ಜನಸ್ಪಂದನ ನ್ಯೂಸ್, ಬೆಂಗಳೂರು : ಠಾಣೆಯಲ್ಲಿ ಲುಂಗಿ ಧರಿಸಿ ಸಬ್ ಇನ್ಸ್‌ಪೆಕ್ಟರ್ ಓರ್ವ, ಮಹಿಳೆಯೊಂದಿಗೆ ಅಮಾನುಷವಾಗಿ ನಡೆದುಕೊಂಡ ಘಟನೆ ನಡೆದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ : Special news : ಸೋಡಾ ಮಾತ್ರ ಅಲ್ಲಾ ಡೇಂಜರ್ ; ಹಣ್ಣಿನ ರಸದಿಂದಲೂ ಬರಬಹುದು ಪಾರ್ಶ್ವವಾಯು.?
ಈ ವಿಡಿಯೋ ವೈರಲ್ ಬೆನ್ನಲ್ಲೇ ಸಬ್ ಇನ್ಸ್‌ಪೆಕ್ಟರ್ ನನ್ನು ಫೀಲ್ಡ್ ಡ್ಯೂಟಿಯಿಂದ ತೆಗೆದುಹಾಕಲಾಗಿದೆ ಎಂದು ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಔಟ್ ಪೋಸ್ಟ್ ಇನ್ ಚಾರ್ಜ್ ಆಗಿರುವ ಸಬ್ ಇನ್ಸ್‌ಪೆಕ್ಟರ್ ಬೃಹಸ್ಪತಿ ಪಟೇಲ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಲುಂಗಿ ಧರಿಸಿದ್ದರು.
ಈ ವೇಳೆ ಮಹಿಳೆಯೊಬ್ಬರು ದೂರು ನೀಡಲು ಬಂದಿದ್ದು, ಆಕೆಯೊಂದಿಗೆ ಸಬ್ ಇನ್ಸ್‌ಪೆಕ್ಟರ್ ಅಸಭ್ಯ ವರ್ತನೆ ತೋರಿದ್ದಾರೆ.
ಇದನ್ನು ಓದಿ : ಪ್ರಯಾಣಿಕರಿಂದ ಹಣ ಪಡೆದು ಮಹಿಳೆಯರ ಶೂನ್ಯ ಬೆಲೆಯ ಉಚಿತ ಟಿಕೆಟ್ ನೀಡಿದ ಬಸ್ ಕಂಡಕ್ಟರ್; ಮುಂದೆ.?
ಜಿಲ್ಲಾ ಕೇಂದ್ರದಿಂದ 50 ಕಿಲೋ ಮೀಟರ್ ದೂರದಲ್ಲಿರುವ ಔಟ್ ಪೋಸ್ಟ್ ನಲ್ಲಿ ನಡೆದ ಘಟನೆ ಕುರಿತು ಉನ್ನತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಮಹಿಳೆಯ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.
MP Police के चौकी प्रभारी का वीडियो हो रहा वायरल, थाने में आई लड़की के साथ ऐसा व्यवहार, कब नपेंगे ? | MP Tak#MPTakLatestNews #Mauganj #MPPolice #ViralVideo pic.twitter.com/aydMCplnxq
— MP Tak (@MPTakOfficial) October 26, 2024