ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೊಬ್ಬರಿಂದ ಶಿಕ್ಷಣ ಇಲಾಖೆಯ ಸಹಾಯಕ ಅಕೌಂಟೆಂಟ್ ಒಬ್ಬರು 1 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ವಿಜಿಲೆನ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಈ ಸಹಾಯಕ ಅಕೌಂಟೆಂಟ್ ಅಯೋಧ್ಯಾ ಬ್ಲಾಕ್ ಎಜುಕೇಷನ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ವ್ಯಕ್ತಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇನ್ನೂ ಉತ್ತರ ಪ್ರದೇಶದ ಮಸೋಧಾ ಅಯೋಧ್ಯೆಯಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
ಈ ಸಂಬಂಧ ವ್ಯಕ್ತಿಯೂ ವಿಜಿಲೆನ್ಸ್ ಅಧಿಕಾರಿಗಳಿಗೆ ಅಕೌಂಟೆಂಟ್ ವಿರುದ್ಧ ದೂರು ನೀಡಿದ್ದರು.
ಅಂತೆಯೇ ಅಯೋಧ್ಯಾ ಬ್ಲಾಕ್ ಎಜುಕೇಷನ್ ಕಚೇರಿಯ ಅಕೌಂಟೆಂಟ್ ಗೆ ಒಂದು ಲಕ್ಷ ಲಂಚದ ಹಣವನ್ನು ಕೊಡಲು ವ್ಯಕ್ತಿ ತೆರಳಿದ್ದರು.
ಹಣವನ್ನು ವ್ಯಕ್ತಿಯಿಂದ ಪಡೆದ ಕೆಲವೇ ಕ್ಷಣಗಳಲ್ಲಿ ವಿಜಿಲೆನ್ಸ್ ತಂಡದ ಅಧಿಕಾರಿ, ಸಿಬ್ಬಂದಿಗಳು ರೆಡ್ ಹ್ಯಾಂಡ್ ಆಗಿ ಹಿಡಿದು, ಅರೆಸ್ಟ್ ಮಾಡಿದ್ದಾರೆ.
ಇದನ್ನು ಓದಿ : ದ್ವಿತೀಯ PUC ಪಾಸಾಗಿದ್ದೀರಾ.? ಗ್ರಾ. ಪಂ.ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಒಟ್ಟಾರೆಯಾಗಿ ಸಹಾಯಕ ಅಕೌಂಟೆಂಟ್ 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವಿಡಿಯೋ ವೈರಲ್ ಆಗಿದೆ.
Vigilance team arrested Assistant Accountant while he was Taking Bribe of Rs 1 Lakh, he was posted in Block Education Office, Masodha Ayodhya UP
pic.twitter.com/QIMraez8ea— Ghar Ke Kalesh (@gharkekalesh) September 7, 2024