ಜನಸ್ಪಂದನ ನ್ಯೂಸ್, ಡೆಸ್ಕ್ : ಹಿಂದಿನ ಕಾಲದಲ್ಲಿದ್ದ ಗುಣಗಳನ್ನು ಇಂದಿನ ಜನರು ಇಟ್ಟುಕೊಂಡಿಲ್ಲ. ಮನುಷ್ಯರಲ್ಲಿ ಮಾನವೀಯತೆ ಸಾಯುತ್ತಿದೆ.
ಪ್ರಪಂಚದಲ್ಲಿ ನಮ್ಮಂತೆಯೇ ಬದುಕಲು ಬಯಸುವ ಪ್ರಾಣಿಗಳನ್ನು ಕಟ್ಟಿ ಹಾಕಿ ಹಿಂಸೆ ನೀಡುತ್ತಿದ್ದಾರೆ. ಆದರೆ ಕರ್ಮ ಯಾರನ್ನೂ ಬಿಡುವುದಿಲ್ಲ ಎಂದು ಹೇಳುತ್ತಾರೆ. ಈ ಘಟನೆ ನೋಡಿದರೆ ಇದು ನಿಜ ಎನ್ನಬಹುದು.
ಇದನ್ನು ಓದಿ : Health : ಸೋಡಾ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತಾ.?
ಯಾವುದೇ ಮೂಕ ಜೀವಿಗೆ ಕಿರುಕುಳ ನೀಡುವುದು ಭೀಕರ ಪರಿಣಾಮಗಳಿಗೆ ಕಾರಣವಾಗಬಹುದು ಎಂಬ ಪಾಠವನ್ನೂ ಇದು ತಿಳಿಸುತ್ತದೆ. ಅಲ್ಲದೇ ಒಂಟೆ ಈ ಮನುಷ್ಯನಿಗೆ ಕಲಿಸಿದ್ದು ನಮಗೆ ಬಹಳ ಅಮೂಲ್ಯವಾದ ಜೀವನದ ಪಾಠವನ್ನು ಕಲಿಸುತ್ತದೆ.
ವಿಡಿಯೋದಲ್ಲಿ, ಒಂಟೆಯನ್ನು ಕಟ್ಟಿ ಹಾಕಿದ ಒಬ್ಬ ವ್ಯಕ್ತಿ ಅದಕ್ಕೆ ಹಿಂಸೆ ನೀಡುವುದನ್ನು ನೋಡಬಹುದು. ಚೂರಿಯಿಂದ ಅದರ ಕುತ್ತಿಗೆಗೆ ಇರಿದಿದ್ದಾನೆ. ಆಗ ಒಂಟೆ ನೋವು ತಾಳಲಾರದೆ ಅವನ ಮೇಲೆ ಪ್ರತೀಕಾರ ತೀರಿಸಿಕೊಂಡಿದ್ದನ್ನು ಕಾಣಬಹುದು.
ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು.!
ಈ ವಿಡಿಯೋ ಸಖತ್ ವೈರಲ್ ಆಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಒಂಟೆಯನ್ನು ಕಟ್ಟಿ ನಂತರ ಚಾಕುವಿನಿಂದ ಅದರ ಕುತ್ತಿಗೆಗೆ ಚುಚ್ಚುತ್ತಿದ್ದಾನೆ.
ನಂತರ ಮತ್ತೊಬ್ಬ ವ್ಯಕ್ತಿ ಅದೇ ಚಾಕುವನ್ನು ತೆಗೆದುಕೊಂಡು ಮತ್ತೆ ಅದರ ಕುತ್ತಿಗೆ ಚುಚ್ಚಿದ್ದಾನೆ. ಆಗ ನೋವಿನಿಂದ ಒಂಟೆ ತನ್ನ ಕಟ್ಟಿದ ಕಾಲಿನಿಂದ ಆ ವ್ಯಕ್ತಿಗೆ ಒದ್ದು ಕೆಳಗೆ ಬೀಳಿಸಿದೆ.
ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!
ಆದರೆ ಮೂಕ ಪ್ರಾಣಿಗೆ ನೀಡಿದ ಈ ಚಿತ್ರಹಿಂಸೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮನುಷ್ಯ ಕುಲ ಇಷ್ಟು ನೀಚ ಮಟ್ಟಕ್ಕೆ ಇಳಿದಿದೆ ಎಂಬುದು ಇದರಿಂದ ತಿಳಿಯುತ್ತದೆ.
ಈ ವಿಡಿಯೋವನ್ನು @Deadlykalesh ಎಕ್ಸ್ ಚಾನೆಲ್‍ನಲ್ಲಿ ಹಂಚಿಕೊಳ್ಳಲಾಗಿದೆ. ಮನುಷ್ಯನು ತಾನು ಮಾಡಿದ ನೀಚ ಕೃತ್ಯಗಳಿಗೆ ಗಂಭೀರವಾದ ಪರಿಣಾಮವನ್ನು ಎದುರಿಸುತ್ತಾನೆ ಎಂಬ ಅಂಶವನ್ನು ಈ ವಿಡಿಯೋ ಎತ್ತಿ ತೋರಿಸುತ್ತದೆ. ಒಂಟೆ ಈ ರೀತಿ ಪ್ರತೀಕಾರ ತೀರಿಸಿಕೊಂಡಿದ್ದು, ಪ್ರಾಣಿಯನ್ನು ಈ ರೀತಿಯಾಗಿ ಹಿಂಸಿಸುವ ತಪ್ಪನ್ನು ಮಾಡುವವರಿಗೆ ಒಂದು ಸೂಕ್ತ ಉದಾಹರಣೆಯಾಗಿದೆ.
ಇದನ್ನು ಓದಿ : Video : ಮಹಿಳಾ ಎಸ್ಐ ಜೊತೆ SI ಸರಸ ಸಲ್ಲಾಪ : ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ.!
ಈ ವಿಡಿಯೋ 29,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ವಿಡಿಯೋ ನೋಡಿದವರು ಆಘಾತಗೊಂಡಿದ್ದಾರೆ. ಪರ್ಫೆಕ್ಟ್ ಶಾಟ್, ನೈಸ್ ಕಿಕ್ ಎಂದು ಒಂಟೆಯನ್ನು ಹಾಡಿ ಹೊಗಳಿದ್ದಾರೆ.
Cameled 🐪
pic.twitter.com/8o0A4eX03y— Deady Kalesh (@Deadlykalesh) August 7, 2024