Saturday, July 13, 2024
spot_img
spot_img
spot_img
spot_img
spot_img
spot_img

ಮುಂದೆ ಸಾಗುವಂತೆ ಹಾರ್ನ್‌ ಮಾಡಿದ ಚಾಲಕ ; ಬಂದು ಕಪಾಳಮೋಕ್ಷ ಮಾಡಿದ ಕಾನ್ಸ್‌ಟೇಬಲ್ ; ವಿಡಿಯೋ Viral.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಸ್ತೆಯಲ್ಲಿ ಮುಂದೆ ಚಲಿಸುವಂತೆ ಸೂಚಿಸಿ ಹಾರ್ನ್ ಮಾಡಿದ ಕಾರು ಚಾಲಕನಿಗೆ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಕಪಾಳಮೋಕ್ಷ ಮಾಡಿ, ನಿಂದಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್‌ನ ಸಚೆಂಡಿ ಪ್ರದೇಶದ ಕಿಶನ್ ನಗರದಲ್ಲಿ ಕಳೆದ ಭಾನುವಾರ ನಡೆದಿರುವ ಬಗ್ಗೆ ವರದಿಯಾಗಿದೆ.

ಪೊಲೀಸ್ ಕಾನ್ಸ್‌ಟೇಬಲ್ ಕಪಾಳಕ್ಕೆ ಹೊಡೆಯುವ ದೃಶ್ಯವನ್ನು ಕಾರು ಚಾಲಕವ ಜೊತೆ ಇದ್ದ ವ್ಯಕ್ತಿ ವಿಡಿಯೋ ಮಾಡಿಕೊಂಡಿದ್ದು, ಈ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಇದನ್ನು ಓದಿ : ಬಂದಿದೆಯಂತೆ ಮಾಂಸ ತಿನ್ನುವ ಬ್ಯಾಕ್ಟೀರಿಯಾ ; 48 ಗಂಟೆಗಳ ಸಾವು ಖಚಿತ ಎನ್ನುತ್ತಾರೆ ತಜ್ಞರು!

ಭಾನುವಾರ ಸಮವಸ್ತ್ರದಲ್ಲಿ ಕಾನ್ಸ್‌ಟೇಬಲ್ ತಮ್ಮ ವೈಯಕ್ತಿಕ ಕಾರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದರು. ಕಿಸಾನ್ ನಗರದ ಅಂಡರ್‌ಪಾಸ್ ಬಳಿ ಕಾನ್ಸ್‌ಟೇಬಲ್ ಕಾರು ಜಾಮ್‌ನಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಓರ್ವ ವ್ಯಕ್ತಿ ಟ್ರಾಫಿಕ್ ಜಾಮ್‌ನಲ್ಲಿ ಕಾನ್ಸ್‌ಟೇಬಲ್ ಕಾರನ್ನು ಹಿಂದಿಕ್ಕಲು ಯತ್ನಿಸಿದಾಗ ಕಾರಿಗೆ ಸಣ್ಣಪುಟ್ಟ ಡಿಕ್ಕಿಯಾಗಿದೆ.

ಆಗ ಕಾನ್ಸ್‌ಟೇಬಲ್ ಕಾರಿನಿಂದ ಕೆಳಗಿಳಿದು ಬಂದು ಡಿಕ್ಕಿ ಮಾಡಿದ ವ್ಯಕ್ತಿಯನ್ನು ನಿಂದಿಸಲು ಆರಂಭಿಸಿದ. ಕಾನ್ಸ್‌ಟೇಬಲ್ ನಿಂದಿಸಿದಲ್ಲದೇ ಆತನಿಗೆ ಕಪಾಳಮೋಕ್ಷ ಮಾಡಿರುವ ಘಟನೆಯ ನಡೆದಿದೆ. ಈ ದೃಶ್ಯವನ್ನು ಚಾಲಕನನ ಜೊತೆ ಕುಳಿತಿದ್ದ ಯುವಕ ವಿಡಿಯೋ ಮಾಡಿದ್ದು, ಘಟನೆಯು ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನು ಓದಿ : BBMP : ಬಿಬಿಎಂಪಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇದೇ ವೇಳೆ ಹಿಂದಿರುವ ಕಾರು ಚಾಲಕ ಟ್ರಾಫಿಕ್ ಇದ್ದ ಕಾರಣ ಮುಂದೆ ಚಲಿಸುವಂತೆ ಹಾರ್ನ್ ಮಾಡುತ್ತಾನೆ. ಆದರೆ ನನ್ನ ಕಾರು ತೆಗೆಯುವಂತೆ ಹಾರ್ನ್ ಮಾಡಿ ನನಗೆ ಅವಮಾನ ಮಾಡುತ್ತಿದ್ದಾನೆ ಎಂದು ಭಾವಿಸಿದ ಕಾನ್ಸ್‌ಟೇಬಲ್, ಕಾರಿನಿಂದ ಇಳಿದು ಬಂಡಿ ಕಪಾಳಮೋಕ್ಷ ಮಾಡಿ ನಿಂದಿಸುತ್ತಾರೆ ಎನ್ನಲಾಗುತ್ತಿದೆ. ಆದಾಗ್ಯೂ, ಈಗ ವೈರಲ್ ಆಗಿರೋ ವೀಡಿಯೊವನ್ನು ಜನಸ್ಪಂದನ ನ್ಯೂಸ್ ಖಚಿತಪಡಿಸುವುದಿಲ್ಲ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಪಂದಿಸಿರುವ ಪೊಲೀಸ್ ಇಲಾಖೆ ಸದ್ಯಕ್ಕೆ ಪೇದೆಯನ್ನು ಅಮಾನತು ಮಾಡಿದೆ. ಎಸಿಪಿ ನೇತೃತ್ವದಲ್ಲಿ ಈ ಘಟನೆ ಬಗ್ಗೆ ತನಿಖೆಯನ್ನೂ ನಡೆಸಲಾಗುತ್ತಿದೆ. ಪೇದೆಯ ತಪ್ಪಿದ್ದಲ್ಲಿ ಖಂಡಿತವಾಗಿಯೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆಂದು ಮಾಧ್ಯಮ ಪ್ರಕಟಣೆ ಹೊರಡಿಸಿ ಭರವಸೆ ನೀಡಿದೆ.

spot_img
spot_img
- Advertisment -spot_img