Saturday, July 13, 2024
spot_img
spot_img
spot_img
spot_img
spot_img
spot_img

ಎಸ್ಪಿ ಕಛೇರಿಗೆ ದೂರು ಕೊಡಲು ಬಂದ ಪತ್ನಿಯನ್ನೇ *ತ್ಯೆ ಮಾಡಿದ ಪೊಲೀಸ್ ಕಾನ್ಸ್ ಟೇಬಲ್.!

spot_img

ಜನಸ್ಪಂದನ ನ್ಯೂಸ್, ಹಾಸನ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎಸ್ಪಿ ಕಚೇರಿಗೆ ದೂರು ಕೊಡಲು ಬಂದ ಪತ್ನಿಯನ್ನೇ ಚಾಕುವಿನಿಂದ ಇರಿದು ಕಾನ್ಸ್ ಟೇಬಲ್ ಕೊಲೆ ಮಾಡಿದ್ದಾನೆ.

ಎಸ್ಪಿ ಕಛೇರಿ ಆವರಣದಲ್ಲೇ ಪತ್ನಿಯನ್ನು ಕೊಂದು ಪೊಲೀಸ್ ಕಾನ್ಸ್ ಟೇಬಲ್ ಕ್ರೌರ್ಯ ಮೆರೆದಿರುವ ಘಟನೆ ಹಾಸನದಲ್ಲಿ ನಡೆದಿದೆ.

ಇದನ್ನು ಓದಿ : ಮಧ್ಯರಾತ್ರಿ ಮಣ್ಣು ಮಾಡಿದ್ದ ಮಗು ಬೆಳಿಗ್ಗೆ ಜೋಕಾಲಿಯಲ್ಲಿ ಪ್ರತ್ಯಕ್ಷ ; ಆರಂಕಗೊಂಡ ಜನರು.!

ಪತ್ನಿಗೆ ಚಾಕುವಿನಿಂದ ಕೊಲೆ ಮಾಡಿರುವ ಆರೋಪಿ ಪೊಲೀಸ್ ಕಾನ್ಸ್ಟೇಬಲ್ ಲೋಕನಾಥ ಎಂದು ತಿಳಿದು ಬಂದಿದ್ದು, ಮೃತ ದುರ್ದೈವಿಯನ್ನು ಮಮತಾ ಎಂದು ತಿಳಿದು ಬಂದಿದೆ.

ಆರೋಪಿ ಕಾನ್ಸ್ಟೇಬಲ್ ಶಾಂತಿಗ್ರಾಮ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ, ಕಳೆದ ಕೆಲವು ದಿನಗಳಿಂದ ಗಂಡ ಹೆಂಡತಿ ಗಲಾಟೆ ಮಾಡಿಕೊಂಡಿದ್ದರು.

ಇದನ್ನು ಓದಿ : ಏಕಾಏಕಿ ಹೆಚ್ಚಾದ ನೀರಿನಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ 5 ಜನರು ; ಭೀಕರ ದೃಶ್ಯ viral.!

ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಸೋಮವಾರ ಪತಿ ವಿರುದ್ಧ ದೂರು ನೀಡಲು ಎಸ್ಪಿ ಕಚೇರಿಗೆ ಬಂದಿದ್ದ ಪತ್ನಿಯ ಮೇಲೆ ಸಿಟ್ಟಿಗೆದ್ದ ಲೋಕನಾಥ್ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ಪತಿಯಿಂದ ಚಾಕು ಇರಿತಕ್ಕೆ ಒಳಗಾದ ಮಮತಾಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಮತಾ ಸಾವನ್ನಪ್ಪಿದ್ದಾರೆ.

ಪೊಲೀಸರು ಸದ್ಯ ಕೊಲೆ ಆರೋಪಿ ಲೋಕನಾಥ್‌ನನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

spot_img
spot_img
- Advertisment -spot_img