Monday, May 20, 2024
spot_img
spot_img
spot_img
spot_img
spot_img
spot_img

ಪ್ರಚಾರಕ್ಕೆ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಪತನ : ನಾಯಕಿ ಪಾರು ; Video ವೈರಲ್.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್  : ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಶಿವ ಸೇನಾ ನಾಯಕಿ ಸುಷ್ಮಾ ಅವರನ್ನು ಕರೆದುಕೊಂಡು ಹೋಗಲು ಬಂದಿದ್ದ ಹೆಲಿಕಾಪ್ಟರ್ ಮಹಾರಾಷ್ಟ್ರದ ಮಹಾದ್‌ನಲ್ಲಿ ಲ್ಯಾಂಡ್​ ಆಗುವ ವೇಳೆ ಪತನಗೊಂಡಿದೆ ಎಂದು ತಿಳಿದು ಬಂದಿದೆ.

ಹೆಲಿಕಾಪ್ಟರ್ ಪತನಗೊಳ್ಳುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸದ್ಯ ಗಿರಕಿ ಹೊಡೆದು ನೆಲಕ್ಕಪ್ಪಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral Video) ಆಗಿದೆ. ವೈರಲ್‌ ಆಗಿರುವ ದೃಶ್ಯ ಎದೆ ಝಲ್​ ಎನಿಸುವಂತಿದೆ. ಈ ಘಟನೆಯಲ್ಲಿ ಪೈಲಟ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ​ ಪಾರಾಗಿದಾನೆ. ಘಟನೆಯಲ್ಲಿ ಹೆಲಿಕಾಪ್ಟರ್ ರೋಟರ್ ಬ್ಲೇಡ್‌ಗಳು ಹಾನಿಗೊಳಗಾಗಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 11,307+ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಲ್ಯಾಂಡಿಂಗ್ ಮಾಡುವಾಗ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆ ಉಂಟಾಗಿ ನಿಯಂತ್ರಣ ತಪ್ಪಿದ ಹಿನ್ನಲೆಯಲ್ಲಿ ಇಂದು (ದಿ.03) ಬೆಳಗ್ಗೆ 9:30 ರ ಹೊತ್ತಿಗೆ ಮಹಾದ್​ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಇಂದು ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಶಿವಸೇನಾ (ಉದ್ಧವ್ ಠಾಕ್ರೆ ಗುಂಪು) ನಾಯಕಿ ಸುಷ್ಮಾ ಅಂಧಾರೆ ಅವರು ಆಗಮಿಸಿ ಮಹಾದ್‌ನಲ್ಲಿ ರ‍್ಯಾಲಿ ನಡೆಸಿದರು. ಇದಾದ ಬಳಿಕ ಮುಂದಿನ ರ‍್ಯಾಲಿಗೆ ಬಾರಾಮತಿಗೆ ಹೋಗಬೇಕಿತ್ತು. ಇವರನ್ನು ಪಿಕ್​ಆಪ್​ ಮಾಡಲು ಹೆಲಿಕಾಪ್ಟರ್​ ಬಂದಿತ್ತು ಎಂದು ಹೇಳಲಾಗುತ್ತಿದೆ.

ಕಾಡಿನ ರಾಜನನ್ನೇ ತಿವಿದು ಬಿಸಾಕಿದ ಕಾಡುಕೋಣಗಳು ; ರೋಚಕ ವಿಡಿಯೋ Virul.!

ಆದರೆ ಪಿಕ್​ಆಪ್​ ಮಾಡಲು ಬಂದ ಹೆಲಿಕಾಪ್ಟರ್ ಎರಡು ಸುತ್ತುಗಳನ್ನು ಹಾಕಿ ಭೂಸ್ಪರ್ಶಿಸುವಾಗ ಒಂದೇ ಸಲಕ್ಕೆ ಧೂಳು ಎದ್ದಿದ್ದು, ದೊಡ್ಡ ಶಬ್ದವಾಗಿದೆ. ಒಮ್ಮೆಗೆ ಏನಾಯಿತು ಎಂಬುದೇ ತಿಳಿಯಲಿಲ್ಲ. ಈ ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ ಎಂದು ಸುಷ್ಮಾ ಅಂಧಾರೆ ಹೇಳಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು” ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img