ಣಯಿಸಬಹುದು ಎಂದು ಅನೇಕ ಜನರು ಭಾವಿಸುತ್ತಾರೆ.
ವಾಕಿಂಗ್ ಸ್ಟೈಲ್ ಮೂಲಕ ನಿಮ್ಮ ವ್ಯಕ್ತಿತ್ವವನ್ನು ನೀವು ತಿಳಿದುಕೊಳ್ಳಬಹುದು ಅನ್ನೋದನ್ನು ನೀವು ನಂಬುತ್ತೀರಾ. ಹೌದು ಅಂತಾರೆ ಜರ್ಮನ್ ಮನಶ್ಶಾಸ್ತ್ರಜ್ಞ ವರ್ನರ್ ವುಲ್ಫ್.
ಇದನ್ನು ಓದಿ : ಅಕ್ರಮ ಸಂಬಂಧದ ಶಂಕೆ ; Drone ಕ್ಯಾಮೆರಾ ಬಳಸಿ ಪತ್ನಿಯ ಕಳ್ಳಾಟ ಪತ್ತೆ ಹಚ್ಚಿದ ಪತಿರಾಯ.!
ನಡಿಗೆಯ ಮೂಲಕ ವ್ಯಕ್ತಿತ್ವದ ಅಭಿವ್ಯಕ್ತಿಯ ಕುರಿತಾದ 1935 ರ ಆರಂಭಿಕ ಅಧ್ಯಯನವು ಈ ಮಾತನ್ನು ದೃಢಪಡಿಸಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ವರ್ನರ್ ವೋಲ್ಫ್ ಕೆಲವರ ನಡಿಗೆಯ ಶೈಲಿಯನ್ನೂ ಗಮನಿಸಿ ಅವರಲ್ಲಿ ಎಂತಹ ವ್ಯಕ್ತಿತ್ವವಿದೆ ಎಂದು ತಿಳಿಸಿದ್ದಾರೆ.
ವೇಗವಾಗಿ ನಡೆಯುವವರು :
ವೇಗವಾಗಿ ನಡೆಯುವ ಜನರು ಬಹಿರ್ಮುಖಿಗಳು. ಹೊಸ ವಿಷಯಗಳನ್ನು ಕಲಿಯಲು ಸದಾ ಸಿದ್ಧ. ವಿಶೇಷವಾಗಿ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವವರು. ಅಲ್ಲದೆ ಸುತ್ತಮುತ್ತಲಿನ ಜನರೊಂದಿಗೆ ಸುಲಭವಾಗಿ ಬೆರೆಯುತ್ತಾರೆ.
ದೈನಂದಿನ ಕಾರ್ಯಗಳನ್ನು ತ್ವರಿತವಾಗಿ ಮಾಡಲು ಅವರು ಆಸಕ್ತಿ ತೋರಿಸುತ್ತಾರೆ. ಈ ನಡಿಗೆ ಶೈಲಿ ಹೊಂದಿರುವ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾಚಿಕೆ ಅಥವಾ ಹಿಂಜರಿಯುವುದಿಲ್ಲ.
ನಿಧಾನವಾಗಿ ನಡೆಯುವವರು :
ನಿಧಾನವಾಗಿ ನಡೆಯುವುದು ಅಂದರೆ ಸಣ್ಣ ಹೆಜ್ಜೆಗಳನ್ನು ಇಡುತ್ತಿದ್ದರೆ ಮತ್ತು ನಡೆಯುವಾಗ ಭುಜ ಮತ್ತು ತಲೆ ನೇರವಾಗಿದ್ದರೆ ಅಂತವರು ಶಾಂತ ಚಿತ್ತರು ಅಂತಾನೇ ಅರ್ಥ. ಅಷ್ಟೇ ಏಕೆ ಈ ಗುಣಲಕ್ಷಣಗಳು ಇದ್ದರೆ ಆಕರ್ಷಕ ಮತ್ತು ಹಾಸ್ಯದ ವ್ಯಕ್ತಿತ್ವವನ್ನು ಹೊಂದಿರುತ್ತೀರಿ ಎಂದು ಮನಶ್ಶಾಸ್ತ್ರಜ್ಞ ವುಲ್ಫ್ ಹೇಳುತ್ತಾರೆ.
ಈ ವಾಕಿಂಗ್ ಶೈಲಿಯನ್ನು ಹೊಂದಿರುವ ಜನರು ಸಾಮಾಜಿಕವಾಗಿ ಇತರರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಆದರೆ, ಅಂತಹ ಜನರೊಂದಿಗೆ ಸ್ನೇಹ ಮಾಡುವುದು ಅಷ್ಟು ಸುಲಭವಲ್ಲ. ಏಕೆಂದರೆ ಅವರು ಬಹಳ ಚಿಂತನಶೀಲರು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ.
ಅದೇ ರೀತಿ ಅವರು ಯಾವಾಗಲೂ ಹೊಸದನ್ನು ಕಲಿಯಲು ಬಯಸುತ್ತಾರೆ ಅನ್ನೋದು ವುಲ್ಫ್ ಅವರ ಅಭಿಮತವಾಗಿದೆ. ಹಾಗೆಯೇ ಅವರಿಗೆ ಸ್ವಲ್ಪ ಬೇಜಾರಾಗುತ್ತದೆ, ಅದೇ ತಪ್ಪುಗಳನ್ನು ಪದೇ ಪದೇ ಪುನರಾವರ್ತಿಸಲು ಅವರು ಇಷ್ಟಪಡುವುದಿಲ್ಲ.
ಇದನ್ನು ಓದಿ : ಫೋಸ್ಟ್ ಆಫೀಸ್ ನಲ್ಲಿ 30,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಭರ್ತಿ ; 10ನೇ ತರಗತಿ ಪಾಸಾಗಿದ್ದರೆ ಸಾಕು.!
ಕ್ಷಿಪ್ರವಾಗಿ ನಡೆಯುವವರು :
ಇವರು ರಿಸ್ಕ್ ತೆಗೆದುಕೊಳ್ಳಲು ಹೆದರುವುದಿಲ್ಲ. ತಮ್ಮ ಗುರಿಗಳನ್ನು ವೇಗವಾಗಿ ತಲುಪಲು ನಿರ್ಧರಿಸುತ್ತಾರೆ. ಅವರು ದಿಟ್ಟ ಮತ್ತು ಮುಕ್ತ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಂತಹವರ ವೇಗವನ್ನು ಗೆಳೆಯರು ಸರಿಗಟ್ಟಲಾರರು. ಈ ಜನರ ನಂಬಿಕೆ ಮತ್ತು ಕ್ರಿಯಾಶೀಲತೆಯಿಂದ ಕೂಡಿರುತ್ತಾರೆ. ನಕಾರಾತ್ಮಕ ಅಂಶಗಳು ಅವರ ಬಳಿಯೂ ಸುಳಿಯುವುದಿಲ್ಲ.
ತಲೆ ತಗ್ಗಿಸಿ ನಡೆಯುವವರು :
ಇವರು ಅಂತರ್ಮುಖಿ, ಆತಂಕ, ದುರ್ಬಲ ಮನಸ್ಸಿನ, ದುಃಖ, ಭಯ ಮತ್ತು ಆಗಾಗ್ಗೆ ಹಿಂದಿನ ತಪ್ಪುಗಳ ಬಗ್ಗೆ ಯೋಚಿಸುತ್ತಲೇ ಇರುತ್ತಾರಂತೆ. ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಾರೆ. ಇಂತವರು ಆತ್ಮಸ್ಥೈರ್ಯ ಕಳೆದುಕೊಳ್ಳಬಹುದು ಎಂದೂ ಹೇಳಲಾಗುತ್ತದೆ.