ಜನಸ್ಪಂದನ ನ್ಯೂಸ್, ಡೆಸ್ಕ್ : ಬಹಳಷ್ಟು ಜನರಿಗೆ ಮುಖದ ಮೇಲಿರುವ ಮಚ್ಚೆಗಳಿರುತ್ತವೆ. ಅವುಗಳು ಅವರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಆದರೆ ಅವುಗಳಿರುವ ಜಾಗದ ಆಧಾರದ ಮೇಲೆ ಅವುಗಳು ಹಿಂದೆ ಆಳವಾದ ಅರ್ಥ ಮತ್ತು ಸಾಂಕೇತಿಕ ಮಹತ್ವವನ್ನು ಹೊಂದಿರುತ್ತದೆ.
* ಎರಡೂ ಮೊಣ ಕೈಯಲ್ಲಿರುವ ಮಚ್ಚೆಗಳು ಆ ವ್ಯಕ್ತಿಯ ಯಶಸ್ಸು ಮತ್ತು ಸಂಪತ್ತನ್ನು ಸೂಚಿಸುತ್ತವೆ. ಅವರು ಕಲಾರಾಧಕರು ಮತ್ತು ಹುಟ್ಟಿನಿಂದಲೇ ಪರೋಪಕಾರಿಯಾಗಿರುತ್ತಾರೆ.
* ಹೊಟ್ಟೆಯ ಬಲ ಭಾಗದಲ್ಲಿ ಮಚ್ಚೆಯಿರುವವರು ಉತ್ತಮ ಸಂಪತ್ತನ್ನು ಹೊಂದಿರುತ್ತಾರೆ. ಎಡ ಭಾಗದಲ್ಲಿರುವವರು ತುಂಬಾ ಅಸೂಯೆ ಸ್ವಭಾವದವರಾಗಿದ್ದು, ಯಾವುದೇ ಪ್ರಯತ್ನವಿಲ್ಲದೆ ದುಡ್ಡು ಮಾಡಲು ಯತ್ನಿಸುತ್ತಾರೆ.
ಇದನ್ನು ಓದಿ : ಮಸ್ತ್ ಡ್ಯಾನ್ಸ್ ಮಾಡಿದ ಖ್ಯಾತ ಪೊಲೀಸ್ ಅಧಿಕಾರಿ Suspend, ಅಂತದ್ದೇನಾಯ್ತು.?
* ಹೊಕ್ಕುಳಿನ ಬಳಿ ಮಚ್ಚೆಯಿದ್ದವರು ಐಷಾರಾಮಿ ಜೀವನ ನಡೆಸುತ್ತಾರೆ ಆದರೆ ಅವರು ವಾಚಾಳಿಗಳಾಗಿರುತ್ತಾರೆ.
* ಮಚ್ಚೆಯು ಎದೆಯ ಬಲ ಭಾಗದಲ್ಲಿದ್ದರೆ ಆರ್ಥಿಕ ತೊಂದರೆ ಕಾಣಿಸಿಕೊಳ್ಳುತ್ತದೆ. ಆದರೆ ಅವರಿಗೆ ಸಮಾಜದಲ್ಲಿ ಒಳ್ಳೆಯ ಗೌರವವಿರುತ್ತದೆ. ಎದೆಯ ಎಡ ಭಾಗದಲ್ಲಿ ಮಚ್ಚೆಯಿದ್ದವರು ತುಂಬಾ ಬುದ್ಧಿವಂತರಾಗಿದ್ದರೂ ಅವರಿಗೆ ಸಾಮಾಜಿಕ ಕೌಶಲ್ಯಗಳು ಇರುವುದಿಲ್ಲ.
* ಎಡ ಕೆನ್ನೆಯಲ್ಲಿ ಮಚ್ಚೆಯಿದ್ದವರು ಅಂತರ್ಮುಖಿ ಮತ್ತು ಸೊಕ್ಕಿನ ಸ್ವಭಾವದವರಾಗಿರುತ್ತಾರೆ. ಅವರು ಜೀವನದಲ್ಲಿ ಅಡೆತಡೆಗಳನ್ನು ಎದುರಿಸಿದರೂ ಮುಂದೆ ದೀರ್ಘ ಕಾಲದವರೆಗೆ ಉತ್ತಮ ಜೀವನ ನಡೆಸುವರು.
* ನಾಲಿಗೆಯ ಮಧ್ಯೆ ಮಚ್ಚೆಯಿದ್ದವರಿಗೆ ಶೈಕ್ಷಣಿಕ ಸಮಸ್ಯೆಯಿರುತ್ತದೆ. ಅವರಿಗೆ ಆರೋಗ್ಯ ಸಮಸ್ಯೆ ಜೊತೆಗೆ ನಿರರ್ಗಳವಾಗಿ ಮಾತನಾಡಲು ಕಷ್ಟಪಡುವರು.
ಇದನ್ನು ಓದಿ : ಗೂಗಲ್‌ನಲ್ಲಿ ಈ ವಿಷಯಗಳನ್ನು ಹುಡುಕಲೇಬೇಡಿ ; ಇಲ್ಲಾಂದ್ರೆ ಜೈಲುವಾಸ Guarantee.!
* ನಾಲಿಗೆಯ ತುದಿಯಲ್ಲಿ ಮಚ್ಚೆಯಿದ್ದವರಿಗೆ ಇತರರ ಮನವೊಲಿಸುವ ಕಲೆ ಚೆನ್ನಾಗಿ ಸಿದ್ಧಿಸಿರುತ್ತದೆ. ಅವರು ಬುದ್ಧಿವಂತರಾಗಿದ್ದು, ಆಹಾರ ಪ್ರಿಯರಾಗಿರುತ್ತಾರೆ. ಅವರ ಮಕ್ಕಳು ಉತ್ತಮ ಜೀವನವನ್ನು ಕಳೆಯುತ್ತಾರೆ.
* ಮೂಗಿನ ತುದಿಯಲ್ಲಿ ಮಚ್ಚೆಯಿದ್ದವರು ಚುರುಕು ಬುದ್ಧಿಯನ್ನು ಹೊಂದಿದವರಾಗಿದ್ದರೂ ಇವರಿಗೆ ಕೋಪ ಬೇಗನೆ ಬರುತ್ತದೆ. ಇವರಿಗೆ ಅತಿಯಾದ ಆತ್ಮಗೌರವವಿರುತ್ತದೆ.
* ಈ ಮಚ್ಚೆ ಮೂಗಿನ ಬಲಬದಿಯಲ್ಲಿದ್ದರೆ ಆ ವ್ಯಕ್ತಿಗೆ ಯಾವುದೇ ಪ್ರಯತ್ನವಿಲ್ಲದೆ ಸಂಪತ್ತು ಬರುತ್ತದೆ. ಮಚ್ಚೆ ಮೂಗಿನ ಮಧ್ಯೆಯಿದ್ದರೆ ಉದ್ಯೋಗ ಬೇಟೆ ಕಷ್ಟವಾಗುತ್ತದೆ.
* ಮಚ್ಚೆ ಗದ್ದದ ಬಲ ಭಾಗದಲ್ಲಿದ್ದರೆ ಆ ವ್ಯಕ್ತಿಗಳು ತಾರ್ಕಿಕವಾಗಿ ಯೋಚನೆ ಮಾಡುವವರಾಗಿರುತ್ತಾರೆ. ಇವರು ಜನರಿಗೆ ವಿಷಯವನ್ನು ಚೆನ್ನಾಗಿ ಮನವರಿಕೆ ಮಾಡಿಕೊಡುತ್ತಾರೆ, ಚೆನ್ನಾಗಿ ಸಂಪಾದನೆ ಮಾಡುತ್ತಾರೆ, ತಮ್ಮ ಜೀವನದಲ್ಲಿ ಹೆಸರು, ಜನಪ್ರಿಯತೆ ಎಲ್ಲಾ ಗಳಿಸುತ್ತಾರೆ.
ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!
* ಎಡ ಭಾಗದ ಗದ್ದದಲ್ಲಿ ಮಚ್ಚೆಯಿದ್ದವರು ನೇರ ಮಾತಿನವರಾಗಿದ್ದು, ಯಾವುದನ್ನೂ ಬೇಗನೆ ಒಪ್ಪಿಕೊಳ್ಳದ ಸ್ವಭಾವದವರಾಗಿರುತ್ತಾರೆ.
* ಮಚ್ಚೆಯು ಗದ್ದದ ಮಧ್ಯದಲ್ಲಿದ್ದರೆ ಆ ವ್ಯಕ್ತಿಗೆ ಅವರ ಕೆಲಸಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಶಂಸೆಗಳು ಸಿಗುತ್ತವೆ.
* ಮಣಿಗಂಟಿನಲ್ಲಿ ಮಚ್ಚೆಯಿದ್ದವರ ಬಾಲ್ಯ ಬಡತನದಲ್ಲಿ ಕಳೆದು ಹೋಗುತ್ತದೆ. ಅವರು ಮುಂದೆ ಲೇಖಕ ಅಥವಾ ಚಿತ್ರ ಕಲಾವಿದರಾಗುತ್ತಾರೆ. ಭಕ್ತಿ ಮಾರ್ಗದಲ್ಲಿ ನಡೆಯುವ ಅವರಿಗೆ ವಯಸ್ಸು ಕಳೆದ ಮೇಲೆ ಆದಾಯ ಹೆಚ್ಚುತ್ತದೆ.
* ಬಲಗೈಯಲ್ಲಿ ಮಚ್ಚೆಯಿದ್ದವರು ಬುದ್ಧಿವಂತರಾಗಿರುತ್ತಾರೆ. ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಎಡಗೈಯಲ್ಲಿ ಮಚ್ಚೆಯಿರುವವರು ಶ್ರೀಮಂತ ಜೀವನ ನಡೆಸುವ ಕನಸು ಹೊಂದಿರುತ್ತಾರೆ. ಆದರೆ ಸಾಮಾನ್ಯ ಜೀವನ ನಡೆಸುತ್ತಾರೆ.
ಇದನ್ನು ಓದಿ : Astrology : ಪ್ರೀತಿ – ಪ್ರೇಮ ಅಂತ ಹೆಚ್ಚು ತಲೆ ಕೆಡಿಸಿಕೊಳ್ತಾರಂತೆ ಈ ರಾಶಿಯವರು.!
* ಬಲ ಕಂಕುಳಿನಲ್ಲಿ ಮಚ್ಚೆಯಿದ್ದವರು ಹಣ ಮತ್ತು ಸಂಪತ್ತಿನ ಆಕಾಂಕ್ಷಿಗಳಾಗಿರುತ್ತಾರೆ. ಎಡ ಕಂಕುಳಿನಲ್ಲಿ ಮಚ್ಚೆಯಿದ್ದವರು ಮಹಿಳೆಯರತ್ತ ಆಕರ್ಷಣೆ ಬೆಳೆಸಿಕೊಳ್ಳುತ್ತಾರೆ.
* ಭುಜದಲ್ಲಿ ಮಚ್ಚೆಯಿರುವವರು ತುಂಬಾ ಧೈರ್ಯವಂತರಾಗಿರುತ್ತಾರೆ. ಮಚ್ಚೆ ಎಡ ಭುಜದಲ್ಲಿರುವವರು ಹುಟ್ಟಿನಿಂದಲೇ ಜಗಳಗಂಟರಾಗಿರುತ್ತಾರೆ.
* ಕತ್ತಿನ ಹಿಂದೆ ಮಚ್ಚೆಯಿದ್ದವರು ತುಂಬಾ ಆಕ್ರಮಣಕಾರಿ ಮತ್ತು ಸಿಟ್ಟಿನ ವ್ಯಕ್ತಿಗಳಾಗಿರುತ್ತಾರೆ. ಸಮಾಜದಿಂದ ವಿಮುಖರಾಗಿರುತ್ತಾರೆ.
* ಕತ್ತಿನ ಮುಂದೆ ಮಚ್ಚೆಯಿದ್ದವರು ಕಲಾಭಿರುಚಿ ಹೊಂದಿದವರಾಗಿದ್ದು ಉತ್ತಮ ಧ್ವನಿಯನ್ನು ಹೊಂದಿರುತ್ತಾರೆ. ಇವರ ಮದುವೆ ನಂತರದ ಜೀವನ ತುಂಬಾ ಚೆನ್ನಾಗಿರುತ್ತದೆ.
ಇದನ್ನು ಓದಿ : Health : ಬೆಳಿಗ್ಗೆ ತುಟಿ ಬಣ್ಣ ಬದಲಾಗಿ ಮುಖ ಊದಿಕೊಳ್ಳುತ್ತಿದೆಯೇ.? ಇದು ಈ ಗಂಭೀರ ರೋಗದ ಲಕ್ಷಣ.!
* ಮೇಲ್ದುಟಿಯ ಮೇಲೆ ಮಚ್ಚೆಯಿದ್ದವರು ಎಲ್ಲರಿಗೂ ಉತ್ತಮ ವ್ಯಕ್ತಿಯಾಗಿರುತ್ತಾರೆ. ಕೆಳ ತುಟಿಯಲ್ಲಿ ಮಚ್ಚೆಯಿದ್ದವರು ತಿಂಡಿ ಪೋತರಾಗಿದ್ದು, ರಂಗಭೂಮಿ ಮತ್ತು ನಟನೆಯಲ್ಲಿ ಆಸಕ್ತರಾಗಿರುತ್ತಾರೆ.
* ಮೇಲ್ದುಟಿಯ ಒಳ ಭಾಗದಲ್ಲಿ ಮಚ್ಚೆಯಿದ್ದವರು ಆಧ್ಯಾತ್ಮದಲ್ಲಿ ಒಲವುಳ್ಳವರಾಗಿರುತ್ತಾರೆ. ಅದು ಕೆಳ ತುಟಿಯ ಒಳ ಭಾಗದಲ್ಲಿದ್ದರೆ ಆ ವ್ಯಕ್ತಿಯು ಮದ್ಯ ವಸನಿ ಮತ್ತು ಜೂಜುಕೋರನಾಗಿರುತ್ತಾನೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.