ಜನಸ್ಪಂದನ ನ್ಯೂಸ್, ನೌಕರಿ : ರೀಲ್ಸ್‌ಗಾಗಿ ಯುವ ಜನಾಂಗ ಅಪಾಯಕಾರಿ ಸ್ಟಂಟ್ ಮಾಡಿ ಗಮನ ಸೆಳೆಯುವ ಪ್ರಯತ್ನಿಸುತ್ತಾರೆ. ಆಗೇಯೇ ಇಲ್ಲಿಯು ಸಹ ಇಬ್ಬರು ಶಾಲಾ ಬಾಲಕಿಯರು ರಸ್ತೆಯಲ್ಲಿಯೇ ರೀಲ್ಸ್‌ಗಾಗಿ ಸ್ಟಂಟ್ ಮಾಡಿಲು ಹೋಗಿ ಅನಾಹುತ ಮಾಡಿಕೊಂಡ ವಿಡಿಯೋ ಸದಕ್ಕೆ ವೈರಲ್ ಆಗಿದೆ.
ಬಾಲಕಿಯರು ಆತ್ಮವಿಶ್ವಾಸದಿಂದಲೇ ರೀಲ್ಸ್‌ಗಾಗಿ ಸಾಹಸದ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಅವರು ಅಂದುಕೊಂಡಂತೆ ಎಲ್ಲವೂ ಒಕೆಯಾಗಿತ್ತು, ಆದರೆ ಮುಂದೇನಾಯ್ತು? ಈ ವಿಡಿಯೋ ನೋಡಿ.!
ಇದನ್ನು ಓದಿ : ಪುನೀತ್ ಆತ್ಮದ ಜೊತೆ ಮಾತನಾಡಿದ ಡಾ.ಶ್ರೀ ರಾಮಚಂದ್ರ ಗುರೂಜಿ ; ಮತ್ತೆ ಹುಟ್ಟಿ ಬರ್ತೀರಾ ಅಂದಿದ್ದಕ್ಕೆ ಅಪ್ಪು ಏನಂದ್ರು ಗೊತ್ತಾ?
ಶಾಲಾ ಸಮವಸ್ತ್ರದಲ್ಲಿರುವ ಇಬ್ಬರು ಬಾಲಕಿಯರು ಹೆದ್ದಾರಿಯಲ್ಲಿ ರೀಲ್ಸ್‌ಗಾಗಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಆಗ ಓರ್ವ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಮಾಡಲು ಪ್ರಯತ್ನಿಸಿದ್ದಾಳೆ. ಆದರೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿ ದೊಪ್ಪನೆ ಕೆಳಗೆ ಬಿದ್ದ ಪರಿಣಾಮ ಬಾಲಕಿ ಇದೀಗ ಎದ್ದು ನಿಲ್ಲದ ಪರಿಸ್ಥಿತಿಯಲ್ಲಿದ್ದಾಳೆ.
ವಿದ್ಯಾರ್ಥಿನಿ ಕೆಳಗೆ ಬಿದ್ದ ರಭಸಕ್ಕೆ ಡಿಸ್ಕ್ ಮುರಿತಕ್ಕೊಳಗಾಗಿದೆ. ಮತ್ತೋರ್ವ ವಿದ್ಯಾರ್ಥಿನಿ ಆಕೆಯನ್ನು ಎತ್ತಿ ನಿಲ್ಲಿಸುವ ಪ್ರಯತ್ನ ಮಾಡಿದರೂ ಆಕೆಗೆ ನಿಲ್ಲಲು ಸಾಧ್ಯವಾಗಿಲ್ಲ. ಇಲ್ಲಿಗೆ ಈ ರೀಲ್ಸ್ ಅಂತ್ಯಗೊಂಡಿದೆ. ಆದರೆ ಬಾಲಕಿ ನಡೆಯಲು ಹಾಗೂ ನಿಲ್ಲಲು ಸಾಧ್ಯವಾಗದ ಕಾರಣ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸುದೀರ್ಘ ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.
ಇದನ್ನು ಓದಿ : ಕೆನರಾ ಬ್ಯಾಂಕ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!
ಫೆಬ್ರುವರಿಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 1,763,338 likes ಹೆಚ್ಚಿನ ಲೈಕ್ಸ್ ಪಡೆದಿದೆ. ಈ ರೀತಿ ಸ್ಟಂಟ್ ಮಾಡಿ ಅಪಾಯ ಮೈಮೇಲೆ ಎಳೆದುಕೊಳ್ಳಬೇಡಿ, ಇದು ಸೊಂಟ ಮುರಿದ ಸ್ಟಂಟ್ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಬಾಲಕಿ ರಸ್ತೆ ಬಿದ್ದ ಕಾರಣ ಸೊಂಟ ಮುರಿದಿರುವ ಸಾಧ್ಯತೆ ಇದೆ, ಪಕ್ಕದಲ್ಲಿ ಡಿವೈಡರ್‌ಗೆ ಬಿದ್ದಿದ್ದರೆ, ತೊಲೆ ಒಡೆಯುತ್ತಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಪುಣೆಯಲ್ಲಿ ಯುವತಿಯೊಬ್ಬಳು ಎತ್ತರದ ಕಟ್ಟಡ ಮೇಲೆ ಯುವಕನ ಕೈಹಿಡಿದು ನೇತಾಡುವ ಮೂಲಕ ಸಾಹಸ ಪ್ರದರ್ಶಿಸಿದ್ದಳು. ಈ ವಿಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇಷ್ಟೇ ಅಲ್ಲ, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
View this post on Instagram