ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಪತಿ ಪತ್ನಿಯರ ಅನೈತಿಕ ಸಂಬಂಧದ ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗುತ್ತಲೇ ಇವೆ. ತಮ್ಮ ಸಂಗಾತಿಗೆ ತಿಳಿಯದಂತೆ ಬೇರೊಬ್ಬರ ಜೊತೆ ಸಂಬಂಧ ಬೆಳೆಸುವ ಪ್ರಕರಣಗಳು ಹೆಚ್ಚುತ್ತಿವೆ.
ಇಂಥ ಸಂಬಂಧಗಳು ಸುಂದರ ಸುಖಮಯ ಸಂಸಾರವನ್ನು ಹಾಳು ಮಾಡುತ್ತವೆ. ಅದು ಅನೇಕ ದಂಪತಿಗಳನ್ನು ದೂರ ಮಾಡಿದೆ, ಸಾಕಷ್ಟು ಅನೋನ್ಯವಾದ ಸಂಸಾರಗಳನ್ನು ಒಡೆದು ಹಾಕುತ್ತವೆ.
ಇದನ್ನು ಓದಿ : ‘ಮನೇಲಿ ಯಾರು ಇಲ್ಲ ಬಾ’ ಅಂತ ಯುವಕನನ್ನು ಕರೆದ ಮಾಯಾಂಗನೆ ; ಮುಂದೆ.?
ಸದ್ಯ ಭುವನೇಶ್ವರದ ಪಾಟಿಯಾ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ವರದಿಯಾಗಿದೆ.
ವ್ಯಕ್ತಿಯೊಬ್ಬ ಇಬ್ಬರು ಬಂಗಾಳಿ ಹುಡುಗಿಯರ ಜೊತೆ ಹೋಟೆಲ್‍ವೊಂದರ ರೂಂನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ರೆಡ್‍ಹ್ಯಾಂಡ್ ಆಗಿ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇದನ್ನು ಓದಿ : Video : ರೀಲ್ಸ್ ಮಾಡುವಾಗ ಬೈಕ್ ಗೆ ಡಿಕ್ಕಿಯಾದ ಕಾರು ; ಇಬ್ಬರ ಸ್ಥಿತಿ ಗಂಭೀರ.!
ಈ ಬಗ್ಗೆ ತಿಳಿದ ಪತ್ನಿ ಇನ್ಫೋಸಿಟಿ ಪೊಲೀಸರ ತಂಡದೊಂದಿಗೆ ಹೋಟೆಲ್‍ಗೆ ತೆರಳಿದ್ದಾಳೆ. ಆ ಸಮಯದಲ್ಲಿ ಮದ್ಯದ ಬಾಟಲಿ ಹಾಗೂ ಇಬ್ಬರು ಹುಡುಗಿಯರ ಜೊತೆ ಪತಿ ಪತ್ತೆಯಾಗಿದ್ದಾನೆ. ಆಕ್ಷೇಪಾರ್ಹ ಸ್ಥಿತಿಯಲ್ಲಿ ಮೂವರು ಕಂಡುಬಂದಿದ್ದಾರೆ.
ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಹೋಟೆಲ್ ರೂಂನಲ್ಲಿ ಇಬ್ಬರು ಹುಡುಗಿಯರೊಂದಿಗೆ ನನ್ನ ಗಂಡನನ್ನು ರೆಡ್ ಹ್ಯಾಂಡ್ಆಗಿ ಹಿಡಿದಿದ್ದೇನೆ. ನಿನ್ನೆ, ನನ್ನ ಪತಿ ತನ್ನ ವಿರುದ್ಧ ಎರಡು ಪೊಲೀಸ್ ಠಾಣೆಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎಂದು ಪತ್ನಿ ಹೇಳಿದ್ದಾಳೆ.
ಇದನ್ನು ಓದಿ : ಉಚಿತ ಹೊಲಿಗೆ ಯಂತ್ರ ಪಡೆಯಲು ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ; ಇಲ್ಲಿದೆ ಡೈರೆಕ್ಟ್ link.!
ತನ್ನ ಪತಿ ಈ ಹಿಂದೆ ತಾನು ಎಂಜಿನಿಯರ್ ಎಂದು ಹೇಳಿಕೊಂಡಿದ್ದು, ಈಗ ಬೇರೆ ಕೆಲಸವನ್ನು ಮಾಡುತ್ತಿದ್ದಾನೆ ಎಂದು ಅವಳು ತಿಳಿಸಿದ್ದಾಳೆ.
ಇನ್ನೂ ರೂಂನಲ್ಲಿದ್ದ ಇಬ್ಬರು ಹುಡುಗಿಯರನ್ನು ರಕ್ಷಿಸಿದ್ದು, ಈ ಹೋಟೆಲ್ ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿದೆ ಎಂದು ಶಂಕಿಸಲಾಗಿದೆ.
ಇದನ್ನು ಓದಿ : Job alert : ಕೇಂದ್ರ ಸರ್ಕಾರದಿಂದ 8000 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!
ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಲ್ಲಾ ದಾಖಲೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಆರೋಪಿ ಪತಿ ಮತ್ತು ಇಬ್ಬರು ಯುವತಿಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಹಿಳೆಯ ಪತಿ ರ್ಯಾಪರ್ ಎಂದು ಹೇಳಲಾಗಿದ್ದು, ಆತನ ವಿರುದ್ಧ ಭುವನೇಶ್ವರದ ನಂದಂಕನನ್ ಮತ್ತು ಚಂದ್ರಶೇಖರಪುರ ಪೊಲೀಸ್ ಠಾಣೆಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ.
High drama unfolded at a hotel room in Bhubaneswar’s Patia area after a woman caught her husband red-handed allegedly with two Bengali girls in the wee hours on Wednesday#Odisha pic.twitter.com/C2HAV3lhpo
— OTV (@otvnews) August 14, 2024