ಜನಸ್ಪಂದನ ನ್ಯೂಸ್, ಡೆಸ್ಕ್ : ಜಗತ್ತು ಎಷ್ಟೇ ಮುಂದುವರಿದಿದ್ದರೂ ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ಅಚ್ಚರಿಯನ್ನುಂಟು ಮಾಡುತ್ತದೆ.
ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳು ಇವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಇನ್ನು ಕೆಲವು ಆಚರಣೆಗಳು ನಮ್ಮನ್ನು ಆಶ್ಚರ್ಯಕ್ಕೆ ದೂಡಬಹುದು.
ಇದನ್ನು ಓದಿ : ಹಬ್ಬಕ್ಕೆಂದು ತವರು ಮನೆಗೆ ಹೋದ ಪತ್ನಿ : ಬೇರೊಬ್ಬಳನ್ನ ಮನೆಗೆ ಕರೆದ ಪತಿ ; ಮುಂದೆನಾಯ್ತು.?
ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯ ಪಿನಿ ಗ್ರಾಮವು ಪುರುಷರಿಗಾಗಿ ಕಟ್ಟುನಿಟ್ಟಾದ ಸಂಪ್ರದಾಯವನ್ನು ಹೊಂದಿದ್ದು, ಅದನ್ನು ಅನುಸರಿಸಬೇಕು. ಅಲ್ಲದೇ ಮಹಿಳೆಯರು ಇಂದಿಗೂ ಬಟ್ಟೆ ಧರಿಸದಿರುವ ಅನಾದಿ ಸಂಪ್ರದಾಯವನ್ನು ಅನುಸರಿಸುತ್ತಾ ಬಂದಿದ್ದಾರೆ.
ಸಂಪ್ರದಾಯದ ಪ್ರಕಾರ, ಮಹಿಳೆಯರು ವರ್ಷದಲ್ಲಿ 5 ದಿನ ಯಾವುದೇ ಬಟ್ಟೆಯನ್ನು ಧರಿಸುವುದಿಲ್ಲ. ಅಲ್ಲದೆ ಪುರುಷರು ಮದ್ಯಪಾನ ಮಾಡುವಂತಿಲ್ಲ. ಪಿಣಿ ಗ್ರಾಮದಲ್ಲಿ ಈ ಸಂಪ್ರದಾಯವು ಆಸಕ್ತಿದಾಯಕ ಇತಿಹಾಸವನ್ನು ಹೊಂದಿದೆ.
ಇದನ್ನು ಓದಿ : Onlineನಲ್ಲಿ ಖರೀದಿಸಿದ ಅಂಡರ್ವೇರ್ ಧರಿಸಿದ್ಮೇಲೆ ನನ್ನ ಮಗಳು ಪ್ರೆಗ್ನೆಂಟ್ ಆಗಿದ್ದಾಳೆ ಎಂದು ಕೋರ್ಟ್ ಮೆಟ್ಟಿಲೇರಿದ ತಾಯಿ.!
ಪ್ರತಿ ವರ್ಷ ಪಿಣಿ ಗ್ರಾಮದ ಮಹಿಳೆಯರು ಶ್ರಾವಣ ಮಾಸದಲ್ಲಿ 5 ದಿನ ಬಟ್ಟೆ ಧರಿಸುವುದಿಲ್ಲ. ಒಂದು ವೇಳೆ ಮಹಿಳೆಯರು ಈ ಸಂಪ್ರದಾಯವನ್ನು ಅನುಸರಿಸಿಲ್ಲವಾದರೇ ಕೆಲವು ದಿನಗಳಲ್ಲಿ ಕೆಟ್ಟ ಸುದ್ದಿಗಳು ಕೇಳಿಬರುತ್ತವೆ ಎಂಬ ನಂಬಿಕೆ.
ಅಲ್ಲದೇ ಆ ದಿನಗಳಲ್ಲಿ ಇಡೀ ಹಳ್ಳಿಯ ಗಂಡ -ಹೆಂಡತಿ ಪರಸ್ಪರ ಮಾತನಾಡುವಂತಿಲ್ಲ. ಶ್ರಾವಣ ಮಾಸದ ಈ ಐದು ದಿನಗಳಲ್ಲಿ ಗಂಡ ಹೆಂಡತಿ ಒಬ್ಬರನ್ನೊಬ್ಬರು ನೋಡಿ ನಗುವಂತಿಲ್ಲ. ಹೀಗಾಗಿ ಈ 5 ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಮನೆಯಿಂದ ಹೊರಗೆ ಕಾಲಿಡುವುದಿಲ್ಲವಂತೆ.
ಇದನ್ನು ಓದಿ : ವಿದ್ಯುತ್ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪುರುಷರು ಈ ಸಂಪ್ರದಾಯವನ್ನು ಅನುಸರಿಸುವುದು ಬಹಳ ಮುಖ್ಯವೆಂದು ತಿಳಿಯಲಾಗಿದೆ. ಈ ಸಂಪ್ರದಾಯದ ನಿಯಮಗಳು ಪುರುಷರಿಗೆ ಬೇರೆ ಇವೆ. ಶ್ರಾವಣದ ಐದು ದಿನಗಳಲ್ಲಿ ಪುರುಷರು ಮದ್ಯ ಮತ್ತು ಮಾಂಸ ತಿನ್ನುವಂತಿಲ್ಲ. ಇದನ್ನು ಪಾಲಿಸದಿದ್ದರೆ ದೇವರು ಕೋಪಗೊಂಡು ತೊಂದರೆ ಕೊಡುತ್ತಾನೆ ಎಂಬ ನಂಬಲಾಗಿದೆ.
ಈ ಸಂಪ್ರದಾಯ ಅನುಸರಿಸಲು ಇರುವ ಹಿಂದಿನ ಕಥೆ :
ಹಿಂದೆ ಪಿನಿ ಗ್ರಾಮದಲ್ಲಿ ದೆವ್ವಗಳು ಓಡಾಡುತ್ತಿದ್ದವು. ಆ ದೆವ್ವಗಳು ಹಳ್ಳಿಯ ಹೆಂಗಸರ ಬಟ್ಟೆಗಳನ್ನು ಹರಿದು ಹಾಕುತ್ತಿದ್ದವಂತೆ. ಹೀಗಾಗಿ ಗ್ರಾಮಸ್ಥರನ್ನು ಕಾಪಾಡಲು ‘ಲಹುವಾ ಘೋಂಡ್’ ದೇವಿಯು ಗ್ರಾಮಕ್ಕೆ ಬಂದಳು. ಈ ದೇವಿಯು ರಾಕ್ಷಸರನ್ನು ಕೊಂದು ಜನರನ್ನು ರಕ್ಷಿಸಿದಳು. ಈ ಘಟನೆ ಚೈತ್ರ ಮಾಸದ ಮೊದಲ ದಿನ ನಡೆದಿರುವುದಾಗಿದೆ.
ಇದನ್ನು ಓದಿ : ಪಾರ್ಕ್‌ನಲ್ಲಿ ಕುಳಿತಿದ್ದ ಯುವಕನ ಮೇಲೆ ಬೆತ್ತಲೆಯಾಗಿ ಬಂದ ಯುವತಿಯಿಂದ ಲೈಂಗಿಕ ದೌರ್ಜನ್ಯ ; ವಿಡಿಯೋ Viral.!
ಅಂದಿನಿಂದ ಶ್ರಾವಣ ಮಾಸದಲ್ಲಿ 5 ದಿನಗಳ ಕಾಲ ಮಹಿಳೆಯರು ಬಟ್ಟೆ ಧರಿಸಬಾರದು ಎಂಬ ಸಂಪ್ರದಾಯ ನಡೆದುಕೊಂಡು ಬಂದಿದೆ. ಬಟ್ಟೆಯಲ್ಲಿ ಸುಂದರವಾಗಿ ಕಂಡರೆ ಅವರನ್ನು ರಾಕ್ಷಸ ಕರೆದುಕೊಂಡು ಹೋಗುತ್ತಾರೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ.
ಈ ಸಮಯದಲ್ಲಿ ಮಹಿಳೆಯರಿಗೆ ಒಂದೇ ಉಡುಪನ್ನು ಧರಿಸಲು ಅವಕಾಶವಿದೆ. ಈ ಸಂಪ್ರದಾಯವನ್ನು ಅನುಸರಿಸುವ ಪಿಣಿ ಗ್ರಾಮದ ಮಹಿಳೆಯರು ಉಣ್ಣೆಯಿಂದ ಮಾಡಿದ ಬಟ್ಟೆಗಳನ್ನು ಬಳಸಬಹುದು. ಇದೇ ವೇಳೆ ಪಿಣಿ ಗ್ರಾಮದ ಜನರು ಹೊರಗಿನವರನ್ನು ಗ್ರಾಮಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಅಲ್ಲದೆ ಹೊರಗಿನವರು ಅವರ ವಿಶೇಷ ಹಬ್ಬದಲ್ಲಿ ಭಾಗವಹಿಸುವುದಿಲ್ಲವಂತೆ.