ಜನಸ್ಪಂದನ ನ್ಯೂಸ್, ಡೆಸ್ಕ್ : ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮದ್ಯ ಸೇವಿಸಿ ಬಾರ್ ಡ್ಯಾನ್ಸರ್‌ಗಳೊಂದಿಗ ಅಶ್ಲೀಲವಾಗಿ ನೃತ್ಯ ಮಾಡಿದ ಘಟನೆ ನಡೆದಿದೆ.
ಬಿಹಾರದ ಸಹರ್ಸಾದ ಸರ್ಕಾರಿ ಶಾಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ : ಮಾವನ ಮನೆಗೆ ಪಿತೃ ಪಕ್ಷದ ಊಟಕ್ಕೆ ಹೋಗಲು ಪೊಲೀಸರನ್ನೇ ಕರೆಸಿಕೊಂಡ ಭೂಪ.!
ಶಾಲೆಯ ಆವರಣದಲ್ಲಿ ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ಕೆಲವರು ಬ್ಯಾಂಡ್ ಮತ್ತು ನಾಲ್ವರು ಬಾರ್ ಡ್ಯಾನ್ಸರ್‌ಗಳನ್ನು ಕರೆತಂದಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಗೆ ತಂದು ಕುಡಿದು ಕುಣಿದಾಡಿದ್ದಾರೆ.
ವಿಡಿಯೋದಲ್ಲಿ ನಾಲ್ವರು ಮಹಿಳೆಯರು ಭೋಜ್‌ಪುರಿ ಹಾಡುಗಳಿಗೆ ಅಶ್ಲೀಲವಾಗಿ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ವಿಡಿಯೋದಲ್ಲಿ ಕೆಲವರು ಮಹಿಳೆಯರ ಸುತ್ತ ಜಮಾಯಿಸಿ ಅವರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ.
ಇದನ್ನು ಓದಿ : ಸಿನಿಮೀಯ ಶೈಲಿಯಲ್ಲಿ ಕಾರು ಸುತ್ತುವರೆದು 2.5 KG ತೂಕದ ಚಿನ್ನಾಭರಣ ದರೋಡೆ ; ವಿಡಿಯೋ Viral.!
ಈ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ನೀಡಿಲ್ಲ. ಶಾಲೆಯಲ್ಲಿ ಇಂತಹ ಆಚರಣೆಗೆ ಹೇಗೆ ಅವಕಾಶ ನೀಡಲಾಯಿತು ಎಂಬುದಕ್ಕೆ ಶಿಕ್ಷಣ ಇಲಾಖೆ ಉತ್ತರಿಸಬೇಕು.
ಮದುವೆ ಅಂಗವಾಗಿ ಕೆಲವರು ಶಾಲೆಯಲ್ಲಿ ಉಳಿದುಕೊಂಡು ಮೋಜಿಗಾಗಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
बिहार के सरकारी स्कूल में बार बालाओं ने लगाए ठुमके
सहरसा के जलई ओपी क्षेत्र में स्थित विरगांव पंचायत के प्राथमिक विद्यालय नया टोला में बार बालाओं ने जमकर ठुमका लगाया। विडियो 24 सितंबर की रात का बताया जा रहा है। @bihar_police @NitishKumar @BiharEducation_ pic.twitter.com/Jk9Sn0fHhp
— Republican News (@RepublicanNews0) September 26, 2024