ಜನಸ್ಪಂದನ ನ್ಯೂಸ್, ಡೆಸ್ಕ್ : ಈರುಳ್ಳಿ ಇಲ್ಲದೆ ಬಹುತೇಕ ಆಹಾರಗಳು ಅಪೂರ್ಣ. ಈರುಳ್ಳಿಯನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಇದನ್ನು ಓದಿ : ಶಾಲೆಯಲ್ಲಿ ವಿಡಿಯೋ ಮಾಡುತ್ತಿದ್ದ ಶಿಕ್ಷಕಿ ; ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ, ಹೊಡೆದಾಟದ ವಿಡಿಯೋ Viral.!
ಈರುಳ್ಳಿಯಲ್ಲಿ ನಮ್ಮ ದೇಹಕ್ಕೆ ಬೇಕಾದ ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್ಗಳು, ಸೋಡಿಯಂ, ವಿಟಮಿನ್ ಸಿ, ಬಿ 6, ವಿಟಮಿನ್ ಡಿ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣದಂಥ ವಿವಿಧ ಉಪಯುಕ್ತ ಪೋಷಕಾಂಶಗಳು ಇವೆ.
ಈರುಳ್ಳಿಯನ್ನು ಕತ್ತರಿಸುವಾಗ ನಮಗೆ ಹಲವು ಬಾರಿ ಅದರ ಮೇಲ್ಭಾಗದಲ್ಲಿ ಕಪ್ಪು ಬಣ್ಣ ಕಾಣಿಸುತ್ತದೆ. ಇದನ್ನು ಕೆಲವರು ಕತ್ತರಿಸುತ್ತಾರೆ. ಮತ್ತೊಂದಿಷ್ಟು ಜನರು ತೊಳೆದು ತಿನ್ನುತ್ತಾರೆ.
ಆದರೆ ನಿಮಗೆ ಗೊತ್ತಾ.? ಈರುಳ್ಳಿಯಲ್ಲಿ ಕಂಡುಬರುವ ಕಪ್ಪು ಬಣ್ಣವನ್ನು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲಾಗುತ್ತದೆ.
ಆದರೆ ಈ ರೀತಿಯ ಕಪ್ಪು ಬಣ್ಣದ ಶಿಲೀಂದ್ರವು ಹೆಚ್ಚಾಗಿ ಮಣ್ಣಿನಲ್ಲಿ ಕಂಡು ಬರುತ್ತದೆ. ಇದು ಒಂದು ರೀತಿಯ ವಿಷವನ್ನು ಬಿಡುಗಡೆ ಮಾಡುತ್ತದೆ ಎಂದು ಸಂಶೋಧನೆಯು ಹೇಳಿದೆ.
ಇದನ್ನು ಓದಿ : Video : ಹೋಟೆಲ್‌ನಲ್ಲಿ ಇಬ್ಬರು ಯುವತಿಯರ ಜೊತೆ ಪತಿಯ ಸರಸ; ರೆಡ್ ಹ್ಯಾಂಡ್ಆಗಿ ಹಿಡಿದ ಪತ್ನಿ.!
ನೀವು ಖರೀದಿಸಿದ ಈರುಳ್ಳಿಯ ಮೇಲೆ ಕಪ್ಪು ಬಣ್ಣವಿದ್ದರೆ ಅದನ್ನು ನೀವು ತೆಗೆದು ಹಾಕಿ ಸ್ವಚ್ಛವಾಗಿ ತೊಳೆದು ಬಳಸಿದರೆ ಇದರಿಂದ ಯಾವುದೇ ಅಪಾಯವಿಲ್ಲ.
ಆದರೆ, ಅಲರ್ಜಿ ಇರುವವರಿಗೆ ಇದು ಅಪಾಯಕಾರಿ ಎಂದು ಹೇಳಬಹುದು. ಅದೇ ರೀತಿ ನಿಮಗೆ ಅಸ್ತಮಾ ಇದ್ದರೂ ಕೂಡ ಇದು ಅಪಾಯಕಾರಿ. ಒಂದು ವೇಳೆ ಈರುಳ್ಳಿಯ ಒಳಭಾಗವೂ ಕೂಡ ಕಪ್ಪು ಬಣ್ಣವಿದ್ದರೆ ಅದನ್ನು ತಿನ್ನಬಾರದಂತೆ.