ಜನಸ್ಪಂದನ ನ್ಯೂಸ್, ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಭಾರೀ ಪ್ರಮಾಣದ ಕಲ್ಲು ತೂರಾಟ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನ್ಯಕೋಮಿನ ಯುವಕರಿಂದ ಗಣೇಶ ಮೂರ್ತಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಮುಸ್ಲಿಂ ಯುವಕರು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ.
ಇದನ್ನು ಓದಿ : ಸಾಯಲು ಬಂದು ರೈಲು ಹಳಿಯಲ್ಲೇ ನಿದ್ರೆಗೆ ಜಾರಿದ ಯುವತಿ; ಮುಂದೆನಾಯ್ತು ಈ Video ನೋಡಿ.!
ದರ್ಗಾ ಬಳಿ ಡೊಳ್ಳು, ತಮಟೆ, ಬಾರಿಸಬೇಡಿ ಎಂದು ಮುಸ್ಲಿಂ ಯುವಕರು ಕಿರಿಕ್ ತೆಗೆದಿದ್ದಾರೆ. ಅಲ್ಲದೇ ದರ್ಗಾ ಬಳಿ ಗಣಪತಿ ಮೆರವಣಿಗೆ ಬಂದಾಗ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ.
ಕಲ್ಲು ತೂರಾಟ ಮಾಡಿದ್ದಲ್ಲದೆ, ಮಚ್ಚು- ಲಾಂಗ್ ಅನ್ನು ಮುಸ್ಲಿಂ ಯುವಕರು ಜಳಪಳಿಸಿದ್ದಾರೆ ಎನ್ನಲಾಗಿದೆ. ಲಾಠಿ ಚಾರ್ಜ್ ಮಾಡುವ ಪೊಲೀಸರು ಗುಂಪನ್ನು ಚದುರಿಸಿದ್ದು, ಉದ್ರಿಕ್ತರ ಗುಂಪಿನಿಂದ ಮಚ್ಚು- ಲಾಂಗ್ ವಶ ಪಡಿಸಿಕೊಂಡಿರುವ ವಿಡಿಯೋ ವೈರಲ್ ಆಗಿವೆ.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
ಮುಂದೆ ಸಾಗುತ್ತಿದ್ದ ಮೆರವಣಿಗೆ ಮೇಲೆ ಗಲ್ಲಿ ಗಲ್ಲಿಗಳಿಂದ ಕಲ್ಲುಗಳು ತೂರಿಬಂದಿವೆ. ಈ ವೇಳೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಮುಸ್ಲಿಂ ಯುವಕರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕಲ್ಲು ತೂರಾಟ ಮಾಡಿದ ಮುಸ್ಲಿಂ ಹುಡುಗರ ಮೇಲೆ ಕ್ರಮಕ್ಕೆ ಆಗ್ರಹಿಸಿ ಹಿಂದೂಗಳು ನಾಗಮಂಗಲ ಪೊಲೀಸ್ ಠಾಣೆಯ ಎದುರು ಭಾರೀ ಪ್ರತಿಭಟನೆ ನಡೆಸಿದ್ದಾರೆ.
ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?
ಗಣಪತಿ ಮೂರ್ತಿಯನ್ನೇ ನಾಗಮಂಗಲ ಪೊಲೀಸ್ ಠಾಣೆಯ ಎದುರುಗಡೆ ತಂದು ನಿಲ್ಲಿಸಿ, ಪೊಲೀಸ್ ಅಧಿಕಾರಿಗಳಿಂದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮೆರವಣಿಗೆಯ ಮೇಲೆ ಗುಂಪು- ಗುಂಪಾಗಿ ಬಂದು ಕಲ್ಲು ತೂರಾಟ ಮಾಡಲಾಗಿದೆ. ಈದ್ ಮಿಲಾದ್, ರಂಜಾನ್‌ನಂಥ ಹಬ್ಬಗಳಲ್ಲಿ ಇಲ್ಲಿ ಮೆರವಣಿಗೆ ಆಗುತ್ತದೆ. ಎಲ್ಲಿಯೂ ನಾವು ಕಲ್ಲು ತೂರಾಟ ಮಾಡುವ ಚಿಲ್ಲರೆ ಕೆಲಸ ಮಾಡಿಲ್ಲ ಎಂದು ಮೆರವಣಿಗೆಯಲ್ಲಿದ್ದ ಹಿಂದು ಯುವಕರು ಹೇಳಿದ್ದಾರೆ.