ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ- ಪಕ್ಷಿಗಳ ಬಗ್ಗೆ ಹತ್ತು ಹಲವು ವಿಡಿಯೋ ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ವಿಶೇಷವಾದವು ನೆಟ್ಟಿಗರನ್ನು ಸೆಳೆಯುತ್ತವೆ.
ಜಾಲತಾಣದಲ್ಲಿ ಹಾವಿನ ನೂರಾರು ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಸದ್ಯ ಹಾವೊಂದು ಚಪ್ಪಲಿಯನ್ನು ಹೊತ್ತೊಯ್ಯುವ ವಿಡಿಯೋವೊಂದು ವೈರಲ್ ಆಗಿದೆ.
ಇದನ್ನು ಓದಿ : Special news : ನಿಮ್ಮ ಬಳಿ 5 ರೂ. ಹಳೆ ನೋಟು ಇದ್ದರೆ ನೀವಾಗಬಹುದು ಲಕ್ಷಾಧಿಪತಿ.!
ಮನೆಯತ್ತ ಹಾವೊಂದು ಬಂದಿದೆ. ಇದನ್ನು ಕಂಡ ಮಹಿಳೆ ಚೀರಾಡಿದ್ದಾಳೆ. ಕೂಡಲೇ ಹಿಂತಿರುಗಿದ ಹಾವು ಬಾಯಿಯಲ್ಲಿ ಒಂದು ಚಪ್ಪಲಿಯನ್ನು ಎತ್ತಿಕೊಂಡು ವೇಗವಾಗಿ ಚಲಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಹಾವು ಮನೆಯೊಳಗೆ ನುಗ್ಗಲು ಯತ್ನಿಸುವಾಗ ಅಲ್ಲಿದ್ದವರ ದೃಷ್ಟಿಗೆ ಬಿದ್ದಿದೆ. ಕೂಡಲೆ ಅವರೆಲ್ಲ ಒಟ್ಟಾಗಿ ಹಾವನ್ನು ಓಡಿಸಲು ಮುಂದಾಗಿದ್ದಾರೆ. ಜೊತೆಗೆ ಹಾವು ಮನೆ ಒಳಗೆ ಬಾರದಂತೆ ಕೂಗಲು ಶುರು ಮಾಡಿದ್ದಾರೆ.
ಇದನ್ನು ಓದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!
ಈ ವೇಳೆ ಹಾವು ವಾಪಸು ತಿರುಗಿ ಒಂದು ಚಪ್ಪಲಿ ಹೊತ್ತೊಯ್ದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವಿಡಿಯೋ ನೋಡಿದ ಮಂದಿ ಶಾಕ್ ಆಗಿದ್ದಾರೆ.
ಚಪ್ಪಲಿ ಹಾವಿನ ಕುತ್ತಿಗೆಗೆ ಸಿಲುಕಿದೆ ಎಂದರೆ ಅದು ತಪ್ಪು. ಅಚ್ಚರಿ ಎಂದರೆ ಹಾವು ತನ್ನ ಬಾಯಿಯಲ್ಲಿ ಚಪ್ಪಲಿ ಕಚ್ಚಿಕೊಂಡು ಹೋಗುತ್ತಿದೆ. ಚಪ್ಪಲಿ ಹಿಡಿದ ಹಾವು ಕಣ್ಣು ಮಿಟುಕಿಸುವ ವೇಳೆಗೆ ದೃಷ್ಟಿಯಿಂದ ಮರೆಯಾಗಿದೆ.
ಇದನ್ನು ಓದಿ : Health : ಶೇಂಗಾವನ್ನು ನೆನಸಿಟ್ಟು ತಿನ್ನವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.?
ದಿನೇಶ್ ಕುಮಾರ್ ಎಂಬ X ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಹಳೆಯದಾಗಿದ್ದರೂ, ಈಗಲೂ ವೈರಲ್ ಆಗ್ತಿದೆ. ವಿಡಿಯೋ ಗೆ ಹಲವು ಕಮೆಂಟ್ ಬಂದಿವೆ.
ಚಪ್ಪಲಿ ಕದಿಯುವ ಹಾವು ಎಂಬ ಬರಹದಡಿ ಈ ವಿಡಿಯೋ ಹರಿಬಿಡಲಾಗಿದ್ದು, ಸಿಕ್ಕಾಪಟ್ಟೆ ಕಮೆಂಟ್‌ಗಳ ಪಡೆದುಕೊಂಡಿದೆ. ಈ ಹಾವು ಕುಟುಂಬ ನಿರ್ವಹಣೆಗಾಗಿ ಕಳ್ಳತನಕ್ಕೆ ಇಳಿದಿದೆ. ಖಂಡಿತ ನಿಮ್ಮ ಚಪ್ಪಲಿ ದೆಹಲಿ ಚೋರ್ ಬಜಾರ್‌ನಲ್ಲಿ ಹೋಗಿ ನೋಡಿ ಸಿಗುತ್ತದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಈ ಹಾವು ಒಂದು ಚಪ್ಪಲಿ ಕೊಂಡೊಯ್ದಿದೆ ಆದ್ರೆ ಮತ್ತೊಂದು ಚಪ್ಪಲಿ ಒಯ್ಯಲು ಬಂದೇ ಬರುತ್ತದೆ ಎಂದು ಮತ್ತೊಬ್ಬ ಬಳಕೆದಾರರು ತಮಾಷೆಯ ಕಮೆಂಟ್‌ಗಳ ಮಾಡಿದ್ದಾರೆ.
ಇದನ್ನು ಓದಿ : ಮಸ್ತ್ ಡ್ಯಾನ್ಸ್ ಮಾಡಿದ ಖ್ಯಾತ ಪೊಲೀಸ್ ಅಧಿಕಾರಿ Suspend, ಅಂತದ್ದೇನಾಯ್ತು.?
चप्पल चोर साँप 🤣 pic.twitter.com/41VezsdAda
— Dinesh Kumar (@DineshKumarLive) August 11, 2024