Sunday, September 15, 2024
spot_img
spot_img
spot_img
spot_img
spot_img
spot_img
spot_img

Video : ಪಾತ್ರೆ ತೊಳೆದಂತೆ ಪಿಸ್ತೂಲ್ ತೊಳೆದ ಮಹಿಳೆ; ಮುಂದೆನಾಯ್ತು.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ರಿರುತ್ತವೆ. ಅದರಲ್ಲಿ ಕೆಲವೊಂದು ಒಳ್ಳೆಯ ಸಂದೇಶ ನೀಡಿದರೆ ಕೆಲವೊಂದು ಕೆಟ್ಟ ಪರಿಣಾಮಗಳನ್ನು ಬೀರುತ್ತವೆ.

ಸಧ್ಯ ಮಹಿಳೆಯೊಬ್ಬಳು ಪಾತ್ರೆ ತೊಳೆಯುವಂತೆ ಪಿಸ್ತೂಲ್‌ಗಳನ್ನು ನೀರಿನಲ್ಲಿ ತೊಳೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಭಾರಿ ಅಕ್ರಮವೊಂದು ಬಯಲಾಗಿದೆ.

ಪೊಲೀಸರು ಈ ವಿಡಿಯೋ ಆಧರಿಸಿ ದಾಳಿ ನಡೆಸಿ ಅಕ್ರಮ ಪಿಸ್ತೂಲ್ ಕಾರ್ಖಾನೆಗೆ ಬೀಗ ಹಾಕಿದ ಘಟನೆ ಮಧ್ಯಪ್ರದೇಶದ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : Health : ಶೇಂಗಾವನ್ನು ನೆನಸಿಟ್ಟು ತಿನ್ನವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.?

ಕಾರ್ಖಾನೆಯಲ್ಲಿದ್ದ ಹಲವು ಪಿಸ್ತೂಲ್‌, ಮದ್ದುಗುಂಡು ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿದ್ದಾರೆ.

ಪಿಸ್ತೂಲ್ ತೊಳೆಯುತ್ತಿರುವ ಮಹಿಳೆಯ ಪತಿ ಶಕ್ತಿ ಕಪೂರ್ ಶಾಖಾವರ್ ಮಾವ ಬಿಹಾರಿಲಾಲ್ ಶಾಖಾವಾರ್ ಇಬ್ಬರು ಜೊತೆ ಸೇರಿ ಈ ಅಕ್ರಮ ಕಾರ್ಖಾನೆ ನಡೆಸುತ್ತಿದ್ದರು.

ಇಲ್ಲಿ ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಸಹ ತಯಾರಿಸಲಾಗುತಿತ್ತು. ಈ ಪಿಸ್ತೂಲ್‌ಗಳು ಅಕ್ರಮವಾಗಿ ಮಾರಾಟವಾಗುತ್ತಿತ್ತು. ಕಡಿಮೆ ಮೊತ್ತಕ್ಕೆ ಪಿಸ್ತೂಲ್ ಸಿಗುವ ಕಾರಣ ಇವರ ಪಿಸ್ತೂಲ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಅಕ್ರಮಗಳಿಗೆ ಈ ಪಿಸ್ತೂಲ್‌ಗಳನ್ನು ಬಳಕೆ ಮಾಡಲಾಗುತ್ತಿತ್ತು.

ಇದನ್ನು ಓದಿ : Video : ಮಕ್ಕಳಿಗೆ ಮೊಟ್ಟೆ ಕೊಟ್ಟು ವಾಪಸ್ ಕಿತ್ತುಕೊಂಡ ಅಂಗನವಾಡಿ ಸಿಬ್ಬಂದಿಗಳಿಬ್ಬರು ಸಸ್ಪೆಂಡ್.!

ಯಾವುದೇ ರೀತಿ ಗುರುತು ಸಿಗದಂತೆ, ಎಲ್ಲಿ ತಯಾರಾಗಿದೆ ಅನ್ನೋ ಸುಳಿವು ಸಿಗದಂತೆ ಕಂಟ್ರಿ ಪಿಸ್ತೂಲ್‌ಗಳನ್ನು ಇಲ್ಲಿ ತಯಾರಿಸಲಾಗುತ್ತಿತ್ತು. ಶಕ್ತಿ ಕಪೂರ್ ಶಾಖಾವರ್ ಪತ್ನಿ ಕೂಡ ಇದೇ ಅಕ್ರಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿ ತಿಳಿಸಿದೆ.

ಪಿಸ್ತೂಲ್‌ಗಳು ಪಳಪಳ ಹೊಳೆಯಲು ಬ್ರಶ್ ಬಳಸಿ ನೀರಿನಲ್ಲಿ ತೊಳೆಯುವುದು ಇಲ್ಲಿ ಸಾಮಾನ್ಯವಾಗಿದೆ. ಆದರೆ ಈ ವಿಡಿಯೋವನ್ನು ಸೀಕ್ರೇಟ್ ಆಗಿ ಸೆರೆಹಿಡಿಯಲಾಗಿತ್ತು.

ವಿಡಿಯೋ ಹೊರಬರುತ್ತಿದ್ದಂತೆ ಮಧುವಾ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಮೊದಲಿಗೆ ಈ ವಿಡಿಯೋ ಅಸಲಿಯೇ ಅಥವಾ ನಕಲಿಯೇ ಎಂದು ಪರಿಶೀಲಿಸಿದ್ದಾರೆ. ಬಳಿಕ ಈ ವಿಡಿಯೋದ ಕುರಿತು ತನಿಖೆ ನಡೆಸಿ ನೇರವಾಗಿ ಅಕ್ರಮ ಕಾರ್ಖಾನೆಗೆ ದಾಳಿ ನಡೆಸಿದ್ದಾರೆ.

ಇದನ್ನು ಓದಿ : ನಿಮ್ಮ ಸ್ಮಾರ್ಟ್‌ಫೋನ್‌ Update ಮಾಡದಿದ್ದರೆ ಏನಾಗುತ್ತೆ.?

ದಾಳಿ ನಡೆಸಿ ಅಕ್ರಮ ಪಿಸ್ತೂಲ್‌ಗಳು, ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಧುವಾ ಪೊಲೀಸ್ ಇನ್ ಚಾರ್ಜ್ ಪವನ್ ಸಿಂಗ್ ಮಾಹಿತಿ ನೀಡಿದ್ದಾರೆ.

ಇದರ ಹಿಂದೆ ದೊಡ್ಡ ಜಾಲವೊಂದು ಕಾರ್ಯ ನಿರ್ವಹಿಸುತ್ತಿರುವ ಸಾಧ್ಯತೆ ಇದೆ. ಬಂಧಿತರ ವಿಚಾರಣೆ ಆರಂಭಗೊಂಡಿದ್ದು ಕೆಲ ಸ್ಫೋಟಕ ಮಾಹಿತಿಗಳು ಲಭ್ಯವಾಗಿರುವುದಾಗಿ ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img