Saturday, July 13, 2024
spot_img
spot_img
spot_img
spot_img
spot_img
spot_img

AIATSLನಲ್ಲಿ ಖಾಲಿ ಇರುವ 3,256 ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಏರ್‌ ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್‌ ಲಿಮಿಟೆಡ್‌ (AIATSL) ಅಥವಾ ಎಐ ಏರ್‌ಪೋರ್ಟ್‌ ಸರ್ವೀಸ್‌ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.

ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ನೇರ ಸಂದರ್ಶನಕ್ಕೆ ಹಾಜರಾಗುವ ಮೂಲಕ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ನೀವೂ  ಈ ಲೇಖನದಲ್ಲಿ ಪಡೆಯಬಹುದಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : ಚಿಂಪಾಂಜಿಗೂ ಇದೇ Instagram ಹುಚ್ಚು : ಸ್ಕ್ರೋಲ್‌ ಮಾಡೋದನ್ನು ನೋಡಿದರೆ ನೀವೂ ಶಾಕ್‌ ಆಗ್ತೀರಾ.

ನೇಮಕಾತಿಯ ವಿವರ :

ನೇಮಕಾತಿ ಪ್ರಾಧಿಕಾರ : ಏರ್‌ ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್‌ ಲಿಮಿಟೆಡ್.
ಹುದ್ದೆಗಳು : ವಿವಿಧ ಅಧಿಕಾರಿ, ಮ್ಯಾನೇಜರ್, ಎಕ್ಸಿಕ್ಯೂಟಿವ್, ಹ್ಯಾಂಡಿಮನ್, ಯುಟಿಲಿಟಿ ಏಜೆಂಟ್ಸ್‌ಗಳು.
ಹುದ್ದೆಗಳ ಸಂಖ್ಯೆ : 3,256.
ನೇಮಕ ವಿಧಾನ: ನೇರ ಸಂದರ್ಶನ.

 

ಹುದ್ದೆ ಹೆಸರು ಮತ್ತು ಹುದ್ದೆಗಳ ಸಂಖ್ಯೆ :

Serial No. ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
1 ಟರ್ಮಿನಲ್ ಮ್ಯಾನೇಜರ್ – ಪ್ಯಾಸೆಂಜರ್ 02
2 ಡೆಪ್ಯೂಟಿ ಟರ್ಮಿನಲ್ ಮ್ಯಾನೇಜರ್ – ಪ್ಯಾಸೆಂಜರ್ 09
3 ಡೆಪ್ಯೂಟಿ ಮ್ಯಾನೇಜರ್ – ಪ್ಯಾಸೆಂಜರ್ 19
4 ಡ್ಯೂಟಿ ಆಫೀಸರ್ – ಪ್ಯಾಸೆಂಜರ್ 42
5 ಜೂನಿಯರ್ ಆಫೀಸರ್ – ಕಸ್ಟಮರ್ ಸರ್ವೀಸೆಸ್ 45
6 ರ್ಯಾಂಪ್ ಮ್ಯಾನೇಜರ್ 02
7 ಡೆಪ್ಯೂಟಿ ರ್ಯಾಂಪ್ ಮ್ಯಾನೇಜರ್ 06
8 ಡ್ಯೂಟಿ ಮ್ಯಾನೇಜರ್ – ರ್ಯಾಂಪ್ 40
9 ಜೂನಿಯರ್ ಆಫೀಸರ್ – ಟೆಕ್ನಿಕಲ್ 91
10 ಟರ್ಮಿನಲ್ ಮ್ಯಾನೇಜರ್ – ಕಾರ್ಗೊ 01
11 ಡೆಪ್ಯೂಟಿ ಟರ್ಮಿನಲ್ ಮ್ಯಾನೇಜರ್ – ಕಾರ್ಗೊ 03
12 ಡ್ಯೂಟಿ ಮ್ಯಾನೇಜರ್ – ಕಾರ್ಗೊ 11
13 ಡ್ಯೂಟಿ ಆಫೀಸರ್ – ಕಾರ್ಗೊ 19
14 ಜೂನಿಯರ್ ಆಫೀಸರ್ – ಕಾರ್ಗೊ 56
15 ಪ್ಯಾರಾ ಮೆಡಿಕಲ್ ಕಂ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ 03
16 ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್ 406
17 ಯುಟಿಲಿಟಿ ಏಜೆಂಟ್ ಕಂ ರ್ಯಾಂಪ್ ಡ್ರೈವರ್ 263
18 ಹ್ಯಾಂಡಿಮ್ಯಾನ್ (ಪುರುಷ) 2,216
19 ಯುಟಿಲಿಟಿ ಏಜೆಂಟ್ಸ್ (ಪುರುಷ) 22

 

ಇದನ್ನು ಓದಿ : Banned : ರಾಜ್ಯಾಧ್ಯಂತ ಶಾಲಾ-ಕಾಲೇಜುಗಳಲ್ಲಿ “ಮೊಬೈಲ್” ಬಳಕೆ ನಿಷೇಧ.!

ಅರ್ಹತೆಗಳು : ಎಸ್‌ಎಸ್‌ಎಲ್‌ಸಿ/ಐಟಿಐ/ಡಿಪ್ಲೊಮ/ಯಾವುದೇ ಪದವಿ/ಎಂಬಿಎ/ಇತರೆ.

ವಯಸ್ಸು : ಕನಿಷ್ಠ 28 ವರ್ಷದಿಂದ ಗರಿಷ್ಠ 50 ವರ್ಷದವರೆಗಿನ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ನೇರ ಸಂದರ್ಶನಕ್ಕೆ ಹಾಜರಾಗಬೇಕಾದ ದಿನಾಂಕ : 

  • ಕ್ರಮ ಸಂಖ್ಯೆ 1 ರಿಂದ 15 ರವರೆಗಿನ ಹುದ್ದೆಗಳಿಗೆ ಜುಲೈ 12, 13 ರಂದು ಸಂದರ್ಶನ ನಿಗದಿಯಾಗಿದೆ.
  • ಕ್ರಮ ಸಂಖ್ಯೆ 16, 17 ರ ಹುದ್ದೆಗೆ ಜುಲೈ 14, 15 ರಂದು ಸಂದರ್ಶನ ನಿಗದಿಯಾಗಿದೆ.
  • ಕ್ರಮ ಸಂಖ್ಯೆ 18, 19 ರ ಹುದ್ದೆಗೆ ಜುಲೈ 16 ರಂದು ಸಂದರ್ಶನ ನಿಗದಿಯಾಗಿದೆ.
ಸಂದರ್ಶನ ಸಮಯ : ಬೆಳಿಗ್ಗೆ 09-30 ರಿಂದ ಮಧ್ಯಾಹ್ನ 12-30 ರವರೆಗೆ.
ಸಂದರ್ಶನ ವಿಳಾಸ : ಜಿಎಸ್‌ಡಿ ಕಾಂಪ್ಲೆಕ್ಸ್‌, ಸಹರ್ ಪೊಲೀಸ್‌ ಠಾಣಾ ಹತ್ತಿರ, ಸಿಎಸ್‌ಎಂಐ ಏರ್‌ಪೋರ್ಟ್‌, ಟರ್ಮಿನಲ್-1, ಗೇಟ್‌ ನಂಬರ್-5, ಸಹರ್, ಅಂಧೇರಿ – ಪೂರ್ವ, ಮುಂಬೈ-400099.

ಅರ್ಜಿ ಶುಲ್ಕ :

  • ಅರ್ಜಿ ಶುಲ್ಕ ರೂ.500.
  • ಎಸ್‌ಸಿ/ಎಸ್‌ಟಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
  • ಶುಲ್ಕವನ್ನು ಡಿಡಿ ಮೂಲಕ ಪಾವತಿಸಬೇಕು.

ಇದನ್ನು ಓದಿ : 7ನೇ ತರಗತಿ ಪಾಸಾದವರಿಗೆ ಗುಡ್‌ ನ್ಯೂನ್ : KSRTCಯಲ್ಲಿ 13,000 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ.!

ವೇತನ ಶ್ರೇಣಿ : ರೂ.22,000 ದಿಂದ ರೂ.75,000 ವರೆಗೆ ಹುದ್ದೆಗಳಿಗೆ ಅನುಗುಣವಾಗಿ ವೇತನ ನಿಗದಿಯಾಗಿದೆ.

ಹೆಚ್ಚಿನ ಮಾಹಿತಿಗಾಗಿ :

ಹುದ್ದೆವಾರು ವೇತನ ಶ್ರೇಣಿ, ವಿದ್ಯಾರ್ಹತೆ, ಅನುಭವ, ಇತರೆ ಡೀಟೇಲ್ಸ್‌ಗಳಿಗಾಗಿ https://www.aiasl.in/ ವೆಬ್‌ಸೈಟ್‌ಗೆ ಭೇಟಿ ನೀಡಿ, Career >> Recruitment ಸೆಕ್ಷನ್‌ ಅಡಿಯಲ್ಲಿ ಜೂನ್ 28 ರಂದು ಬಿಡುಗಡೆ ಮಾಡಲಾದ ಅಧಿಸೂಚನೆ ಪಿಡಿಎಫ್‌ ಫೈಲ್‌ ಕ್ಲಿಕ್ ಮಾಡಿ ಓದಿರಿ.

Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official website for official information.

spot_img
spot_img
- Advertisment -spot_img