ಜನಸ್ಪಂದನ ನ್ಯೂಸ್, ಡೆಸ್ಕ್ : ಈತ ಕುಡುಕರಲ್ಲೇ ಮಹಾ ಕುಡುಕ ಇದ್ದಿರಬಹುದು. ಹೀಗಾಗಿ ಕುಡಿದ ನಶೆಯಲ್ಲಿ ಈ ವ್ಯಕ್ತಿ ಕಂಬ ಏರಿ ವಿದ್ಯುತ್ ತಂತಿಗಳ ಮೇಲೆ (On the power lines) ಮಲಗಿದ ಶಾಕ್ ತರಿಸುವ ವಿಡಿಯೋವೊಂದು ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ (Drunkenness) ವಿದ್ಯುತ್ ಕಂಬ ಏರುತ್ತಿರುವುದನ್ನು ಅಲ್ಲಿದ್ದ ಕೆಲ ಜನರು ದೂರದಿಂದಲೇ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೂ ಆಂಧ್ರಪ್ರದೇಶದ ಮಾನ್ಯಂ ಜಿಲ್ಲೆಯ (Manyam District of Andhra Pradesh) ಪಾಲಕೊಂಡ ಮಂಡಲದ ಎಂ. ಸಿಂಗಿಪುರಂನಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದೆ. ಆದರೆ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.
ಇದನ್ನು ಓದಿ : News : ತನ್ನ ಮೂವರು ಮಕ್ಕಳನ್ನು ಕೊಂದವನಿಗೆ ಮರಣದಂಡನೆ ಶಿಕ್ಷೆ.!
ಕಂಬದ ಬಳಿಗೆ ಓಡಿದ ಆತ, ಮೇಲಕ್ಕೇರಿ ಹೋಗಿದ್ದಾನೆ. ಅಲ್ಲಿದ್ದವರು ಎಷ್ಟು ಕೂಗಿದರೂ ಲೆಕ್ಕಿಸಲಿಲ್ಲ. ಮೇಲೆ ಹೋಗಿ ವಿದ್ಯುತ್ ತಂತಿಗಳ ಮೇಲೆ ಆರಾಮವಾಗಿ ಮಲಗಿಕೊಂಡಿದ್ದಾನೆ.
ಸ್ವಲ್ಪ ಹೊತ್ತು ಆತನಿಗೆ ಮೋಡಗಳಲ್ಲಿ ತೇಲಾಡುತ್ತಿರುವಂತೆ ಭಾಸವಾಗಿದೆ (Feeling of floating). ಎಲ್ಲರೂ ಅಲ್ಲಿಂದ ಕೆಳಗೆ ಬೀಳುತ್ತಾನೆ ಎಂದು ಟೆನ್ಷನ್ ಆಗಿರಬಹುದು.
ಅವರು ಅವನನ್ನು ಕೆಳಗೆ ಇಳಿಯುವಂತೆ ಎಷ್ಟೇ ಕಿರುಚಿದರೂ (scream) ಆತ ಮಾತ್ರ ಯಾರೇ ಕೂಗಾಡಲಿ ಊರೇ ಹೋರಾಡಲಿ ಎಂದು ಪ್ರತಿಕ್ರಿಯಿಸದೇ ಹಾಗೆಯೇ ಮಲಗಿಕೊಂಡಿದ್ದ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Special news : ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಿಕೊಳ್ಳಬೇಡಿ.!
ಸ್ವಲ್ಪ ಸಮಯದ ಬಳಿಕ ಜನರು ಆ ವ್ಯಕ್ತಿಯನ್ನು ಸಾವಧಾನವಾಗಿ (careful) ಕೆಳಗೆ ಇಳಿಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ :
మద్యం మత్తులో కరెంట్ తీగలపై పడుకున్నాడు
మన్యం జిల్లా పాలకొండ మండలం ఎం.సింగిపురంలో గ్రామస్థులను హడలెత్తించిన ఓ తాగుబోతు
మద్యం మత్తులో కరెంటు స్తంభంపైకి ఎక్కుతుండటంతో చూసిన పలువురు వెంటనే ట్రాన్స్ ఫార్మర్ ఆపేశారు
అతను ఆగకుండా పైకి వెళ్లి ఏకంగా విద్యుత్ తీగలపైనే పడుకున్నాడు.… pic.twitter.com/0p7xLgvEm6
— Telugu Scribe (@TeluguScribe) December 31, 2024
ಹಿಂದಿನ ಸುದ್ದಿ : ತನ್ನ ಮೂವರು ಮಕ್ಕಳನ್ನು ಕೊಂದವನಿಗೆ ಮರಣದಂಡನೆ ಶಿಕ್ಷೆ.!
ಜನಸ್ಪಂದನ ನ್ಯೂಸ್, ಮಂಗಳೂರು : ಮಂಗಳೂರು ನ್ಯಾಯಾಲಯವು (Mangalore Court) ಆರೋಪಿಯೋರ್ವನಿಗೆ ಮರಣ ದಂಡನೆ (death penalty) ವಿಧಿಸಿ ಆದೇಶ ಹೊರಡಿಸಿದೆ.
ಆರೋಪಿ ಹಿತೇಶ್ ಶೆಟ್ಟಿಗಾರ್ ಎಂಬಾತ ತನ್ನ ಮೂವರು ಮಕ್ಕಳನ್ನು ಬಾವಿಯಲ್ಲಿ ದೂಡಿ ಕೊಂದಿದ್ದ, ಅಲ್ಲದೇ ಪತ್ನಿಯನ್ನು ಬಾವಿಗೆ ತಳ್ಳಿ ಕೊಲ್ಲಲು ಯತ್ನಿಸಿದ್ದ (attempt to murder).
ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!
2022ರ ಜೂನ್ 23ರಂದು ಸಂಜೆ ವೇಳೆ ತಾಳಿಪಾಡಿ ಗ್ರಾಮದ ಪದ್ಮನೂರಿನಲ್ಲಿ ಹಿತೇಶ್ ಶೆಟ್ಟಿಗಾರ್ ತನ್ನ ಮಕ್ಕಳಾದ ರಶ್ಮೀತಾ (13), ಉದಯ ಕುಮಾರ (11), ದಕ್ಷೀತ್ (5) ಎಂಬ ಮಕ್ಕಳನ್ನು ಬಾವಿಗೆ ನೂಕಿ ಕೊಲೆ ಮಾಡಿದ್ದಲ್ಲದೆ ತನ್ನ ಪತ್ನಿ ಲಕ್ಷ್ಮಿ ಅವರನ್ನು ಬಾವಿಗೆ ನೂಕಿ ಕೊಲೆಗೆ ಯತ್ನಿಸಿದ್ದ.
ಮಕ್ಕಳನ್ನು ಬಾವಿಗೆ ತಳ್ಳಿದ ವೇಳೆ ರಶ್ಮೀತಾ ಎಂಬ ಬಾಲಕಿ ಬಾವಿಗೆ ಅಳವಡಿಸಿದ್ದ ಪಂಪಿನ ಪೈಪನ್ನು ಹಿಡಿದುಕೊಂಡಿದ್ದಳು (The girl was holding the pump pipe attached to the well). ಇದನ್ನು ಕಂಡ ಪಾಪಿ ಹಿತೇಶ್ ಶೆಟ್ಟಿಗಾರ್ ಕತ್ತಿಯಿಂದ ಪೈಪನ್ನು ತುಂಡರಿಸಿದ್ದ.
ಯಾವುದೇ ಕೆಲಸ ಮಾಡದೆ ಆರೋಪಿ ಹಿತೇಶ್ ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದ. ಇದೇ ಸಿಟ್ಟಲ್ಲಿ ಆತ ತನ್ನ ಮೂವರು ಮಕ್ಕಳನ್ನು ಬಾವಿಗೆ ನೂಕಿ ಕೊಲೆಗೈದಿದ್ದ. ಸಂಜೆ ಹೊಟೇಲಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ತನ್ನ ಹೆಂಡತಿಯನ್ನು ಮನೆಯ ಪಕ್ಕದ ಬಾವಿಗೆ ದೂಡಿದ್ದ. ಲಕ್ಷ್ಮಿಯ ಚೀರಾಟ ಕೇಳಿ ಸ್ಥಳಿಯ ವ್ಯಕ್ತಿಯೋರ್ವರು ಆಕೆಯನ್ನು ರಕ್ಷಿಸಿದ್ದರು.
ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!
ಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ (Mulki Police Station) ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ (Inspector of Police) ಕುಸುಮಾಧರ ತನಿಖೆ ನಡೆಸಿ ಅರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು (charge sheet) ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿಯು ಕೊಲೆ ಹಾಗೂ ಕೊಲೆ ಯತ್ನ ನಡೆಸಿರುವುದು ಸಾಬೀತಾದ (proven) ಹಿನ್ನೆಲೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ (3rd Additional District and Sessions Court Judge) ಸಂಧ್ಯಾ ಆರೋಪಿಗೆ ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ.