ಜನಸ್ಪಂದನ ನ್ಯೂಸ್, ಡೆಸ್ಕ್ : ಬಾಲಕಿಯರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿದ ಆರೋಪದ ಮೇಲೆ ಶಿಕ್ಷಕನನ್ನು ಅರೆಸ್ಟ್ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿರುವ ಮಹಾನಗರ ಪಾಲಿಕೆಯ ಶಾಲೆಯಲ್ಲಿ ನಡೆದಿದೆ.
ಆರೋಪಿ ಶಿಕ್ಷಕ ಮುಝಮ್ಮಿಲ್ ಎಂದು ವರದಿಯಾಗಿದ್ದು, ಆತನನ್ನು ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿ : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನಾಂಕ.!
ಶಿಕ್ಷಕ ತನ್ನ ಮೊಬೈಲ್ ಫೋನ್‌ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸುತ್ತಿದ್ದನಂತೆ. ಶಿಕ್ಷಕನ ಈ ಕೃತ್ಯವನ್ನು ವಿದ್ಯಾರ್ಥಿನಿಯೋರ್ವಳು ತನ್ನ ಪೋಷಕರಿಗೆ ತಿಳಿಸಿದ ಹಿನ್ನೆಲೆ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
7 ನೇ ತರಗತಿಯ ಬಾಲಕಿ ಶಾಲೆಗೆ ನಿತ್ಯ ತಡವಾಗಿ ಹೋಗುತ್ತಿದ್ದಳು. ಈ ವಿಚಾರವನ್ನು ಶಾಲೆಯ ಮುಖ್ಯೋಪಾಧ್ಯಾಯರು ಆಕೆಯ ಪೋಷಕರಿಗೆ ಕರೆ ಮಾಡಿದ್ದಾರೆ. ನಂತರ ಪೋಷಕರು ಬಾಲಕಿಯನ್ನು ವಿಚಾರಿಸಿದ್ದಾರೆ.
ಇದನ್ನು ಓದಿ : Police ಪರೀಕ್ಷೆ ಬರೆಯಲು ಹೋದ ಪತಿ : ಬಾಯ್ ಫ್ರೆಂಡ್ ನನ್ನು ಮನೆಗೆ ಕರೆದ ಪತ್ನಿ; ಮುಂದೆನಾಯ್ತು ಗೊತ್ತಾ.?
ಈ ವೇಳೆ ಬಾಲಕಿ, ಶಿಕ್ಷಕ ತನ್ನ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದಾಗಿನಿಂದ ಶಾಲೆಗೆ ಹೋಗಲು ಮನಸ್ಸಿಲ್ಲ ಎಂದು ಹೇಳಿದ್ದಾಳೆ ಎಂದು ಶಾಂತಿನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಿನಾಯಕ ಗಾಯಕವಾಡ್ ತಿಳಿಸಿದ್ದಾರೆ.
ನಂತರ ಇತರ ವಿದ್ಯಾರ್ಥಿನಿಯರು ಕೂಡ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದು, ಪೋಷಕರು ಪೊಲೀಸರನ್ನು ಸಂಪರ್ಕಿಸಿ ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.