ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಹಾವುಗಳು ನೆಲದಲ್ಲಿ ಹರಿದಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಗಾಳಿಯಲ್ಲಿ ಹಾರುವುದನ್ನು ನೀವು ನೋಡಿದ್ದೀರಾ.?
ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ನ್ಯಾಷನಲ್ ಜಿಯೋಗ್ರಫಿ ಚಾನೆಲ್‌ನ ವಿಡಿಯೋ ತುಣುಕು ಇದಾಗಿದೆ.
ವಿಶೇಷ ಜಾತಿಯ ಈ ಹಾವುಗಳನ್ನು ಕ್ರೈಸೊಪಿಲಿಯಾ (chrysopelea) ಎಂದು ಕರೆಯಲಾಗುತ್ತದೆ. ಈ ಹಾವುಗಳು ದಕ್ಷಿಣ ಏಷ್ಯಾ (ಭಾರತ ಮತ್ತು ಶ್ರೀಲಂಕಾ) ಮತ್ತು ಇಂಡೋನೇಷಿಯಾದ ದ್ವೀಪಗಳಲ್ಲಿ ಕಂಡುಬರುತ್ತವೆ. ಈ ಹಾವುಗಳು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಹ ನಾವು ಕಾಣ ಸಿಗುತ್ತವೆ. ಈ ಹಾವುಗಳು ಗಾಳಿಯಲ್ಲಿ ಹಾರಾಡುತ್ತಲೇ ಬೇಟೆಯಾಡುತ್ತವೆ. ಸಾಮಾನ್ಯವಾಗಿ ಈ ಹಾವುಗಳು ಕಡಿಮೆ ವಿಷಕಾರಿಗಳಾಗಿವೆ.
ಅಂದ ಹಾಗೆ ಈ ರೀತಿ ಹಾರಾಡುವ ಈ ಹಾವುಗಳಿಗೆ ರೆಕ್ಕೆಗಳಿಲ್ಲ. ಆದರೆ ವಿಶೇಷ ತಂತ್ರಗಳಿಂದ ಅವುಗಳು ಬಹು ದೂರದ ತನಕ ಹಾರಬಲ್ಲವು. ಈ ಹಾವುಗಳು ತಮ್ಮ ಶರೀರದ ಮೇಲೆ ಅದ್ಭುತ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಮೇಲಿನಿಂದ ಕೆಳಕ್ಕೆ ಹಾರುತ್ತವೆ.
ಅದೇ ಸಮಯದಲ್ಲಿ, ಇದು ಕೆಳಗಿನಿಂದ ಮೇಲಕ್ಕೆ ಕೂಡ ಹಾರಬಲ್ಲದು. ಅಳಿಲುಗಳಂತೆ, ಅವರು ಮೇಲಕ್ಕೆ ಮತ್ತು ಕೆಳಕ್ಕೆ ಜಿಗಿಯಬಹುದು. ಗಾಳಿಯಲ್ಲಿ ತೇಲಾಡುವುದಕ್ಕಾಗಿ ಈ ಹಾವುಗಳು ಲಯಬದ್ಧ ರೀತಿಯಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತವೆ.
ಇವು ಹಾರುವಾಗ ದೇಹವು ಕೆಲವೊಮ್ಮೆ ಅಡ್ಡ, ಕೆಲವೊಮ್ಮೆ ತ್ರಿಕೋನ ಮತ್ತು ಕೆಲವೊಮ್ಮೆ ಎಸ್-ಆಕಾರದಲ್ಲಿ ಕಾಣುತ್ತದೆ. ಸಿಂಗಾಪುರದ ಸಂಶೋಧಕರ ಪ್ರಕಾರ, ಅಲ್ಲಿ ಹಾರುವ ಹಾವುಗಳು ಗಾಳಿ ಇದ್ದಾಗ ಹಗಲಿನಲ್ಲಿ 30 ಅಡಿ ಮತ್ತು ಗಾಳಿ ಇಲ್ಲದಿದ್ದಾಗ 60 ಅಡಿಗಳಿಗಿಂತ ಹೆಚ್ಚು ಜಿಗಿಯಬಹುದು.
When you start seeing flying snakes in your timeline, its time to log off. https://t.co/JMCDvrap1v
— Curiosity (@curiosity92631) August 3, 2024