ಜನಸ್ಪಂದನ ನ್ಯೂಸ್, ಡೆಸ್ಕ್ : ಪೊಲೀಸರು ತಾವು ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ನಾಶ ಮಾಡಲು ಮುಂದಾದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನರೆಲ್ಲಾ ಮದ್ಯದ ಬಾಟಲಿಗಳನ್ನು ಎತ್ತಿಕೊಂಡು ಓಡಿದ ಘಟನೆಯೊಂದು ಕೆಲ ದಿನಗಳ ಹಿಂದೆ ನಡೆದಿತ್ತು.
ಇದನ್ನು ಓದಿ : Rain : ಬೆಳಗಾವಿ ಸೇರಿದಂತೆ ರಾಜ್ಯದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ.!
ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಮದ್ಯ ನಾಶ ಮಾಡುವುದನ್ನು ಕಣ್ಣಾರೆ ಕಂಡ ಕುಡುಕನೊಬ್ಬ ಅಯ್ಯೋ ಎಣ್ಣೆ ಸುಮ್ನೆ ವೇಸ್ಟ್ ಆಯ್ತಲ್ಲಾ ಎಂದು ಅಲ್ಲೇ ನೆಲದಲ್ಲಿ ಬಿದ್ದಿದ್ದ ಎಣ್ಣೆಯನ್ನು ನೆಕ್ಕಿ ಕುಡಿದಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಿತೇಶ್ ಪಾಲ್ (PalsSkit) ಎಂಬವರು ಈ ಕುರಿತ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಜೀವನದಲ್ಲಿ ಇಷ್ಟು ಸಮರ್ಪಣೆ ಇರ್ಬೇಕು ನೋಡಿ ಎಂಬ ತಮಾಷೆಯ ಶೀರ್ಷಿಕೆಯನ್ನು ನೀಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಮದ್ಯ ನಾಶದ ಮೇಲೆ ಕುಡುಕನೊಬ್ಬ ನೆಲದಲ್ಲಿ ಚೆಲ್ಲಿದ್ದ ಎಣ್ಣೆಯನ್ನು ನೆಕ್ಕುತ್ತಿರುವ ದೃಶ್ಯವನ್ನು ಕಾಣಬಹುದು. ಪೊಲೀಸರು ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಸಾಲಾಗಿ ಜೋಡಿಸಿ ಬುಲ್ಡೋಜರ್ ಸಹಾಯದಿಂದ ಆ ಮದ್ಯದ ಬಾಟಲಿಗಳನ್ನು ನಾಶಪಡಿಸಿದ್ದಾರೆ.
ಇದನ್ನು ಓದಿ : ವರ ಮಾಡಿದ ಈ ಕೆಲಸಕ್ಕೆ ಮಂಟಪದಲ್ಲೇ ಕಪಾಳಮೋಕ್ಷ ಮಾಡಿದ ವಧು; ವಿಡಿಯೋ Viral.!
ಈ ವೇಳೆ ಅಲ್ಲಿಗೆ ಬಂದ ಕುಡುಕ ಮಹಾಶಯನೊಬ್ಬ ತೀವ್ರ ನೊಂದುಕೊಂಡು ಅಯ್ಯೋ ದೇವ್ರೆ ಯಾಕಪ್ಪಾ ಇವ್ರು ಇಷ್ಟು ಎಣ್ಣೆಯನ್ನು ವೇಸ್ಟ್ ಮಾಡ್ತಿದ್ದಾರೆ ಎನ್ನುತ್ತಾ ಬಗ್ಗಿ ಕುಳಿತು ನೆಲದಲ್ಲಿ ಚೆಲ್ಲಿದ್ದ ಎಣ್ಣೆಯನ್ನೇ ನೆಕ್ಕಿ ಕುಡಿದಿದ್ದಾನೆ. ನಂತರ ಅಲ್ಲಿಗೆ ಬಂದ ಪೊಲೀಸರೊಬ್ಬರು ಆತನನ್ನು ಅಲ್ಲಿಂದ ಓಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸೆಪ್ಟೆಂಬರ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಡೆಡಿಕೇಶನ್ ಅಂದ್ರೆ ಹಿಂಗ್ ಇರ್ಬೇಕು ನೋಡಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
बस जीवन में इतना डेडीकेशन होना चाहिए
आपका लक्ष्य आप से बच के नही जा सकता 😂 pic.twitter.com/GUfOx2BBex— Reetesh Pal (@PalsSkit) September 18, 2024