ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ನಾವು ಹೋಟೆಲ್ಗಳಿಗೆ ಊಟ ಮಾಡಲು ಹೋದಾಗ, ಪ್ರತೀ ಟೇಬಲ್ ಮೇಲೆಯೂ ಒಂದು ಬಟ್ಟಲಿನಲ್ಲಿ ಸೋಂಪು ಕಾಳನ್ನು ಇಟ್ಟಿರುವುದನ್ನು ನೋಡಿದ್ದೇವೆ. ಕೆಲವೊಬ್ಬರು ಊಟವಾದ ಬಳಿಕ ನಾಲ್ಕು ಕಾಳು ಸೋಂಪನ್ನು ಎತ್ತಿ ಬಾಯಿಗೆ ಹಾಕಿಕೊಳ್ಳುತ್ತಾರೆ.
ಗಾತ್ರದಲ್ಲಿ ಚಿಕ್ಕದಾಗಿರುವ ಸೋಂಪು ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಖನಿಜಗಳನ್ನು ಹೊಂದಿರುತ್ತದೆ. ಇದರ ವಾಸನೆಯೂ ಅದ್ಭುತವಾಗಿದೆ.
ಇದನ್ನು ಓದಿ : ಅಕ್ರಮ ಮರಳುಗಾರರ ಪರ ಮಾತನಾಡಿದ ಶಾಸಕರಿಗೆ ಖಡಕ್ ಉತ್ತರ ಕೊಟ್ಟ ಲೇಡಿ ಆಫೀಸರ್.!
ಒಂದು ವೇಳೆ ಸೋಂಪು ತಿನ್ನುವ ಅಭ್ಯಾಸ ಇಲ್ಲದಿದ್ದರೆ, ಇನ್ನು ಮುಂದೆ ನೀವು ಕೂಡ ಪ್ರತಿದಿನ ಊಟ ಆದ ನಂತರದಲ್ಲಿ ಸ್ವಲ್ಪ ಸೋಂಪು ಕಾಳುಗಳನ್ನು ಜಗಿಯುವ ಅಭ್ಯಾಸ ಮಾಡಿಕೊಂಡರೆ ಈ ಕೆಳಗಿನ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.
ತ್ವಚೆಯು ಆರೋಗ್ಯಕರವಾಗಿರುತ್ತದೆ. ಅಲ್ಲದೇ ಹೊಳೆಯುತ್ತದೆ.
ಸೋಂಪನ್ನು ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಬರುವುದಿಲ್ಲ.
ಇದನ್ನು ಓದಿ : Health : ಡೊಳ್ಳು ಹೊಟ್ಟೆಯನ್ನು 1 ತಿಂಗಳಿನಲ್ಲಿ ಚಪ್ಪಟೆಯಾಗಿ ಮಾಡುತ್ತದೆ ಈ ಪದಾರ್ಥ.!
ಊಟದ ನಂತರ ಸೋಂಪು ಕಾಳು ತಿಂದರೆ ರಾತ್ರಿ ಉತ್ರಮ ನಿದ್ರೆ ಬರುತ್ತದೆ.
ಕೂದಲು ಉದುರುವಿಕೆಯನ್ನು ಹೋಗಲಾಡಿಸಲು ಸೋಂಪು ತುಂಬಾ ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ.
ಬಾಯಿಯ ದುರ್ವಾಸನೆಯು ಕಡಿಮೆಯಾಗುತ್ತದೆ.
ಸೋಂಪು ತೂಕ ಹೆಚ್ಚಾಗದಂತೆ ತಡೆಯುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಇರುವವರೂ ಸೋಂಪು ತಿನ್ನಬಹುದು.
ಇದನ್ನು ಓದಿ : ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ ತಾತಪ್ಪ; Video ನೋಡಿದ್ರೆ ಬೆರಗಾಗ್ತೀರಾ.!
ಸೋಂಪು ಜ್ಞಾಪಕಶಕ್ತಿಯನ್ನು ಬಲವಾಗಿಡಲು ಮತ್ತು ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮಗೆ ಜ್ಞಾಪಕ ಶಕ್ತಿ ಕಡಿಮೆಯಿದ್ದರೆ ಪ್ರತಿದಿನ ಊಟದ ನಂತರ ಸೋಂಪು ಕಾಳು ತಿನ್ನಿ.
ಊಟದ ನಂತರ ಸೋಂಪು ರಕ್ತ ಶುದ್ಧಿಯಾಗುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.