ಜನಸ್ಪಂದನ ನ್ಯೂಸ್, ಡೆಸ್ಕ್ : ಲಂಚದ ಹಣವನ್ನು ಮೂವರು ಟ್ರಾಫಿಕ್ ಪೊಲೀಸರು ಕುಳಿತು ಹಂಚಿಕೊಳ್ಳುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ
ಈ ವಿಡಿಯೋ ವೈರಲ್ ಬೆನ್ನಲ್ಲೇ ಮೂವರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಈ ಒಂದು ನಂಬರ್ ಗೆ ಡಯಲ್ ಮಾಡಿದರೆ ಆಯ್ತು ಆ್ಯಕ್ಟಿವ್ ಆಗುತ್ತೆ BSNL ಸಿಮ್.!
ಸಂಚಾರಿ ಪೊಲೀಸರು ಗಾಜಿಪುರ ಪೊಲೀಸ್ ಠಾಣೆಯ ಕಲ್ಯಾಣ ಪುರಿ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಲೇ ಸಣ್ಣ ಶೆಡ್ ಮಾಡಿಕೊಂಡು ಅಲ್ಲಿ ವಾಹನ ಸವಾರರನ್ನು ದಾಖಲೆ ಪರಿಶೀಲನೆ ನೆಪದಲ್ಲಿ ಸುಲಿಗೆ ಮಾಡುತ್ತಿದ್ದರು. ಬಳಿಕ ಆ ಹಣವನ್ನು ಮೂವರು ಸಂಚಾರಿ ಪೊಲೀಸರು ಹಂಚಿಕೊಳ್ಳುತ್ತಿದ್ದರು.
ಅಲ್ಲದೆ ಇದಕ್ಕೆ ಪೂರಕ ಎಂಬಂತೆ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಈ ಮೂವರು ಸಂಚಾರಿ ಪೊಲೀಸರು ಹಣ ಹಂಚಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ತನಿಖೆ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿ ಮೂವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಇದನ್ನು ಓದಿ : ಉಚಿತ ಹೊಲಿಗೆ ಯಂತ್ರ ಪಡೆಯಲು ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ; ಇಲ್ಲಿದೆ ಡೈರೆಕ್ಟ್ link.!
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಹೇಳಿದ್ದಾರೆ.
दिल्ली ट्रैफिक पुलिस अधिकारी का रिश्वत लेते वीडियो वायरल
वीडियो गाजीपुर थाने के पास का बताया जा रहा है@DCPSouthDelhi @dtptraffic @CPDelhi @DelhiPolice @LtGovDelhi @DCPWestDelhi pic.twitter.com/QgROjCo80w
— The National Bulletin Hindi (@BulletinHindi) August 17, 2024