ಜನಸ್ಪಂದನ ನ್ಯೂಸ್, ಹಾಸನ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ (Channarayapatna Taluk of Hassan District) ಗೌಡಗೆರೆ ಸಮೀಪ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ (died on the spot) ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ (out of control) ಕಾರು ಪಲ್ಟಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತ ವಿದ್ಯಾರ್ಥಿಗಳು ಸೂರಜ್ (19) ಹಾಗೂ ಅನೀಶ್ (18) ಎಂದು ತಿಳಿದು ಬಂದಿದೆ.
ಇದನ್ನು ಓದಿ : ಇಂಡಿಯಾ ಗೇಟ್ ಬಳಿ ಕೇವಲ ಟವೆಲ್ ಕಟ್ಟಿಕೊಂಡು Dance ಮಾಡಿ ಛೀಮಾರಿ ಹಾಕಿಸಿಕೊಂಡ Model.!
ಇನ್ನು ಈ ಅಪಘಾತದಲ್ಲಿ ಬದುಕುಳಿದ ಮೂವರ ಪೈಕಿ, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ (serious) ಎನ್ನಲಾಗಿದೆ.
ಭುವನ್ (18) ಎನ್ನುವವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಬಿಜಿಎಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿಶಾಲ್ (19) ಹಾಗೂ ಪೂರ್ಣಚಂದ್ರ (18) ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ (Bangalore to Mangalore) ಐವರು ವಿದ್ಯಾರ್ಥಿಗಳು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಅತಿವೇಗದಲ್ಲಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ ಎನ್ನಲಾಗಿದೆ.
ಇದನ್ನು ಓದಿ : ‘ಸಹಕರಿಸಿದರೆ ಪ್ರಕರಣದಲ್ಲಿ ಸಹಾಯ’ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ; Video ವೈರಲ್.!
ಈ ವಿದ್ಯಾರ್ಥಿಗಳು ಬೆಂಗಳೂರು ಮೂಲದವರಾಗಿದ್ದು, ಗಾಯಾಳುಗಳು ಜೊತೆಗೆ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲು ಶಾಸಕ ಸಿ. ಎನ್. ಬಾಲಕೃಷ್ಣ ಸಹಾಯ ಮಾಡಿದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದು, ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಲವರ್ ಮನೆ ಮುಂದೆಯೇ ನೇಣಿಗೆ ಶರಣಾದ ಯುವಕ; ಕಾರಣ.?
ಜನಸ್ಪಂದನ ನ್ಯೂಸ್, ತುಮಕೂರು :
ತುಮಕೂರಿನ (Tumkur) ಜಯನಗರ ಬಳಿಯ ಚನ್ನಪ್ಪನಪಾಳ್ಯದಲ್ಲಿ ಪ್ರೀತಿಸಿದ ಹುಡುಗಿಯ ಮನೆ ಮುಂದೆ ಯುವಕನೊಬ್ಬ ಹುಡುಗಿ ಮನೆ ಮುಂದೆಯೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ (suicide) ಘಟನೆ ಇಂದು (ಶನಿವಾರ) ನಡೆದಿದೆ.
ಮೃತ ದುರ್ದೈವಿ ಮಂಜುನಾಥ್ (32) ಎಂದು ತಿಳಿದು ಬಂದಿದೆ.
ಹುಡುಗಿಯ ಕುಟುಂಬಸ್ಥರು ಮದುವೆ ಮಾಡಿಕೊಡಲು ನಿರಾಕರಿಸಿದ (refused to marry) ಹಿನ್ನೆಲೆಯಲ್ಲಿ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದನ್ನು ಓದಿ : KSP : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಟಿಟಿ ವಾಹನದ ಚಾಲಕನಾಗಿರುವ ಮಂಜುನಾಥ್, ಕೆಲ ತಿಂಗಳಿನಿಂದ ಪಕ್ಕದ ಮನೆಯ ಹುಡುಗಿಯನ್ನು ಲವ್ ಮಾಡುತ್ತಿದ್ದ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದ (love) ಕಾರಣ ಮದುವೆಯಾಗಲು (marriage) ಸಹ ಒಪ್ಪಿದ್ದರು. ಹೀಗಾಗಿ ಯುವಕ ಮದುವೆ ಮಾಡಿಕೊಡುವಂತೆ ಹುಡುಗಿಯ ಮನೆಯವರನ್ನ ಕೇಳಿದ್ದನಂತೆ.
ಆದರೆ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ಒಪ್ಪರಲಿಲ್ಲ. ಅಪ್ರಾಪ್ತೆ ಇರುವ ಹಿನ್ನೆಲೆಯಲ್ಲಿ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ.
ಆದರೆ ಹುಡುಗಿಯನ್ನು ಹುಚ್ಚನಂತೆ ಪ್ರೀತಿಸಿದ್ದ ಮಂಜುನಾಥ್, ಆಕೆ ಸಿಗುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ತಡರಾತ್ರಿ ಹುಡುಗಿಯ ಮನೆ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ (committed suicide by hanging himself) ಎಂದು ತಿಳಿದು ಬಂದಿದೆ.
ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!
ಘಟನೆ ನಡೆದ ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.
ಘಟನೆಯ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ (Jayanagar Police Station) ಪ್ರಕರಣ ದಾಖಲಾಗಿದೆ