Saturday, July 13, 2024
spot_img
spot_img
spot_img
spot_img
spot_img
spot_img

ವಿಚಿತ್ರ ಸಂಪ್ರದಾಯ : ಇಲ್ಲಿ ಮದುವೆಗೆ ಒಂದೇ ದಿನ Validity.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರತಿಯೊಂದು ದೇಶ, ನಗರ ಮತ್ತು ಪಟ್ಟಣಗಳಲ್ಲಿ ಮದುವೆ ಆಚರಣೆ ಮತ್ತು ಅದರ ಪದ್ಧತಿಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತದೆ.

ಭಾರತದಲ್ಲಂತೂ ಮದುವೆಯನ್ನು ಹಬ್ಬದಂತೆ ಆಚರಿಸಲಾಗುತ್ತೆ. ವಿದೇಶದಲ್ಲಿ ಮದುವೆಗಳು ಯಾವುದೇ ಪಂಡಿತರು ಮತ್ತು ಮಂತ್ರಗಳನ್ನು ಪಠಿಸದೆ ನಡೆಯುತ್ತವೆ.

ಇದನ್ನು ಓದಿ : Reel’s Madness : ಕಾರು ರಿವರ್ಸ್ ಗೇರ್‌ನಲ್ಲಿದ್ದಾಗ ಕ್ಲಚ್ ಬದಲು ಎಕ್ಸಲೇಟರ್ ಒತ್ತಿ 300 ಅಡಿ ಪ್ರಪಾತಕ್ಕೆ ಬಿದ್ದು ಯುವತಿ ಸಾವು.!

ಆದರೆ ಚೀನಾದಲ್ಲಿ ವಿಚಿತ್ರವಾದ ಮದುವೆಯ ಸಂಪ್ರದಾಯವಿದೆ. ಅದೇನೆಂದರೆ ಮದುವೆಗೆ 24 ಗಂಟೆ ತನಕ ಮಾತ್ರ ಮಾನ್ಯವಾಗಿರುತ್ತದೆ. ಇದು ವಿಶಿಷ್ಟ ವಿವಾಹ ಚೀನಾದ ಹುಬೈ ಪ್ರಾಂತ್ಯದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತದೆ.

ಇಲ್ಲಿ ಹುಡುಗರು ಮತ್ತು ಹುಡುಗಿಯರು ಕೇವಲ 24 ಗಂಟೆಗಳಿಗೆ ಮಾತ್ರ ಮದುವೆಯಾಗುತ್ತಾರೆ ಅಥವಾ ಗಂಡ ಹೆಂಡತಿಯಾಗಿ ಇರುತ್ತಾರೆ.

ಇಂತಹ ಮದುವೆಗಳು ಬಹಳ ಗೌಪ್ಯವಾಗಿ ನಡೆಯುತ್ತವೆ. ಕಳೆದ 6 ವರ್ಷಗಳಲ್ಲಿ ಈ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಚೀನಾದಲ್ಲಿ ಮದುವೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಹುಡುಗರು ಮದುವೆಯಿಲ್ಲದೆ ಬದುಕುತ್ತಿದ್ದಾರೆ.

ಆದರೆ ಸಮಸ್ಯೆಯೆಂದರೆ, ಚೀನಾದಲ್ಲಿ, ಅವಿವಾಹಿತರಾಗಿ (unmarried) ಸಾಯುವ ಹುಡುಗರನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಅವಿವಾಹಿತ ಎಂಬ ತಮ್ಮ ಗುರುತನ್ನು ಅಳಿಸಿ ಹಾಕಲು ಹುಡುಗರು ಒಂದು ದಿನದ ಮದುವೆ (one day wedding) ಮಾಡಿಕೊಳ್ಳುತ್ತಾರೆ.

ಇದನ್ನು ಓದಿ : ಬೈಕ್‌ನಲ್ಲಿ ಹೊರಟ ದಂಪತಿ : ಮಹಿಳೆಯನ್ನೇ ಗುರಿಯಾಗಿಸಿ ದಾಳಿ ಮಾಡಿದ ಬಿಡಾಡಿ ಹಸು ; ಭಯಾನಕ ವಿಡಿಯೋ ವೈರಲ್.!

ಚೀನಾದ ಕೆಲವು ಪ್ರದೇಶಗಳಲ್ಲಿ, ಒಬ್ಬ ಹುಡುಗನು ಮದುವೆಯಿಲ್ಲದೆ ಸತ್ತರೆ, ಅವನ ಅಂತ್ಯ ಸಂಸ್ಕಾರದ ಸಮಯದಲ್ಲಿಯೂ ಮದುವೆ ಮಾಡಿಸುವ ಸಂಪ್ರದಾಯವಿದೆ.

ಇನ್ನು ಮದುವೆಯ ಬಳಿಕ ಒಂದು ದಿನ ವಧುಗಳಾಗುವ (one day bride) ಹುಡುಗಿಯರಿಗೆ ಸಾಕಷ್ಟು ಹಣವನ್ನು ನೀಡಲಾಗುತ್ತದೆ. ಚೀನಾದಲ್ಲಿ, ಒಂದು ದಿನದ ವಿವಾಹ ವ್ಯವಹಾರವು ಬಹಳ ವಿಸ್ತರಿಸಿದೆ.

spot_img
spot_img
- Advertisment -spot_img