ಜನಸ್ಪಂದನ ನ್ಯೂಸ್, ಡೆಸ್ಕ್ : ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ, ಉದ್ಯೋಗಿಯೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಆಘಾತಕಾರಿ ಘಟನೆ ನೋಯ್ದಾದ ಸೆಕ್ಟರ್ 94 ರಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಕೋಲ್ಕತ್ತಾ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಗಳ ಭದ್ರತೆಯ ಬಗ್ಗೆ ಎದ್ದಿರುವ ಪ್ರಶ್ನೆಗಳ ನಡುವೆ ನೋಯ್ದಾದಲ್ಲಿ ಇಂತದ್ದೊಂದು ಆಘಾತಕಾರಿ ಘಟನೆ ನಡೆದಿದೆ.
ಇದನ್ನು ಓದಿ : ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ದೈತ್ಯಾಕಾರದ ಹದ್ದು ; ಮೈ ನಡುಗಿಸುವ ವಿಡಿಯೋ Viral.!
ಸದ್ಯ ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಶವಾಗಾರದಲ್ಲಿ ಉದ್ಯೋಗಿ ಮತ್ತು ಮಹಿಳೆ ಚಕ್ಕಂದ ನಡೆಸಿದ್ದು, ಈ ವೇಳೆ ಆತನ ಮತ್ತೊಬ್ಬ ಸ್ನೇಹಿತ ವಿಡಿಯೋ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನು ಓದಿ : ವಿದ್ಯುತ್ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!
2 ನಿಮಿಷ 21 ಸೆಕೆಂಡುಗಳ ವೀಡಿಯೊದಲ್ಲಿ, ಪೋಸ್ಟ್ ಮಾರ್ಟಮ್ ಹೌಸ್ನ ಡೀಪ್ ಫ್ರೀಜರ್ ಕೋಣೆಯಲ್ಲಿ ಪುರುಷನೊಬ್ಬ ಮಹಿಳೆಯೊಂದಿಗೆ ಸೆಕ್ಸ್ ಮಾಡುತ್ತಿದ್ದಾನೆ. ಈ ವೇಳೆ ವಿಡಿಯೋ ರೆಕಾರ್ಡ್ ಮಾಡುತ್ತಿರುವ ಇನ್ನೊಬ್ಬ ಈಗ ತನ್ನ ಸರದಿ ಎಂದು ಹೇಳುವುದನ್ನು ಸಹ ಕೇಳಬಹುದು.
ಈ ಕೋಣೆಯಲ್ಲಿ, ಮೃತ ದೇಹಗಳನ್ನು ಡೀಪ್ ಫ್ರೀಜರ್‌ನಲ್ಲಿ ಇರಿಸಲಾಗುತ್ತದೆ. ಈ ಪೋಸ್ಟ್ ಮಾರ್ಟಮ್ ಹೌಸ್‌ನಲ್ಲಿ ಮಹಿಳಾ ಉದ್ಯೋಗಿಯನ್ನು ನಿಯೋಜಿಸಿಲ್ಲ.
ಇದನ್ನು ಓದಿ : ಪಾರ್ಕ್‌ನಲ್ಲಿ ಕುಳಿತಿದ್ದ ಯುವಕನ ಮೇಲೆ ಬೆತ್ತಲೆಯಾಗಿ ಬಂದ ಯುವತಿಯಿಂದ ಲೈಂಗಿಕ ದೌರ್ಜನ್ಯ ; ವಿಡಿಯೋ Viral.!
ಪರಿಸ್ಥಿತಿ ಹೀಗಿದ್ದರೂ ಮಹಿಳೆಯನ್ನು ಹೊರಗಿನಿಂದ ಕರೆ ತರಲಾಗಿದೆ ಎಂದು ಹೇಳಲಾಗುತ್ತಿದೆ. ಹೊರಗಿನ ಮಹಿಳೆ ಇಲ್ಲಿಗೆ ಹೇಗೆ ಎಂಟ್ರಿ ಕೊಟ್ಟರು ಎಂಬ ಪ್ರಶ್ನೆ ಮೂಡಿದೆ.
ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಸ ಗುಡಿಸುವವರನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು ತನಿಖೆ ಮುಂದುವರಿದಿದೆ ಎಂದು ವರದಿಯಿಂದ ತಿಳಿದು ಬಂದಿದೆ.