ಜನಸ್ಪಂದನ ನ್ಯೂಸ್, ಡೆಸ್ಕ್ : ಜಗತ್ತಿನಾದ್ಯಂತ ಜನರು ಆಕರ್ಷಕವಾದ ಹೊಸ ಫೋನ್ ಬಿಡುಗಡೆಯಾದ ಕೂಡಲೇ ಜನರು ಅದನ್ನು ಖರೀದಿಸುತ್ತಾರೆ. ಹಳೆ ಫೋನ್ನಲ್ಲಿ ಸಣ್ಣ ಸ್ಕ್ರಾಚ್ ಆದರೂ ಹೊಸ ಮೊಬೈಲ್ನ ಮೊರೆ ಹೋಗುವವರಿದ್ದಾರೆ.
ಇನ್ನೂ ಪ್ರತಿ ಎರಡು ವರ್ಷಗಳಿಗೊಮ್ಮೆ ಸ್ಮಾರ್ಟ್‌ಫೋನ್ ಹಳೆಯದಾಗಿ ಕಾಣಲು ಪ್ರಾರಂಭಿಸುತ್ತದೆ. ಆಗ ಜನರು ಮತ್ತೊಂದು ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾಗುತ್ತಾರೆ.
ಇದನ್ನು ಓದಿ : Health : ಶೇಂಗಾವನ್ನು ನೆನಸಿಟ್ಟು ತಿನ್ನವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.?
ಆದರೆ, ಹೀಗೆ ಮಾಡಿದರೆ ಹಣವೂ ಖರ್ಚಾಗುತ್ತದೆ. ಇದರ ಬದಲು ನಿಮ್ಮ ಹಳೆಯ ಫೋನ್ ಅನ್ನು ನೀವು ಸುಲಭವಾಗಿ ಹೊಸದರಂತೆ ಮಾಡಬಹುದು.
* ಫೋನ್ ಅನ್ನು ನೀರಿನಲ್ಲಿ ಮುಳುಗಿಸಬೇಡಿ
* ನಿಯಮಿತವಾಗಿ ಫೋನ್ ಅನ್ನು ರೀಬೂಟ್ ಮಾಡುವುದರಿಂದ ಸಣ್ಣ- ಪುಣ್ಣ ಸಮಸ್ಯೆಗಳು ಕಾಣಿಸುವುದಿಲ್ಲ.
* ಅಪ್ಲಿಕೇಶನ್ ಸ್ಟೋರೇಜ್ ಮತ್ತು ಡೇಟಾವನ್ನು ಕ್ಲೀಯರ್ ಮಾಡುವ ಮೂಲಕ ಫೋನ್ ಮೆಮೊರಿಯನ್ನು ಹೆಚ್ಚಿಸಬಹುದು.
ಇದನ್ನು ಓದಿ : ಊರ ಹಬ್ಬದಲ್ಲಿ ಅರೆನಗ್ನಾವತಾರದಲ್ಲಿ ಕಾಣಿಸಿಕೊಂಡ ಖ್ಯಾತ ಗಾಯಕಿ; ವಿಡಿಯೋ Viral.!
* ಯಾವುದೇ ದ್ರವವನ್ನು ನೇರವಾಗಿ ಡಿಸ್ಪ್ಲೇಯ ಮೇಲೆ ಸುರಿಯಬೇಡಿ.
* ಸ್ಮಾರ್ಟ್‌ಫೋನ್ ಡಿಸ್ಪ್ಲೇಯನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಮುಖ್ಯ. ಇದಕ್ಕಾಗಿ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ.
* ಫೋನ್‌ನ ಬಾಡಿಯನ್ನು ಸ್ವಚ್ಛಗೊಳಿಸಲು, ಸೋಪ್ ನೀರಿನಲ್ಲಿ ಅದ್ದಿದ ಮೃದುವಾದ ಬಟ್ಟೆಯನ್ನು ಬಳಸಿ.
* ಬ್ಯಾಕ್ಗ್ರೌಂಡ್ನಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡುವ ಮೂಲಕ ಬ್ಯಾಟರಿ ಅವಧಿಯನ್ನು ವಿಸ್ತರಿಸಬಹುದು.
ಇದನ್ನು ಓದಿ : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆಹ್ವಾನ.!
* ಚಾರ್ಜಿಂಗ್ ಪೋರ್ಟ್ ಮತ್ತು ಸ್ಪೀಕರ್ ಅನ್ನು ಸ್ವಚ್ಛಗೊಳಿಸಲು ಹತ್ತಿ ಬಟ್ಟೆಯನ್ನು ಬಳಸಿದರೆ ಉತ್ತಮ.
* ಫೋನ್ ಸ್ಪೀಡ್ ಆಗಿ ಕಾರ್ಯನಿರ್ವಹಿಸಲು ಮೊದಲನೆಯದಾಗಿ ಇತ್ತೀಚಿನ ಸಾಫ್ಟ್‌ವೇರ್ ಆವೃತ್ತಿಗೆ ನವೀಕರಿಸಿ.
* ನೀವು ಬಳಸದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ.