ಜನಸ್ಪಂದನ ನ್ಯೂಸ್, ಡೆಸ್ಕ್ : ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ತಮಿಳುನಾಡಿನ ತಿರುತ್ತಣಿ ಬಳಿಯ ಚೆನ್ನೈ- ತಿರುಪತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Health : ಶೇಂಗಾವನ್ನು ನೆನೆಸಿಟ್ಟು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.?
ಮೃತಪಟ್ಟವರು ಪ್ರದ್ದೂರಿನ ಗಿಡ್ಡಲೂರು ನಿತೀಶ್ (21), ತಿರುಪತಿಯ ಯುಗೇಶ್ (23), ಚೇತನ್ (22), ಕರ್ನೂಲಿನ ರಾಮಮೋಹನ್ (21), ವಿಜಯವಾಡದ ಬನ್ನು ನಿತೀಶ್ (22) ಎಂದು ವರದಿಯಾಗಿದೆ.
ನೆಲ್ಲೂರು ಮೂಲದ ವಿಷ್ಣು ಮತ್ತು ಪ್ರಕಾಶಂ ಜಿಲ್ಲೆಯ ಚೈತನ್ಯ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲರೂ ಆಂಧ್ರಪ್ರದೇಶದವರಾಗಿದ್ದು, ಚೆನ್ನೈ ಬಳಿಯ ಎಸ್‌ಆರ್‌ಎಂ ಕಾಲೇಜಿನಲ್ಲಿ ಮೂರನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದರು ಎಂದು ವರದಿ ತಿಳಿಸಿದೆ.
ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಏಳು ಜನ ಸ್ನೇಹಿತರು ಎರಡು ದಿನಗಳ ಪ್ರವಾಸ ಕೈಗೊಂಡು ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ಭೀಕರ ಅಪಘಾತ ಸಂಭವಿಸಿದೆ.
ಇದನ್ನು ಓದಿ : Video : ಪ್ರಿಯಕರನಿಗೆ ಜಾಮೀನು ನೀಡಲಿಲ್ಲ ಅಂತ ಜಡ್ಜ್ ಗೆ ಮನಸೋಇಚ್ಛೆ ಥಳಿಸಿದ ವಕೀಲೆ.!
ವೇಗವಾಗಿ ಬಂದ ಟ್ರಕ್ ಒಂದು ಎದುರಿಗೆ ಬರುತ್ತಿದ್ದ ವಿದ್ಯಾರ್ಥಿಗಳಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ.
ಶನಿವಾರ, ಭಾನುವಾರ ರಜೆ ಇದ್ದ ಹಿನ್ನೆಲೆ ಪ್ರವಾಸ ಕೈಗೊಂಡಿದ್ದರು. ತಿರುವಣ್ಣಾಮಲೈಗೆ ಭೇಟಿ ನೀಡಿದ್ದ ವಿದ್ಯಾರ್ಥಿಗಳು ಅರುಣಾಚಲೇಶ್ವರನ ದರ್ಶನ ಪಡೆದುಕೊಂಡು ಚೆನ್ನೈನತ್ತ ಮರಳುತ್ತಿದ್ದರು. ಈ ವೇಳೆ ದುರಂತ ನಡೆದಿದೆ.