Friday, September 13, 2024
spot_img
spot_img
spot_img
spot_img
spot_img
spot_img
spot_img

ಸ್ಮಾರ್ಟ್​​ಫೋನ್ Charge ಮಾಡುವಾಗ ಈ ತಪ್ಪುಗಳನ್ನು ಮಾಡಲೇಬಾರದು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ಮಾರ್ಟ್​​ಫೋನ್ ಚಾರ್ಜ್ ಮಾಡುವುದು ಎಲ್ಲರ ಬದುಕಿನ ದೈನಂದಿನ ಭಾಗವಾಗಿ ಬಿಟ್ಟಿದೆ. ಸ್ಮಾರ್ಟ್​​ಫೋನ್ ಬಳಕೆ ಮಾಡುವವರಲ್ಲಿ ಹೆಚ್ಚಿನವರಿಗೆ ಕಾಡುವ ಸಮಸ್ಯೆಯೆಂದರೆ ಬ್ಯಾಟರಿ ಸಮಸ್ಯೆ.

ಎಷ್ಟೇ ಜಾಗರೂಕತೆ ಮಾಡಿದ್ರೂ ಸ್ಮಾರ್ಟ್​​ಫೋನ್ ಬ್ಯಾಟರಿ ಒಂದಲ್ಲಾ ಒಂದು ದಿನ ಡ್ಯಾಮೇಜ್ ಆಗೇ ಆಗುತ್ತೆ. ಬ್ಯಾಟರಿ ಕೆಟ್ಟುಹೋದ ಕೆಲದಿನಗಳ ನಂತರ ಮೊಬೈಲ್​ ಚಾರ್ಜ್ ಆಗುವುದು ಸಹ ನಿಧಾನವಾಗುತ್ತದೆ.

ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!

ನೀವು ಹೊರಗಿರುವಾಗ ಮತ್ತು ಚಾರ್ಜರ್ ನಿಮ್ಮೊಂದಿಗೆ ಇಲ್ಲದಿದ್ದಾಗ, ತೊಂದರೆ ಹೆಚ್ಚಾಗುತ್ತದೆ. ಇದರಿಂದಾಗಿ ಹಲವು ಪ್ರಮುಖ ಕೆಲಸಗಳನ್ನು ಸಹ ಮಾಡಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಫೋನಿನ ಬ್ಯಾಟರಿ ಸ್ವಲ್ಪ ಹೆಚ್ಚು ಬಾಳಿಕೆ ಬರುವಂತೆ ಹೇಗೆ ಮಾಡುವುದು ಎಂಬುದನ್ನು ತಿಳಿಯುವುದು ಅಗತ್ಯ.

* ಚಾರ್ಜ್ ಗೆ ಇಟ್ಟು ಮೊಬೈಲ್‌ನಲ್ಲಿ ವಿಡಿಯೋ ನೋಡುವುದು, ಗೇಮ್ ಆಡುವುದು, ಕರೆ ರಿಸೀವ್ ಮಾಡುವುದು ಹೆಚ್ಚು ಅಪಾಯಕಾರಿ. ಇದರಿಂದ ಫೋನ್‌ಗಳು ಹೆಚ್ಚು ಬಿಸಿಯಾಗುತ್ತವೆ. ಯಾವಾಗ ಬೇಕಾದರೂ ಸ್ಫೋಟಗೊಂಡು ಭಾರಿ ಅಪಾಯ ಸಂಭವಿಸಬಹುದು. ಇದನ್ನು ತಪ್ಪಿಸಿ.

ಇದನ್ನು ಓದಿ : ಯುವತಿಗೆ ಲೈಂಗಿಕವಾಗಿ ಸಹಕರಿಸುವಂತೆ ಬೇಡಿಕೆ ಇಟ್ಟ ಪ್ರಾಂಶುಪಾಲ ; ವಿಡಿಯೋ Viral.!

* ಫೋನ್ ಪಡೆದ ಕೆಲವು ವರ್ಷಗಳ ನಂತರವೂ ಮೂಲ ಚಾರ್ಜಿಂಗ್ ಕೇಬಲ್ ಮತ್ತು ಪ್ಲಗ್ ಹೊಂದಿದ್ದರೆ ಅದನ್ನು ಬದಲಾಯಿಸುವುದು ಉತ್ತಮ. ಅಗ್ಗದ ಬದಲಿಗೆ ಹೆಚ್ಚು ಗುಣಮಟ್ಟದ ಚಾರ್ಜಿಂಗ್ ಕೇಬಲ್ ಮತ್ತು ಪ್ಲಗ್ ಖರೀದಿಸಿ.

* ಆಧುನಿಕ ಫೋನ್‌ಗಳು ಬಹುತೇಕವಾಗಿ ಪುನರ್ ಭರ್ತಿ ಮಾಡಬಹುದಾದ ಲಿಥಿಯಂ- ಐಯಾನ್ ಬ್ಯಾಟರಿಗಳನ್ನು ಬಳಸುತ್ತವೆ. ಈ ಬ್ಯಾಟರಿಗಳಿಗೆ ಹೆಚ್ಚು ಸಂಗ್ರಹ ಸಾಮರ್ಥ್ಯ ಇದೆ. ಆದರೆ ಇವು ಕೆಲವು ಮಿತಿಗಳನ್ನು ಹೊಂದಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ಸಂಪೂರ್ಣವಾಗಿ ಬರಿದಾಗಲು ಅಥವಾ ಈಗಾಗಲೇ ತುಂಬಿರುವಾಗ ಚಾರ್ಜ್ ಆಗಲು ಈ ಬ್ಯಾಟರಿಗಳು ಸೂಕ್ತವಲ್ಲ.

ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ.!

* ನಿರ್ದಿಷ್ಟ ಗಂಟೆಗಳ ಕಾಲ ಮಾತ್ರ ಫೋನ್ ಅನ್ನು ಚಾರ್ಜ್ ಮಾಡಿ. ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಚಾರ್ಜ್ ಮಾಡಲು ಇಡದಿರಿ. ಬ್ಯಾಟರಿ ಶೇ. 100 ಆದಾಗ ಕೂಡಲೇ ಅನ್‌ ಪ್ಲಗ್ ಮಾಡಿ.

ಬಹಳಷ್ಟು ಫೋನ್‌ಗಳು ತುಂಬಿದ ಅನಂತರ ಚಾರ್ಜ್ ಆಗುವುದನ್ನು ನಿಲ್ಲಿಸುವ ಸಿಸ್ಟಮ್‌ಗಳನ್ನು ಒಳಗೊಂಡಿವೆ. ಆದರೆ ಇವುಗಳ ಕಾರ್ಯ ವಿಧಾನದ ಮೇಲೆ ನೀವು ಅನ್‌ ಪ್ಲಗ್ ಮಾಡದೇ ಇದ್ದರೆ ಋಣಾತ್ಮಕ ಪರಿಣಾಮ ಬೀರಬಹುದು.

ಇದನ್ನು ಓದಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 215 ಹುದ್ದೆಗಳಿಗೆ ಅರ್ಜಿ ಆಹ್ವಾನ.!

* ಮೊಬೈಲ್‌ನಲ್ಲಿ ಕೆಲವು ಆಪ್‌ಗಳು ಮೊಬೈಲ್ ಬ್ಯಾಟರಿ ಲೈಫ್ ಅನ್ನು ಉಳಿಸುತ್ತದೆ. ಇಂತಹ ಆಪ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ. ಸಾಧ್ಯವಾದಷ್ಟು ಮೊಬೈಲ್‌ನಲ್ಲಿ ಬ್ಯಾಟರಿ ಸೇವ್ ಮೋಡ್ ಬಳಸಿ. ಅನಗತ್ಯವಾದ ಆಪ್‌ಗಳ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ.

* ಇನ್ನು ಪೋನ್ ನ್ನು ಬೆಚ್ಚಗಿನ ಸ್ಥಳದಲ್ಲಿ ಇಟ್ಟು ಚಾರ್ಜ್ ಮಾಡಬೇಡಿ. ಯಾಕೆಂದರೆ ಬ್ಯಾಟರಿಯ ಆರೋಗ್ಯಕ್ಕಿಂತ ನಿಮ್ಮ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ನೀಡಿ. ಫೋನ್‌ಗಳನ್ನು ಹೆಚ್ಚು ಚಾರ್ಜ್ ಮಾಡುವುದರಿಂದ ಬ್ಯಾಟರಿ ತುಂಬಿ ಗಮನಾರ್ಹವಾದ ಉಷ್ಣತೆಗೆ ಕಾರಣವಾಗುತ್ತದೆ. ಇದು ಮೊಬೈಲ್ ಸ್ಫೋಟಕ್ಕೂ ಕಾರಣವಾಗಬಹುದು. ಹೀಗಾಗಿ ಮೊಬೈಲ್ ಅನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟು ಚಾರ್ಜ್ ಮಾಡುವುದು ಒಳಿತು.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img