ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಲವರ್ಸ್ ಜಗಳ, ಗಲಾಟೆ ನಡೆಸುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸದ್ಯ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವನಿಗೆ ಅದೇ ವಿಮಾನದಲ್ಲಿ ಆತನ ಗರ್ಲ್‌ಫ್ರೆಂಡ್ ಬೇರೊಬ್ಬನ ಜೊತೆ ಕುಳಿತು ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಸಿಟ್ಟಿಗೆದ್ದ ಯುವಕ ವಿಮಾನದಲ್ಲೇ ಜಗಳ ಶುರು ಮಾಡಿದ್ದಾನೆ.
ಯುವತಿ ಹಾಗೂ ಯುವತಿಯ ಇಬ್ಬರು ಬಾಯ್‌ಫ್ರೆಂಡ್ಸ್ ನಡುವಿನ ಈ ಗಲಾಟೆ, ಗದ್ದಲದಿಂದ ಏರ್‌ಲೈನ್ಸ್ ಸಿಬ್ಬಂದಿ ಕಂಗಾಲಾಗಿದ್ದು, ಜಗಳ ಬಿಡಿಸಲು ಹರಸಾಹಸ ಪಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : ವರ ಮಾಡಿದ ಈ ಕೆಲಸಕ್ಕೆ ಮಂಟಪದಲ್ಲೇ ಕಪಾಳಮೋಕ್ಷ ಮಾಡಿದ ವಧು; ವಿಡಿಯೋ Viral.!
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಹಳೆ ಬಾಯ್‌ಫ್ರೆಂಡ್, ತನ್ನ ಮೊಬೈಲ್‌ನಲ್ಲಿದ್ದ ಫೋಟೋ ತೆಗೆದು ಹುಡುಗಿ ಪಕ್ಕ ಇದ್ದ ಆಕೆಯ ಹೊಸ ಬಾಯ್‌ಫ್ರೆಂಡ್‌ಗೆ ತೋರಿಸಿದ್ದಾನೆ. ಇದನ್ನು ಕಂಡ ಹೊಸ ಬಾಯ್‌ಫ್ರೆಂಡ್ ಕೋಪಗೊಂಡಿದ್ದು, ಇದೇನಿದು ಎಂದು ಆಕೆಯನ್ನು ಕೇಳುತ್ತಾನೆ.
ಇದಕ್ಕೆ ಯುವತಿ ಗಲಿಬಿಲಿಗೊಂಡು ಅದು ನನ್ನ ಫೋಟೋ ಅಲ್ಲ ಎಂದು ಸಮರ್ಥಿಸಿಕೊಳ್ಳುವ ಸಲುವಾಗಿ ಆತನ ಕೈ ಹಿಡಿದುಕೊಳ್ಳುತ್ತಾಳೆ. ಆದರೆ ಕೈ ಕೊಡವಿಕೊಂಡ ಇದೇನಿದು ಹೇಳು ಎಂದು ಪ್ರಶ್ನಿಸುತ್ತಾನೆ.
ಅದಕ್ಕೆ ಆಕೆ ಅದು ನನ್ನ ಫೋಟೋ ಅಲ್ಲ ಎಡಿಟೆಡ್ ಫೋಟೋ ಎಂದು ಹೊಸ ಗೆಳೆಯನನ್ನು ಸಮಾಧಾನಪಡಿಸಲು ಯತ್ನಿಸಿದ್ದರೆ, ಅತ್ತ ಆಕೆಯ ಹಾಲಿ ಬಾಯ್‌ಫ್ರೆಂಡ್ ಹೌದಾ, ಇದು ಎಡಿಟೆಡ್ಡಾ, ಹಾಗಾದ್ರೆ ಇದೇನು? ಇದೇನು ಎಂದು ಆತನ ಮೊಬೈಲ್‌ನಲ್ಲಿ ಅವರಿಬ್ಬರಿದ್ದ ಒಂದೊಂದೇ ಫೋಟೋಗಳನ್ನು ತೋರಿಸುತ್ತಾನೆ.
ಇದನ್ನು ಓದಿ : Health : ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸ್ಪೂನ್ ತುಪ್ಪ ತಿನ್ನಬೇಕು.? ಜಾಸ್ತಿ ತಿಂದ್ರೆ ಏನಾಗುತ್ತೆ ಗೊತ್ತಾ.?
ನಿನಗಿಂತಲೂ ಮೊದಲು ಆಕೆ ನನ್ನ ಜೊತೆಗೆ ಇದ್ದಳು ಎಂದು ಹಳೆ ಬಾಯ್‌ಫ್ರೆಂಡ್ ಹೇಳಿದ್ದಾನೆ. ಹೀಗೆ ಇಬ್ಬರೂ ಯುವಕರು ಸೇರಿ ಯುವತಿಗೆ ವಿಮಾನದಲ್ಲೇ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಳಿಕ ನೀನು ಸುಳ್ಳು ಕೇವಲ ಸುಳ್ಳು ಹೇಳ್ತಿಯಾ ಎಂದು ಹೊಸ ಬಾಯ್‌ಫ್ರೆಂಡ್ ಹೇಳುತ್ತಿದ್ದರೆ, ಅತ್ತ ಹಳೆ ಬಾಯ್‌ಫ್ರೆಂಡ್ ಆತ ನಿನ್ನ ಬಾಯ್‌ಫ್ರೆಂಡ್ ಆಗಿದ್ದರೆ ಅಂತ ಆಕೆ ಕೇಳಿದ್ದಾನೆ. ಅದಕ್ಕೆ ಆಕೆ ಅದು ನನ್ನ ವೈಯಕ್ತಿಕ ವಿಚಾರ ಎಂದಿದ್ದಾಳೆ. ಅಲ್ಲದೇ ಹೊಸ ಗೆಳೆಯನನ್ನು ಕರೆದುಕೊಂಡು ಮತ್ತೆ ಅದೇ ಸೀಟಿನಲ್ಲಿ ಇಬ್ಬರು ಕೂತಿದ್ದಾರೆ.
ಇದನ್ನು ಓದಿ : ಮೈಕ್ರೋಸ್ಕೋಪ್‌ನಲ್ಲಿ ನವಿಲು ಗರಿ ಹೇಗೆ ಕಾಣಿಸುತ್ತೆ.? Video ನೋಡಿದ್ರೆ wow ಅಂತೀರಾ.!
ಇಷ್ಟೆಲ್ಲಾವನ್ನು ನೋಡಿದ ವಿಮಾನದ ಸಿಬ್ಬಂದಿ ಯುವಕನಿಗೆ ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಕ್ಷಮಿಸಿ ತೊಂದರೆ ಮಾಡಿದ್ದಕ್ಕೆ ಎಂದು ಹೇಳಿ ಆತ ಸೀಟಿನಲ್ಲಿ ಹೋಗಿ ಕುಳಿತಿದ್ದಾನೆ. ಈ ವೇಳೆ ಆತನ ಪಕ್ಕ ಇರುವ ಸೀಟಿನಲ್ಲಿ ನಾನು ಕೂರಬಹುದೇ ಎಂದು ವಿಮಾನದ ಗಗನಸಖಿಯನ್ನು ಯುವತಿಯ ಹೊಸ ಬಾಯ್‌ಫ್ರೆಂಡ್ ಕೇಳಿದ್ದು, ನಂತರ ಗಗನಸಖಿ ಇಬ್ಬರಿಗೂ ಅಕ್ಕಪಕ್ಕದಲ್ಲಿ ಸೀಟು ಕೊಟ್ಟಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಪ್ಲೈಯಿಂಗ್ ಇನ್ಸ್ಟಿಟ್ಯೂಟ್ ನಾಗಪುರ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ..
View this post on Instagram