Monday, October 7, 2024
spot_img
spot_img
spot_img
spot_img
spot_img
spot_img
spot_img

ವಿಡಿಯೋ : ವೈದ್ಯರಲ್ಲ, ನಿಜವಾದ ದೇವರಿವರು; ಉಸಿರು ನಿಂತ ಮಗುವಿಗೆ ಮರುಜನ್ಮ ನೀಡಿದ Doctor.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ವೈದ್ಯರು ದೇವರಂತೆ ಬಂದು ಜೀವಗಳನ್ನು ಕಾಪಾಡಿದ ಅದೆಷ್ಟೋ ಘಟನೆಗಳನ್ನು ನಾವು ನೀವು ನೋಡಿರ್ತೀವಿ. ಹೀಗಾಗಿ ವೈದ್ಯೋ ನಾರಾಯಣ ಹರಿ ಎಂದು ಹೇಳೊದು.

ಈ ಮಾತಿಗೆ ಉತ್ತಮ ಉದಾಹರಣೆ ಎಂದರೆ ಅದು ಈ ಘಟನೆ. ವೈದ್ಯರೊಬ್ಬರು ಉಸಿರು ನೀಡುವ ಮೂಲಕ ನವಜಾತ ಶಿಶುವಿಗೆ ಮರು ಜೀವವನ್ನೇ ನೀಡಿದ್ದಾರೆ. ಉಸಿರು ನಿಂತು ಹೋದ ಮಗುವಿಗೆ ತಕ್ಷಣಕ್ಕೆ ಚಿಕಿತ್ಸೆ ನೀಡಿ ವೈದ್ಯರೊಬ್ಬರು ಆ ಮಗುವಿಗೆ ಮರು ಜೀವವನ್ನು ತುಂಬಿದ್ದಾರೆ.

ಈ ಕುರಿತ ವಿಡಿಯೋವೊಂದು ವೈರಲ್‌ ಆಗುತ್ತಿದ್ದು, ವೈದ್ಯರ ಈ ಕಾರ್ಯಕ್ಕೆ ನೆಟ್ಟಿಗರು ಭಾರೀ ಮೆಚ್ಚಿಕೊಂಡಿದ್ದಾರೆ.

ಇದನ್ನು ಓದಿ : ರಾತ್ರಿ ವೇಳೆ ಈ ಲಕ್ಷಣಗಳು ಕಂಡುಬರುತ್ತಿವೆಯೇ.? ಅಪಾಯದ ಗಂಟೆ ಬಾರಿಸಿದಂತೆ.!

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ವಿಡಿಯೋದಲ್ಲಿ ವೈದ್ಯರೊಬ್ಬರು ನವಜಾತ ಶಿಶುವನ್ನು ಕೈಯಲ್ಲಿ ಹಿಡಿದುಕೊಂಡು ಆಪರೇಷನ್‌ ಥಿಯೇಟರ್‌ನಿಂದ ಹೊರ ಬರುತ್ತಿರುವ ದೃಶ್ಯವನ್ನು ನೋಡಬಹುದು.

ಮಗು ಮೃತಪಟ್ಟ ಕಾರಣ ಆ ಮಗುವನ್ನು ಹೇಗಾದರೂ ಬದುಕಿಸಲೇಬೇಕು ಎಂದು ದೃಢ ನಿರ್ಧಾರ ಮಾಡಿದ ವೈದ್ಯರು ಕೆಲವು ವೈದ್ಯಕೀಯ ಸಾಧನಗಳ ಸಹಾಯದಿಂದ ಮಗುವಿಗೆ ಉಸಿರು ತುಂಬುವ ಪ್ರಯತ್ನವನ್ನು ಮಾಡುತ್ತಾರೆ. ಹೀಗೆ ಉಸಿರು ನಿಂತು ಹೋದ ನವಜಾತ ಶಿಶುವಿಗೆ ಉಸಿರು ನೀಡುವ ಮೂಲಕ ಆ ಮಗುವಿಗೆ ವೈದ್ಯರು ಮರು ಜೀವವನ್ನೇ ನೀಡಿದ್ದಾರೆ.

ಇದನ್ನು ಓದಿ : ಮಾವನ ಮನೆಗೆ ಪಿತೃ ಪಕ್ಷದ ಊಟಕ್ಕೆ ಹೋಗಲು ಪೊಲೀಸರನ್ನೇ ಕರೆಸಿಕೊಂಡ ಭೂಪ.!

Educativefeed ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.8 ಮಿಲಿಯನ್‌ ವೀಕ್ಷಣೆ ಪಡೆದಿದ್ದು, ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.

ಕೆಲವರು ಈ ವೈದ್ಯರಿಗೆ ನನ್ನದೊಂದು ಸಲಾಂ ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ನಿಜಕ್ಕೂ ಈ ಡಾಕ್ಟರ್‌ ಆ ಪುಟ್ಟ ಮಗುವಿಗೆ ಮರು ಜನ್ಮವನ್ನೇ ನೀಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

 

View this post on Instagram

 

A post shared by FACTS & KNOWLEDGE (@educativefeed)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img