ಜನಸ್ಪಂದನ ನ್ಯೂಸ್, ಡೆಸ್ಕ್ : ವಿದ್ಯಾರ್ಥಿಗಳೇ ಶಿಕ್ಷಕರನ್ನು ಥಳಿಸಿದ ಘಟನೆ ಬಿಹಾರದ ಬಕ್ಸಾರ್‌ನ ಶಾಲೆಯೊಂದರಲ್ಲಿ ಘಟನೆ ನಡೆದಿದೆ.
ಮುರಾರ್‌ನ ಇಂಟರ್ ಲೆವೆಲ್ ಹೈಸ್ಕೂಲ್‌ನಲ್ಲಿ ಜಲೇಬಿ ವಿಚಾರವಾಗಿ ಭಾರೀ ಗಲಾಟೆ ನಡೆದಿದೆ.
ಸಿಹಿ ತಿಂಡಿ ವಿಚಾರವಾಗಿ ವಿದ್ಯಾರ್ಥಿ – ಶಿಕ್ಷಕರ ನಡುವೆ ಗಲಾಟೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : 10ನೇ ತರಗತಿ ಪಾಸಾದವರಿಗೆ ಯಾವುದೇ ಪರೀಕ್ಷೆ ಇಲ್ಲದೇ Railway ಇಲಾಖೆಯಲ್ಲಿ ಉದ್ಯೋಗಾವಕಾಶ.!
ಸ್ವಾತಂತ್ರ್ಯ ದಿನಾಚರಣೆಯಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ನೀಡದ ಹಿನ್ನೆಲೆ ಥಳಿಸಿದ್ದಾರೆ. ಸಿಹಿ ತಿಂಡಿ ಸಿಗದ ಕಾರಣಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಮನೆಗೆ ತೆರಳುತ್ತಿದ್ದ ಶಿಕ್ಷಕರಿಗೆ ಮುತ್ತಿಗೆ ಹಾಕಿದರು.
ಅಲ್ಲದೇ ಶಿಕ್ಷಕರನ್ನು ಅಟ್ಟಿಸಿಕೊಂಡು ಹೋಗಿ ಥಳಿಸಿದ್ದಾರೆ. ವಿದ್ಯಾರ್ಥಿಗಳ ಗಲಾಟೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದರು.
ಸದ್ಯ ಜಲೇಬಿ ವಿಚಾರವಾಗಿ ಕೋಲಾಹಲ ಎದ್ದಿರುವ ಈ ಸುದ್ದಿ ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನು ಓದಿ : ವಿದ್ಯಾಭ್ಯಾಸದಲ್ಲಿ ಹಿನ್ನಡೆ : ಮಕ್ಕಳ ಮೊಬೈಲ್ ಒಡೆದು ಪುಡಿ ಮಾಡಿದ ಪೋಷಕರು ; ವಿಡಿಯೋ viral.!
ಈ ಘಟನೆಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ನಂತರ ಕೋಪಗೊಂಡ ಶಿಕ್ಷಕರು ಪೊಲೀಸ್ ಠಾಣೆಗೆ ಆಗಮಿಸಿ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದರು ಎಂದು ವರದಿಯಿಂದ ತಿಳಿದು ಬಂದಿದೆ.