ಜನಸ್ಪಂದನ ನ್ಯೂಸ್, ಡೆಸ್ಕ್ : ವಿವಾಹಿತ ಸಂಗಾತಿಯು ತಮ್ಮ ಸಂಗಾತಿಯಲ್ಲದ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಮ್ಮತಿಯ ಹೆಚ್ಚುವರಿ ಲೈಂಗಿಕತೆ ಸಂಬಂಧನನ್ನು ಹೊಂದಿದ್ದರೆ ಅದನ್ನು ಅಕ್ರಮ ಸಂಬಂಧಗಳು ಅಥವಾ ವಿವಾಹೇತರ ಸಂಬಂಧಗಳು ಎಂದು ಕರೆಯುತ್ತೇವೆ.
ಇಂಥ ಸಂಬಂಧಗಳು ಸುಂದರ ಸುಖಮಯ ಸಂಸಾರವನ್ನು ಹಾಳು ಮಾಡುತ್ತವೆ. ಅದು ಅನೇಕ ದಂಪತಿಗಳನ್ನು ದೂರ ಮಾಡಿದೆ, ಸಾಕಷ್ಟು ಅನೂನ್ಯವಾದ ಸಂಸಾರಗಳನ್ನು ಒಡೆದು ಹಾಕುತ್ತವೆ. ಇತ್ತಿಚೇಗೆ ಈ ರೀತಿಯ ವಿವಾಹೇತರ ಸಂಬಂಧಗಳು ಹೆಚ್ಚಾಗಿದ್ದು, ಮದುವೆಯಾದ ಗಂಡಸು ಇನ್ನೊಬ್ಬ ಮಹಿಳೆ/ಯುವತಿಯ ಜೊತೆ ಅಥವಾ ಹೆಂಗಸು ಇನ್ನೊಬ್ಬ ಪುರುಷನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ.
ಮತ್ತಷ್ಟು ಓದಿ : ಅಂಚೆ ಇಲಾಖೆಯಲ್ಲಿ ಖಾಲಿ ಇರುವ 44,228 ಹುದ್ದೆಗಳಿಗೆ ಇಂದಿನಿಂದ (ದಿ.15) ಅರ್ಜಿ ಆಹ್ವಾನ.!
ಇದೀಗ ಅಂತಹದೇ ವಿವಾಹೇತರ ಸಂಬಂಧ ಪ್ರಕರಣವೊಂದು ಬೆಳಕಿಗೆ ಬಂದಿದೆ., ಚೀನಾದಲ್ಲಿ ಪತ್ನಿಯ ನಡವಳಿಕೆಯ ಬಗ್ಗೆ ಅನುಮಾನಗೊಂಡ ಪತಿಯೊಬ್ಬ ತನ್ನ ಪತ್ನಿ ರಹಸ್ಯ ಸಂಬಂಧವನ್ನು ಪತ್ತೆಹಚ್ಚಲು ಡ್ರೋನ್‌ನ್ನು ಬಳಸಿದ್ದು ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ.
ಈ ಘಟನೆ ಚೀನಾದ ಹುಬೈ ಪ್ರಾಂತ್ಯದ ಶಿಯಾನ್ ಎಂಬಲ್ಲಿ ನಡೆದಿದ್ದು, ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಶಂಕೆಯನ್ನು ಹೊಂದಿದ್ದ ಪತಿರಾಯ ಡ್ರೋನ್ ಕ್ಯಾಮೆರಾ ಬಳಸಿ ಆಕೆಯ ಕಳ್ಳಾಟವನ್ನು ರೆಡ್ ಹ್ಯಾಂಡ್ ಆಗಿ ಪತ್ತೆ ಹಚ್ಚಿದ್ದಾನೆ.
ಮತ್ತಷ್ಟು ಓದಿ : Health : ಕಣ್ಣಿನಲ್ಲಿ ಈ ಬದಲಾವಣೆಗಳಾಗುತ್ತಿವೆಯೇ.? ಇವು ಈ ರೋಗದ ಮುನ್ಸೂಚನೆಗಳು..!
33 ವರ್ಷ ವಯಸ್ಸಿನ ಜಿಂಗ್ ಎಂಬ ಹೆಸರಿನನು ಅವನ ಹೆಂಡತಿಯ ಅಕ್ರಮ ಸಂಬಂಧವನ್ನು ಪತ್ತೆ ಹಚ್ಚಲು ಹೈಟೆಕ್ ಕಣ್ಗಾವಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದನು. ಜಿಂಗ್‌ನಿಂದ ನಡೆಸಲ್ಪಟ್ಟ ಡ್ರೋನ್, ಅವನ ಹೆಂಡತಿ ಮತ್ತು ಅವಳ ಬಾಸ್ ಕೈ ಕೈ ಹಿಡಿದು ನಡೆದಾಡುವ ದೃಶ್ಯಗಳು ಸೆರೆಹಿಡಿಯಿತು.
ಒಂದು ದಿನ ಪತ್ನಿ ಹೊರಗಡೆ ಹೋದಾಗ ಆಕೆಯ ಹಿಂದೆ ಡ್ರೋನ್ ಕ್ಯಾಮೆರಾವನ್ನೂ ಟ್ರ್ಯಾಕ್ ಮಾಡುತ್ತಾನೆ. ಕ್ಯಾಮೆರಾದಲ್ಲಿ ಪತ್ನಿ ಕಾರಿನಲ್ಲಿ ಬೇರೊಬ್ಬ ಗಂಡಸಿನ ಜೊತೆ ಗುಡ್ಡ ಪ್ರದೇಶಕ್ಕೆ ಹೋಗಿ, ಅಲ್ಲಿ ಕೈಕೈ ಹಿಡಿದು ಪುಟ್ಟ ಮಣ್ಣಿನ ಗುಡಿಸಲಿನ ಒಳಗೆ ಪ್ರವೇಶಿಸಿ ನಂತರ 20 ನಿಮಿಷಗಳ ನಂತರ ಗುಡಿಸಲಿನಿಂದ ಹೊರ ಬಂದು ಆ ವ್ಯಕ್ತಿಯೊಂದಿಗೆಯೇ ಕಛೇರಿಗೆ ಹೋದಂತಹ ದೃಶ್ಯವನ್ನು ಕಂಡು ಜಿಂಗ್ ಶಾಕ್ ಆಗುತ್ತಾನೆ.
ಪತ್ನಿ ಆಕೆಯ ಬಾಸ್ ಜೊತೆಗೆಯೇ ಅನೈತಿಕ ಸಂಬಂಧವನ್ನು ಹೊಂದಿದ್ದು, ಈಕೆಯ ಕಳ್ಳಾಟ ಗೊತ್ತಾಗಿ ಜಿಂಗ್ ಇದೀಗ ಈ ಸಾಕ್ಷ್ಯದ ಆಧಾರದ ಮೇಲೆ ತನ್ನ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ.