ಜನಸ್ಪಂದನ ನ್ಯೂಸ್, ಡೆಸ್ಕ್ : ಮಕ್ಕಳು ಯಾವಾಗಲೂ ಪೋನಿನಲ್ಲಿ ಸಮಯ ಕಳೆಯುತ್ತಾರೆ, ವಿದ್ಯಾಭ್ಯಾಸ ಕಡೆಗೆ ಗಮನ ನೀಡುತ್ತಿಲ್ಲ ಎಂದು ಕೋಪಗೊಂಡ ಪೋಷಕರ ಸಂಘವು ವಿದ್ಯಾರ್ಥಿಗಳ ಮೊಬೈಲ್ ಒಡೆದು ಪುಡಿ ಮಾಡಿದ ಘಟನೆ ನಡೆದಿದೆ.
ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಪೋಷಕರ ಸಂಘದ ಈ ನಿರ್ಧಾರಕ್ಕೆ ನೆಟ್ಟಿಗರು, ಸೂಪರ್ ಭೇಷ್ ಎಂದಿದ್ದಾರೆ.
ಇದನ್ನು ಓದಿ : Health : ಊಟದ ಬಳಿಕ ಅಥವಾ ಊಟದ ಮಧ್ಯದಲ್ಲಿ ನೀರು ಕುಡಿತೀರಾ? ಹಾಗಿದ್ರೆ ಈ ಸುದ್ದಿ ಓದಿ.!
ವಿದ್ಯಾಭ್ಯಾಸದಲ್ಲಿ ಕಳಪೆ ಮಟ್ಟದ ಪ್ರದರ್ಶನ ನೀಡಿದ್ದಕ್ಕಾಗಿ ಶಾಲೆಯ ಪೋಷಕರ ಸಂಘ ಸ್ವತಃ ವಿದ್ಯಾರ್ಥಿಗಳಿಂದಲೇ ಅವರ ಮೊಬೈಲ್ ಗಳನ್ನು ಹೊಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಕುರಿತ ಪೋಸ್ಟ್ ಒಂದನ್ನು lindaikejiblogofficial ಹೆಸರಿನ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ಕಳಪೆ ಮಟ್ಟದ ಶೈಕ್ಷಣಿಕ ಪ್ರದರ್ಶನ ತೋರಿದ್ದು, ಪೋಷಕರ ಸಂಘವು ಅವರ ಫೋನ್ ಗಳನ್ನು ಒಡೆದು ಹಾಕಲು ಆದೇಶಿಸಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ಪೋಷಕರ ಸಂಘದ ಆದೇಶದ ಮೇರೆಗೆ ವಿದ್ಯಾರ್ಥಿಗಳು ಬಹಳ ದುಃಖದಿಂದ ತಮ್ಮ ತಮ್ಮ ಫೋನ್ ಗಳನ್ನು ಕಲ್ಲಿನಿಂದ ಜಜ್ಜಿ ಒಡೆದು ಹಾಕುತ್ತಿರುವ ದೃಶ್ಯವನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : Video : ಹೋಟೆಲ್‌ನಲ್ಲಿ ಇಬ್ಬರು ಯುವತಿಯರ ಜೊತೆ ಪತಿಯ ಸರಸ; ರೆಡ್ ಹ್ಯಾಂಡ್ಆಗಿ ಹಿಡಿದ ಪತ್ನಿ.!
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಇದು ತುಂಬಾ ಕಠೋರ ಎನ್ನಿಸಬಹುದು.
ಆದರೆ ಇದು ವಿದ್ಯಾರ್ಥಿಗಳ ಮನಸ್ಸನ್ನು ಸಂಪೂರ್ಣವಾಗಿ ಫೋನ್‌ಗಳಿಂದ ತೆಗೆದುಹಾಕಲು ಮತ್ತು ವಿದ್ಯಾಭ್ಯಾಸದ ಮೇಲೆ ಕೇಂದ್ರೀಕರಿಸಲು ಇದು ಉತ್ತಮ ಆಯ್ಕೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
View this post on Instagram