ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮದ ಸಮೀಪ ಓಮಿನಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂರು ಜನರಿಗೆ ಗಾಯಗಳಾದ ಘಟನೆ ಶನಿವಾರ (ಅ.24) ನಡೆದಿದೆ.
ಸಾವನ್ನಪ್ಪಿದವರು ಜಾಫರಸಾಬ ಮಂಗಳೂರು (60) ಮುಸ್ತಫಾ (36) ಹಾಗೂ ಶೊಹೇಬ್ ಮಂಗಳೂರು (6) ಎಂದು ತಿಳಿದು ಬಂದಿದೆ.
ಇದನ್ನು ಓದಿ : IBPS : 4,455 ಬ್ಯಾಂಕ್ ಪಿಒ, ಎಂಟಿ ಹುದ್ದೆಗಳ ಅರ್ಜಿಗೆ ಕೊನೆ ದಿನಾಂಕ ವಿಸ್ತರಣೆ ; ಇಲ್ಲಿದೆ ಮಾಹಿತಿ.!
ಇನ್ನುಳಿದ ಮೂರು ಜನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೃತರು ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದವರು ಎಂದು ತಿಳಿದು ಬಂದಿದೆ.