ಜನಸ್ಪಂದನ ನ್ಯೂಸ್, ಡೆಸ್ಕ್ : ತನ್ನ ಕಂದಮ್ಮನಿಗೆ ಆರೋಗ್ಯ ಸರಿಯಿಲ್ಲ, ಔಷಧ ತರುತ್ತೇನೆ ಎಂದು ಕಾಡಿನ ದಾರಿಯಲ್ಲಿ ಪೇಟೆಗೆ ಹೋದ ತಾಯಿಯನ್ನು ಹೆಬ್ಬಾವು ನುಂಗಿದ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇಂಡೋನೇಷ್ಯಾದ ಸಿರಿಯಾತಿ ಪತಿ ಅಡಿಯಾನ್ಸಾ ದಕ್ಷಿಣ ಸುಲವೆಸಿ ಪ್ರಾಂತ್ಯದ ಸಿತೆಬಾ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : 7ನೇ ತರಗತಿ ಪಾಸಾದವರಿಗೆ ಗುಡ್ ನ್ಯೂನ್ : KSRTCಯಲ್ಲಿ 13,000 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ.!
ಸಿರಿಯಾತಿ (36) ಹೆಬ್ಬಾವಿಗೆ ಬಲಿಯಾಗಿರುವ ಮಹಿಳೆ.
ಮಗುವಿಗೆ ಔಷಧ ತರುತ್ತೇನೆ ಎಂದು ಹೋದ ತಾಯಿ ಇಷ್ಟು ಹೊತ್ತಾದರೂ ಏಕೆ ಬರಲಿಲ್ಲ ಎಂದು ಆತಂಕಗೊಂಡ ಮನೆಯವರು, ಊರಿನವರು ಹುಡುಕಿದಾಗ ಮಹಿಳೆಯನ್ನು ಹೆಬ್ಬಾವು ನುಂಗಿರುವುದು ಗೊತ್ತಾಗಿದೆ.
ಪತಿ ಕೆಲಸಕ್ಕೆ ತೆರಳಿದ್ದಾರೆ. ಇತ್ತ ಪತ್ನಿ ಮಗುವಿಗೆ ಔಷಧಿ ತರಲು ಪಟ್ಟಣಕ್ಕೆ ತೆರಳಿದ್ದಾರೆ. ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಹಿರಿಯರ ಕೈಗೊಪ್ಪಿಸಿ ಮಹಿಳೆ ಕಾಡಿನ ದಾರಿ ಮೂಲಕ ಸಾಗಿದ್ದಾಳೆ.
ಇದನ್ನು ಓದಿ : Video : ರೀಲ್ಸ್‌ಗಾಗಿ ಬೈಕ್ ಸಮೇತ ಸಮುದ್ರದ ನೀರಿಗಿಳಿದ ಯುವಕ ; ಇಂಥಾ ದುಸ್ಸಾಹಸಕ್ಕೆ ಕೈಹಾಕಬೇಡಿ ಅಂದ ನೆಟ್ಟಿಗರು.
ಆದರೆ ದುರಾದೃಷ್ಟವಶಾತ್ ಹೆಬ್ಬಾವು ದಾಳಿ ಮಾಡಿದೆ. ಇತ್ತ ಎಷ್ಟು ಹೊತ್ತಾದರೂ ಮಹಿಳೆ ವಾಪಸ್ ಬರಲಿಲ್ಲ. ಹೀಗಾಗಿ ಕುಟುಂಬದ ಆತಂಕ ಹೆಚ್ಚಾಗಿದೆ. ಪತಿ ಹಾಗೂ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ.
ಈ ವೇಳೆ ಪತ್ನಿಯ ಸ್ಲಿಪ್ಪರ್, ಬ್ಯಾಗ್ ಸೇರಿದಂತೆ ಇತರ ವಸ್ತುಗಳು ಪತ್ತೆಯಾಗಿದೆ. ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಚಪ್ಪಲಿ, ಬ್ಯಾಗ್ ಸೇರಿದಂತೆ ಇತರ ವಸ್ತುಗಳು ಸಿಕ್ಕ ಜಾಗದ ಸುತ್ತ ಮುತ್ತ ಹುಡುಕಾಟ ತೀವ್ರಗೊಂಡಿದೆ. ಈ ವೇಳೆ ದೊಡ್ಡ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.
ಇದನ್ನು ಓದಿ : PNBಯಲ್ಲಿ 2,700 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಈ ಹೆಬ್ಬಾವಿನ ಹೊಟ್ಟೆ ದೊಡ್ಡದಾಗಿತ್ತು. ಹೆಬ್ಬಾವನ್ನು ತಜ್ಞರ ನೆರವಿನಿಂದ ಹಿಡಿದ್ದಾರೆ. ಇದರ ಹೊಟ್ಟೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮನೆಯಿಂದ 800 ಮೀಟರ್ ದೂರದಲ್ಲಿ ಹಾವು ಮಹಿಳೆಯನ್ನು ನುಂಗಿದೆ.
ಇಂಡೋನೇಷಿಯಾದ ಸುಲವೆಸಿ ಪ್ರಾಂತ್ಯದಲ್ಲಿ ಈಗಾಗಲೇ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಇತ್ತ ಕಾಂಡಿನಂಚಿನ ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಯೋಜನೆಗೆ ಭಾರಿ ವಿರೋಧ ವ್ಯಕ್ತವಾದ ಕಾರಣ ಕೈಬಿಡಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.