ಜನಸ್ಪಂದನ ನ್ಯೂಸ್, ಡೆಸ್ಕ್ : ವಕೀಲೆಯೊಬ್ಬರು ತನ್ನ ಲವ್ವರ್ ಗೆ ಜಾಮೀನು ಕೊಡಿಸಿಲ್ಲ ಎಂಬ ಕಾರಣಕ್ಕೆ ನ್ಯಾಯಾಧೀಶರ ಮೇಲೆ ಮನಸೋ ಇಚ್ಛೆ ಥಳಿಸಿರುವ ಘಟನೆ ನಡೆದಿದೆ.
ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹಾರಾಷ್ಟ್ರದ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 215 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜಡ್ಜ್ ಮತ್ತು ಲಾಯರ್ನ ಪರಸ್ಪರ ಹೊಡೆದಾಟವನ್ನು ಅಲ್ಲಿದ್ದ ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಜಡ್ಜ್ ಮತ್ತು ಲಾಯರ್ ನಡುವೆ ಮಾತಿನ ಚಕಾಮಕಿ ನಡೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಪರಸ್ಪರ ಜಡೆ ಹಿಡಿದು ಎಳೆದಾಡಿರುವುದನ್ನು ನೋಡಬಹುದು.
ಇದನ್ನು ಓದಿ : Health : ಎಳನೀರಿನ ಜೊತೆ ಈ ಸೊಪ್ಪನ್ನು ಸೇವಿಸಿ ; ಒಂದೇ ದಿನದಲ್ಲಿ ಕಿಡ್ನಿಯಲ್ಲಿರುವ ನೋವು ಮಾಯ.!
ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿ ಮಹಿಳಾ ಪೊಲೀಸ್ ಬಂದು ಜಗಳವನ್ನು ನಿಲ್ಲಿಸಿರುವುದನ್ನು ವಿಡಿಯೋದಲ್ಲಿದೆ.
ಇಬ್ಬರೂ ತಮ್ಮ ಹುದ್ದೆಯ ಕಪ್ಪು ಬಟ್ಟೆಗಳನ್ನು ಧರಿಸಿದ್ದರು. ಇಬ್ಬರ ನಡುವೆಯೂ ತೀವ್ರ ಜಗಳವಾಗಿದೆ. ಸುತ್ತ ಮುತ್ತ ಸಾಕಷ್ಟು ಮಂದಿ ನೆರೆದಿದ್ದರು. ಕೆಲವರು ಇವರ ಜಗಳದ ವಿಡಿಯೋವನ್ನು ಕೂಡ ಮಾಡುತ್ತಿದ್ದರು.
ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ.!
ಪರಸ್ಪರರು ಕೂದಲನ್ನು ಎಳೆದುಕೊಂಡು, ಹೊಡೆದಾಡಿಕೊಂಡ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಕೊನೆಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
@BurmeeM ಎಂಬ ಟ್ವಟಿರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಎರಡೇ ದಿನದಲ್ಲಿ ಭಾರೀ ವೈರಲ್ ಆಗಿದೆ. ಆಗಸ್ಟ್ 05ರಂದು ಹಂಚಿಕೊಂಡಿರುವ ವಿಡಿಯೋ ಇಲ್ಲಿಯವರೆಗೆ 9 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದು ಕೊಂಡಿದೆ. ಜೊತೆಗೆ ಇವರಿಬ್ಬರ ಪರಸ್ಪರ ಹೊಡೆದಾಟ ಭಾರೀ ಚರ್ಚೆಗೆ ಕಾರಣವಾಗಿದೆ.
भारत में पहली बार एक महिला जज और महिला अधिवक्ता के बीच खुलेआम हाथापाई हुई, वो भी महाराष्ट्र की एक अदालत में, एक महिला पुलिस अधिकारी ने दोनों को अलग किया। जज ने अधिवक्ता की मंगेतर को जमानत देने से इनकार कर दिया था… अब इस तरह से विवादों का निपटारा होता है…😅🤣 pic.twitter.com/TzsXXSYNn6
— Mayank Burmee (@BurmeeM) August 5, 2024