ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರತಿ ದಿನ ನಮಗೆ 8 ರಿಂದ 9 ಗಂಟೆಗಳ ನಿದ್ದೆ (sleep) ಬೇಕು. ಅದರಲ್ಲಿಯೂ ಕನಿಷ್ಠ 7 ಗಂಟೆಗಳ ಕಾಲ ಶಾಂತಿಯುತವಾಗಿ ಮಲಗಬೇಕು. ಇನ್ನೂ ಚಿಕ್ಕ ಮಕ್ಕಳು ಮತ್ತು ವೃದ್ಧರಿಗೆ ಹೆಚ್ಚು ನಿದ್ರೆ ಅವಶ್ಯಕ. ಬೆಳಗ್ಗೆ ಬೇಗ ಏಳುವವರು ಖಂಡಿತವಾಗಿಯೂ ರಾತ್ರಿ ಬೇಗ ಮಲಗಬೇಕು.
ಆದರೆ ಇಂದಿನ ಯುವಜನತೆ ಬೇಗ ಏಳುವುದು ಇಲ್ಲ, ಬೇಗ ಮಲಗುವುದು ಇಲ್ಲ. ಸರಿಯಾಗಿ ನಿದ್ದೆ ಆಗದಿದ್ದರೆ ಆರೋಗ್ಯ ಸಮಸ್ಯೆ (health problem) ಎದುರಾಗಬಹುದು.
ನೀವು ಪ್ರತಿದಿನ ಕಮ್ಮಿ ನಿದ್ದೆ ಮಾಡುತ್ತಿದ್ದರೆ ಮಧುಮೇಹ ಬರುವ ಸಾಧ್ಯತೆ ಇದೆ. ನಿದ್ರಾಹೀನತೆಯಿಂದ (insomnia) ಜೀವಕೋಶಗಳು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ತಜ್ಞರ ಪ್ರಕಾರ ನಿದ್ರಾಹೀನತೆ ಹೆಚ್ಚಾದರೆ ದೇಹದೊಳಗಿನ ಜೀವಕೋಶಗಳ ಪ್ರವೇಶಕ್ಕೆ ಗ್ಲೂಕೋಸ್ ಅಡ್ಡ ಬರಬಹುದು ಎನ್ನಲಾಗಿದೆ.
ಇದನ್ನು ಓದಿ : ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ PM ವಿದ್ಯಾಲಕ್ಷ್ಮೀ ಯೋಜನೆ ; 10 ಲಕ್ಷದವರೆಗೆ ಸಾಲ.!
ನೀವು ಸರಿಯಾಗಿ ನಿದ್ದೆ ಮಾಡದೇ ಇದ್ದರೆ ಮೆದುಳಿನಲ್ಲಿ ಹಸಿವನ್ನು ನಿಯಂತ್ರಿಸುವ ಹಾರ್ಮೋನ್ಗಳಿಗೆ (Control hunger) ತೊಂದರೆ ಉಂಟಾಗುತ್ತದೆ. ಹೀಗಾಗಿ ನೀವು ಹೆಚ್ಚು ತಿನ್ನಲು ಶುರು ಮಾಡುತ್ತೀರಾ. ತಡರಾತ್ರಿಯಲ್ಲಿಯೂ ಎದ್ದು ತಿನ್ನಲು ಆರಂಭಿಸುತ್ತಿರಾ. ಪರಿಣಾಮವಾಗಿ ನೀವು ಬೆಳಿಗ್ಗೆ ತಡವಾಗಿ ಏಳ್ತೀರಾ. ವ್ಯಾಯಾಮ ಮಾಡದೇ ಇರ್ತೀರಾ. ಇದರಿಂದಾಗಿ ತೂಕ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು.
ರಕ್ತದೊತ್ತಡವು ಪ್ರತಿದಿನ ಮಲಗಿದ ವೇಳೆ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಆದರೆ ಪ್ರತಿದಿನ ಸರಿಯಾಗಿ ನಿದ್ದೆ ಮಾಡದ್ರೆ ಹೋದರೆ ರಕ್ತದೊತ್ತಡ (blood pressures) ಹೆಚ್ಚಾಗುವ ಸಾಧ್ಯತೆ ಇದೆ. ನಿದ್ರಾಹೀನತೆ ಅತಿಯಾದರೆ ಖಂಡಿತವಾಗಿಯೂ ಹೃದ್ರೋಗ ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಹಿಂದಿನ ಸುದ್ದಿ ಓದಿ : ಹಿಂದೂ ಸಂಪ್ರದಾಯದ ಪ್ರಕಾರ, ಯಾರು ಯಾವ ಬೆರಳಿನಿಂದ ತಿಲಕವನ್ನು ಇಟ್ಟುಕೊಳ್ಳಬೇಕು.?
ಜನಸ್ಪಂದನ ನ್ಯೂಸ್, ಡೆಸ್ಕ್ : ತಿಲಕ ಇಟ್ಟ ವ್ಯಕ್ತಿಯ ಮುಖವು ಅತಿ ಸುಂದರವಾಗಿ ಕಾಣುತ್ತದೆ. ಇದು ಹಿಂದೂ ಸಂಪ್ರದಾಯದಲ್ಲಿ ಕೇವಲ ಸಂಕೇತವಲ್ಲ. ಧೈರ್ಯ, ಸಕಾರಾತ್ಮಕತೆ (positivity) ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗಿದೆ.
ಇದನ್ನು ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು stroke ಆಗಿರಬಹುದು.!
ಪ್ರತಿಯೊಂದು ಬೆರಳಿನ ಮೂಲಕ ಕುಂಕುಮ ಹಚ್ಚಿಕೊಳ್ಳಲು ಒಂದು ವಿಭಿನ್ನ ಅರ್ಥವಿದೆ. ಅದು ಏನಂತಾ ಮುಂದೆ ಓದಿ.
ಉಂಗುರ ಬೆರಳು (ring finger) :
ಭಕ್ತಿ ಮತ್ತು ಬದ್ಧತೆಗೆ ಸಂಬಂಧಿಸಿದ ಉಂಗುರದ ಬೆರಳಿನಿಂದ ತಿಲಕವನ್ನು ಹಚ್ಚುವಾಗ ಅದು ಶಾಂತಿ, ಮಾನಸಿಕ ಸ್ಥಿರತೆ (Mental stability), ಬುದ್ಧಿವಂತಿಕೆಯ ಬಿಂದುಗಳನ್ನು ಸುಧಾರಿಸುತ್ತದೆ. ಅಲ್ಲದೇ ಬೌದ್ಧಿಕ ಯಶಸ್ಸಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ
ಈ ಬೆರಳಿನ ಸಹಾಯದಿಂದ ದೇವರಿಗೆ ತಿಲಕವನ್ನು ಇಟ್ಟರೆ ಜೀವನದಲ್ಲಿ ಸಮೃದ್ಧಿ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ (Good luck). ಆದ್ದರಿಂದ ಹಣೆಗೆ ತಿಲಕ ಅಥವಾ ಕುಂಕುಮ ಇಡುವ ವೇಳೆ ಉಂಗುರದ ಬೆರಳನ್ನು ಉಪಯೋಗಿಸಿದರೆ ಒಳ್ಳೆಯದು.
ಇದನ್ನು ಓದಿ : Hindu ಸಂಪ್ರದಾಯದ ಪ್ರಕಾರ, ಯಾರು ಯಾವ ಬೆರಳಿನಿಂದ ತಿಲಕವನ್ನು ಇಟ್ಟುಕೊಳ್ಳಬೇಕು.?
ಮಧ್ಯದ ಬೆರಳು (middle finger) :
ಶನಿ ಗ್ರಹವನ್ನು ಪ್ರತಿನಿಧಿಸುವ ಮಧ್ಯದ ಬೆರಳು, ನಮ್ಮ ಬದುಕಿನಲ್ಲಿ ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಯನ್ನು (Prosperity) ನೀಡುತ್ತದೆ. ಸಾಮಾನ್ಯವಾಗಿ ತಮ್ಮ ಮನೆಯ ಮಕ್ಕಳಿಗೆ ಹಿರಿಯರು ಮಧ್ಯದ ಬೆರಳಿನಿಂದ ತಿಲಕವನ್ನು ಹಚ್ಚುತ್ತಾರೆ. ಈ ಬೆರಳಿನಿಂದ ಹಚ್ಚಿದರೆ ದೀರ್ಘಾಯುಷ್ಯ ಮತ್ತು ಸುರಕ್ಷತೆ ದೊರೆಯುತ್ತದೆ ಎಂಬ ನಂಬಿಕೆ ಅವರದ್ದು.
ತೋರು ಬೆರಳು (index finger) :
ತೋರು ಬೆರಳನ್ನು ಬದುಕಿದವರಿಗೆ ಕುಂಕುಮ ಅಥವಾ ತಿಲಕ ಹಚ್ಚಲು ಎಂದಿಗೂ ಬಳಸುವುದಿಲ್ಲ. ಅಗಲಿದ ಅಥವಾ ಮರಣ ಹೊಂದಿದ ಜನರನ್ನು ಗೌರವಿಸುವ ವೇಳೆ ತೋರು ಬೆರಳನ್ನು ಮಾತ್ರ ಬಳಸಲಾಗುತ್ತದೆ. ಈ ತೋರುಬೆರಳು ಮೋಕ್ಷಕ್ಕೆ (Salvation) ಸಂಬಂಧಿಸಿದೆ. ಸಾಮಾನ್ಯವಾಗಿ ಮರಣದ ಆಚರಣೆಗಳನ್ನು ಮಾಡುವಾಗ ಅಥವಾ ತರ್ಪಣ ವಿಧಿಯಲ್ಲಿ ಇದನ್ನು ಬಳಸುತ್ತಾರೆ.
ಇದನ್ನು ಓದಿ : Health : ಬೆಳಿಗ್ಗೆ ಗೋಡಂಬಿಯನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!
ಹೆಬ್ಬೆರಳು (thumb) :
ಯಶಸ್ಸು, ವಿಜಯ ಮತ್ತು ಶಕ್ತಿಯ ಆಶೀರ್ವಾದವನ್ನು ಸ್ವೀಕರಿಸಲು ಅಥವಾ ನೀಡಲು ಅತ್ಯುತ್ತಮ ಬೆರಳು (Best finger) ಎಂದರೆ ಅದು ಹೆಬ್ಬೆರಳು. ಹಿಂದೆ ರಾಜರ ಕಾಲದಲ್ಲಿ ವಿಜಯ ಸಾಧಿಸಿ ಬರಲು ಈ ಹೆಬ್ಬೆರಳನ್ನು ಬಳಸಿ ಹಣೆಯ ಮೇಲೆ ತಿಲಕವನ್ನು ಹಚ್ಚುತ್ತಿದ್ದರು. ಜನರು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಹೋಗುವ ಸಂದರ್ಭ ಈ ಹೆಬ್ಬೆರಳಿನಿಂದ ಕುಂಕುಮ ಹಚ್ಚಿಕೊಂಡು ತೆರಳುವರು. ಹಿಂದೂ ಸಂಪ್ರದಾಯವು ವ್ಯಕ್ತಿಯ ಹಣೆಗೆ ಈ ಬೆರಳಿನಿಂದ ತಿಲಕವಿಟ್ಟರೆ ತುಂಬಾ ಒಳ್ಳೆಯದು ಎಂದು ನಂಬಿಕೆ ಇಟ್ಟಿದೆ.