ಜನಸ್ಪಂದನ ನ್ಯೂಸ್, ಬೆಂಗಳೂರು : ಪ್ರಿಯಕರನೊಂದಿಗೆ ಸೇರಿ ಮಹಿಳಾ ಕಾನ್ಸ್‌ಟೇಬಲ್ ಒಬ್ಬಳು ಸಬ್ ಇನ್ಸ್ಪೆಕ್ಟರ್ನನ್ನು ಕೊಂದಿರುವ ಘಟನೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಬಯೋರಾದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಹೆಡ್ ಕಾನ್ಸ್‌ಟೇಬಲ್ ನಿಂದ ಮೊಬೈಲ್ ನಂಬರ್, ಟವರ್ ಲೋಕೇಶನ್ ಮಾಹಿತಿ ಸೋರಿಕೆ.!
ಎಸ್ಐ ದೀಪಂಕರ್ ಗೌತಮ್ ಅವರನ್ನು ಮಹಿಳಾ ಪೇದೆ ಪಲ್ಲವಿ ಸೋಲಂಕಿ ತನ್ನ ಪ್ರಿಯಕರ ಕರಣ್ ಠಾಕೂರ್ ಜತೆ ಸೇರಿ ಕಾರಿನ ಮೂಲಕ ಡಿಕ್ಕಿ ಹೊಡೆಸಿ ಕೊಂದಿದ್ದಾರೆ.
ಮಹಿಳಾ ಪೇದೆ ಪಲ್ಲವಿ ಸೋಲಂಕಿ, ರಾಜಗಢ್ ಜಿಲ್ಲೆಯವಳಾಗಿದ್ದು, ಕರಣ್ ಠಾಕೂರ್ನನ್ನು ಪ್ರೀತಿಸುತ್ತಿದ್ದಳು. ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಗೆ ಏನಾಯಿತೋ ಗೊತ್ತಿಲ್ಲ ಬ್ರೇಕಪ್ ಮಾಡಿಕೊಂಡಿದ್ದರು.
ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ನಂತರ ಪಲ್ಲವಿ ಅದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಎಸ್‌ಐ ದೀಪಂಕರ್ ಗೌತಮ್ ಸ್ನೇಹ ಬೆಳೆಸಿದ್ದಳು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಅದು ವಿವಾಹೇತರ ಸಂಬಂಧದ ತನಕ ಬಂದಿದೆ. ಈ ವಿಚಾರ ಗೊತ್ತಾಗಿ ಮಾಜಿ ಪ್ರಿಯಕರ, ಪಲ್ಲವಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಇದಾದ ಬಳಿಕ ಮತ್ತೆ ಮಾಜಿ ಪ್ರಿಯಕರನೊಂದಿಗೆ ಒಂದಾದ ಪಲ್ಲವಿ, ಪ್ಲ್ಯಾನ್ ಮಾಡಿ ಎಸ್ಐ ಅನ್ನು ಕೊಂದಿದ್ದಾಳೆ.
ಎಸ್ಐ ದೀಪಂಕರ್ ಗೌತಮ್ ಮನೆಯಲ್ಲಿದ್ದಾಗ ಪಲ್ಲವಿ ಫೋನ್ ಮಾಡಿ ಭೋಪಾಲ್ ಬೈಪಾಸ್ ರಸ್ತೆಗೆ ಬರುವಂತೆ ಹೇಳಿದ್ದಾಳೆ. ಬಳಿಕ ಬೈಕ್ನಲ್ಲಿ ಹೋಗುತ್ತಿದ್ದ ಎಸ್ಐಗೆ ಕರಣ್ ಮತ್ತು ಪಲ್ಲವಿ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ.
ಈ ವೇಳೆ ದೀಪಂಕರ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ತಮ್ಮ ಕಾರಿನೊಂದಿಗೆ ಅವರನ್ನು 30 ಮೀಟರ್ ಎಳೆದೊಯ್ದಿದ್ದಾರೆ. ಇದರಿಂದ ದೀಪಂಕರ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಎಸ್‌ಐ ದೀಪಂಕರ್ ಗೌತಮ್ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದರು.
ಇದನ್ನು ಓದಿ : Health : ಸೊಂಟದ ಸುತ್ತಮುತ್ತಲಿನ ಕೊಬ್ಬು ಕರಗಬೇಕಾ? ವಾಕ್ ಮಾಡುವಾಗ ಈ ವಿಧಾನ ಅನುಸರಿಸಿ.
ಇನ್ನೂ ಪೊಲೀಸರು ತನಿಖೆ ವೇಳೆ ಎಸ್‌ಐಗೆ ಡಿಕ್ಕಿ ಹೊಡೆದ ಕಾರಿನ ನಂಬರ್ ಗುರುತಿಸಿ, ಮಾಹಿತಿ ಕಲೆ ಹಾಕಿದಾಗ ಪೇದೆ ಪಲ್ಲವಿ ಮತ್ತು ಆಕೆಯ ಗೆಳೆಯ ಕರಣ್ ಕೃತ್ಯ ಎಸಗಿರುವುದು ಪತ್ತೆಯಾಗಿದೆ.
ಬಂಧನದ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಇಬ್ಬರು ಒಪ್ಪಿಕೊಂಡಿದ್ದಾರೆ. ಪ್ರೀತಿಗೆ ಅಡ್ಡಿಯಾಗುತ್ತಾರೆ ಅಂತ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ ಎಂದು ದೇಹತ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದ್ ಮೀನಾ ತಿಳಿಸಿದ್ದಾರೆ.