ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರೀತಿ ಎಂಬುದು ಇದು ಮೃದುತ್ವ, ಅನ್ಯೋನ್ಯತೆ, ರಕ್ಷಣೆ, ಆಕರ್ಷಣೆ, ವಾತ್ಸಲ್ಯ ಮತ್ತು ನಂಬಿಕೆಯನ್ನು ಒಳಗೊಂಡಿರುತ್ತದೆ. ಈ ಪ್ರೀತಿಯು ನಿಕಟತೆ, ಉತ್ಸಾಹ ಮತ್ತು ಬದ್ಧತೆಯಿಂದ ಗುರುತಿಸಲ್ಪಟ್ಟ ಭಾವನೆಗಳು ಮತ್ತು ನಡವಳಿಕೆಗಳ ಮಿಶ್ರಣವಾಗಿದೆ.
ಆದರೆ ಇತ್ತೀಚೆಗೆ ಇಂತಹ ಪ್ರೀತಿ ಹೆಸರಿನಲ್ಲಿ ಕೆಲವರು ತಾವು ಯಾವ ಸ್ಥಾನದಲ್ಲಿದ್ದೇವೆ ಎಂಬುದನ್ನೇ ಮರೆಯುತ್ತಿದ್ದಾರೆ. ಸದ್ಯ ಶಿಕ್ಷಕಿಯೋರ್ವಳು ವಿದ್ಯಾರ್ಥಿಯನ್ನು ತನ್ನ ಚೆಲ್ಲಾಟಕ್ಕೆ ಬಳಸಿಕೊಂಡು ಕಡೆಗೆ ಅವನ ಬಾಳಿಗೆ ಕೊಳ್ಳಿಯಿಟ್ಟ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಶಾಲೆಯಲ್ಲಿ ವಿಡಿಯೋ ಮಾಡುತ್ತಿದ್ದ ಶಿಕ್ಷಕಿ ; ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ, ಹೊಡೆದಾಟದ ವಿಡಿಯೋ Viral.!
ಇಂದೋರ್‌ನ 19 ವರ್ಷದ ಫಾರ್ಮಸಿ ವಿದ್ಯಾರ್ಥಿ ಗೌರವ್ ಮತ್ತು ಆತನ ಇಂಗ್ಲಿಷ್ ಶಿಕ್ಷಕಿ ಗೌರಿ ತಿವಾರಿ ಕಳೆದ 11 ತಿಂಗಳಿಂದ ಪ್ರೀತಿಸುತ್ತಿದ್ದರು. ಆದರೆ ಗೌರವ್ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ.
ಯಾಕೆಂದರೆ ಇತ್ತೀಚೆಗೆ ಶಿಕ್ಷಕಿ ಗೌರವ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆ ಇಂದೋರ್ ಪೊಲೀಸರು ಗೌರವ್ ನನ್ನು ಅರೆಸ್ಟ್ ಮಾಡಿದ್ದರು.
ಇದನ್ನು ಓದಿ : ಉಚಿತ ಹೊಲಿಗೆ ಯಂತ್ರ ಪಡೆಯಲು ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ; ಇಲ್ಲಿದೆ ಡೈರೆಕ್ಟ್ link.!
ಅಲ್ಲದೇ ಮಹಿಳಾ ಠಾಣೆಯ ಪೊಲೀಸರು ಪ್ರಕರಣವನ್ನು ಹಿಂಪಡೆಯಲು 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಗೌರವ್ ತಂದೆ ತಿಳಿಸಿದ್ದಾರೆ. ಆದರೆ 45 ಸಾವಿರ ರೂ. ಕೊಟ್ಟು ಮಗನನ್ನು ಬಿಡಿಸಿಕೊಂಡು ಬಂದಿದ್ದರು ಎನ್ನಲಾಗಿದೆ.
ಗೌರವ್ ಠಾಣೆಯಿಂದ ಮನೆಗೆ ಬಂದವನೇ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಹೊರಗೆ ಬರಲೇ ಇಲ್ಲ. ಆತನ ಸಹೋದರಿ ರೂಂಗೆ ಹೋಗಿ ನೋಡಿದಾಗ ಗೌರವ್ ನೇಣಿಗೆ ಕೊರಳೊಡ್ಡಿದ್ದಾನೆ.
ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!
ತಕ್ಷಣ ಕುಟುಂಬಸ್ಥರು ಹತ್ತಿರದ ಆಸ್ಪತ್ರೆಗೆ ಧಾವಿಸಿದಾಗ ಆತ ಸಾವನ್ನಪ್ಪಿದ್ದ. ಗೌರವ್ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರು ಮಹಿಳಾ ಪೊಲೀಸ್ ಠಾಣೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು. ಠಾಣೆ ಸಿಐ ಕೌಶಲ್ಯ ಚೌಹಾಣ್ ಅವರನ್ನು ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿದರು ಎಂದು ವರದಿಯಾಗಿದೆ.
ಇನ್ನೂ ತನ್ನ ಮೇಲೆ ಬಂದಿರುವ ಆರೋಪವನ್ನು ತಳ್ಳಿಹಾಕಿರುವ ಇಂಗ್ಲಿಷ್ ಶಿಕ್ಷಕಿ, ಗೌರವ್ ತನಗೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾರೆ.
ಅವರಿಬ್ಬರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಆತ ಹೇಳಿರುವುದಾಗಿ ಹೇಳಿದ್ದಾರೆ. ಆದರೆ ಗೌರವ್ ತಂದೆ ಆಕೆಯ ಆರೋಪವನ್ನು ನಿರಾಕರಿಸಿದ್ದಾರೆ.
ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ.!
ಕಳೆದ 11 ತಿಂಗಳಿಂದ ಗೌರವ್ ಇಂಗ್ಲಿಷ್ ಕೋಚಿಂಗ್ ಅಂತ ಆಕೆಯ ಬಳಿ ತೆರಳುತ್ತಿದ್ದ. ಆದರೆ ಆಕೆ ಬೇರೆ ಹುಡುಗಿಯರೊಂದಿಗೆ ಮಾತನಾಡದಂತೆ ತಡೆದಿದ್ದಾಳೆ. ಒಂದು ದಿನ ಅವನ ಮಗ ಮನೆಯಲ್ಲಿ ಹಣ ಕದಿಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಏಕೆ ಎಂದು ಕೇಳಿದಾಗ ಇಂಗ್ಲಿಷ್ ಶಿಕ್ಷಕಿ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ ಎಂದು ಹೇಳಿರುವುದಾಗಿ ಗೌರವ್ ತಂದೆ ಹೇಳಿದ್ದಾರೆ ಎಂದು ವರದಿಯಾಗಿದೆ.