ಜನಸ್ಪಂದನ ನ್ಯೂಸ್, ಡೆಸ್ಕ್ : ಬಿಹಾರದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಕೋಸಿ, ಬಾಗಮತಿ ಸೇರಿದಂತೆ ರಾಜ್ಯದ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ.
ಸದ್ಯ ಕೋಸಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ನೀರಿನ ಉಗ್ರ ಸ್ವರೂಪ ನೋಡಿ ಕಂಡು ಸೇತುವೆ ಮೇಲಿದ್ದ ಜನರು ಓಡಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ : ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ದೈತ್ಯಾಕಾರದ ಹದ್ದು ; ಮೈ ನಡುಗಿಸುವ ವಿಡಿಯೋ Viral.!
ನದಿ ತುಂಬಿ ಹರಿಯುತ್ತಿದ್ದು ಅಲ್ಲಿನ ಸೇತುವೆಗೆ ತಾಗುತ್ತಿದೆ. ನೀರಿನ ಅಲೆ ಸೇತುವೆಯನ್ನು ತಾಗುತ್ತಿದ್ದಂತೆ ಸೇತುವೆ ಮೇಲಿದ್ದ ಜನರು ಭಯಗೊಂಡು ಕಿರುಚುತ್ತಾ ಓಡಿ ಹೋಗುವ ದೃಶ್ಯ ವಿಡಿಯೋದಲ್ಲಿ ನೋಡಬಹುದಾಗಿದೆ.
ಕೋಸಿ ಅಣೆಕಟ್ಟಿನ ನೀರಿನ ಮಟ್ಟ ಏರಿಕೆಯಿಂದಾಗಿ ನದಿಯು ಉಕ್ಕಿ ಹರಿಯುತ್ತಿದೆ.
ಈ ನಿಟ್ಟಿನಲ್ಲಿ ಸುಪೌಲ್, ಸಹರ್ಸಾ, ಮಾಧೇಪುರ, ಮಧುಬನಿ, ದರ್ಬಂಗಾ, ಖಗರಿಯಾ, ಭಾಗಲ್ಪುರ್, ಕತಿಹಾರ್ ಮತ್ತು ನವಗಚಿಯಾ ಆಸುಪಾಸಿನ ಪ್ರದೇಶದ ನಿವಾಸಿಗಳು ಅಣೆಕಟ್ಟಿನಿಂದ ಮತ್ತು ಜಿಲ್ಲಾಡಳಿತ ಹೊರಡಿಸಿದ ಹೈಅಲರ್ಟ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮನವಿ ಮಾಡುತ್ತೇನೆ ಎಂದು ರಾಜ್ಯಸಭಾ ಸಂಸದ ಮತ್ತು ಕಾಂಗ್ರೆಸ್ ವಕ್ತಾರ ರಂಜೀತ್ ರಂಜನ್ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : Health : ಡೊಳ್ಳು ಹೊಟ್ಟೆಯನ್ನು 1 ತಿಂಗಳಿನಲ್ಲಿ ಚಪ್ಪಟೆಯಾಗಿ ಮಾಡುತ್ತದೆ ಈ ಪದಾರ್ಥ.!
ಇನ್ನೂ ಭಾರತೀಯ ಹವಾಮಾನ ಇಲಾಖೆ ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ನೀಡಿದ್ದು, ಮುಂದಿನ ದಿನಗಳಲ್ಲಿ ಬಿಹಾರದಾದ್ಯಂತ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.
कोसी बांध का जलस्तर बढ़ने से नदी उफान पर है। इस संबंध में सुपौल, सहरसा, मधेपुरा, मधुबनी, दरभंगा, खगड़िया, भागलपुर, कटिहार और नवगछिया के सभी निवासियों से मेरी विनम्र अपील है कि बांध से दूर रहें और जिला प्रशासन द्वारा जारी हाई अलर्ट का सख्ती से अनुपालन करें। जरूरतमंदों की सहायता के… pic.twitter.com/28KJ6Ir2hv
— Ranjeet Ranjan (@Ranjeet4India) September 28, 2024