Saturday, January 18, 2025
HomeBelagavi NewsSavadatti ಯಲ್ಲಮ್ಮ ದೇವಿಯ ಹುಂಡಿ ಎಣಿಕೆ ಕಾರ್ಯ ಆರಂಭ.!
spot_img

Savadatti ಯಲ್ಲಮ್ಮ ದೇವಿಯ ಹುಂಡಿ ಎಣಿಕೆ ಕಾರ್ಯ ಆರಂಭ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಸವದತ್ತಿ : ಬೆಳಗಾವಿ ಜಿಲ್ಲೆಯ ಪ್ರಸಿದ್ಧ ದೇವಸ್ಥಾನವಾದ ಸವದತ್ತಿ ಯಲ್ಲಮ್ಮ ದೇವಾಲಯದಲ್ಲಿ (Savadatti Yallamma Temple) ಹುಂಡಿ ಎಣಿಕೆ ಕಾರ್ಯ ಆರಂಭಗೊಂಡಿದೆ.

ಜ. 2 ಮತ್ತು 3ರಂದು ನಡೆದ ಎಣಿಕೆಯಲ್ಲಿ ₹71.34 ಲಕ್ಷ ನಗದು, ₹5.85 ಲಕ್ಷ ಮೌಲ್ಯದ ಚಿನ್ನ (gold) ಹಾಗೂ ₹1.35 ಲಕ್ಷ ಮೌಲ್ಯದ ಬೆಳ್ಳಿ (silver) ಆಭರಣ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಮಹಿಳಾ ರೋಗಿಗಳ ಖಾಸಗಿ ಅಂಗ ಸ್ಪರ್ಶಿಸಿಸುವ Doctorನ ಹೇ‌ಯ್‌ ಕೃತ್ಯದ ವಿಡಿಯೋ ವೈರಲ್‌.!

ವಿಶೇಷವೆಂದರೆ ಹುಂಡಿ ಎಣಿಕೆ‌ ಸಂದರ್ಭ ವಿದೇಶಿ ನೋಟುಗಳು ಪತ್ತೆಯಾಗಿವೆ (Find foreign notes). ಭೂತಾನ್ ಮತ್ತು ನೇಪಾಳ‌ ದೇಶಗಳ ಕರೆನ್ಸಿ ನೋಟುಗಳು ಪತ್ತೆಯಾಗಿವೆ.

ಇನ್ನೂ ಈ ಕುರಿತು ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ, ಪ್ರಾಧಿಕಾರ ರಚಿಸಿದ ಬಳಿಕ ಮೊದಲ ಬಾರಿ ನಡೆದ ಹುಂಡಿ ಎಣಿಕೆ ಕಾರ್ಯ ಇದು. ಸರ್ಕಾರಿ ಅನುದಾನದ ಜೊತೆಗೆ ಭಕ್ತರ ಕಾಣಿಕೆ ಹಣವನ್ನು ದೇವಸ್ಥಾನ ಅಭಿವೃದ್ಧಿಗೆ ಬಳಸಲಾಗುವುದು (Use for temple development) ಎಂದು ತಿಳಿಸಿದ್ದಾರೆ.

ಹಿಂದಿನ ಸುದ್ದಿ : ದೂರು ನೀಡಲು ಬಂದ ಮಹಿಳೆಯೊಂದಿಗೆ ಕಚೇರಿಯಲ್ಲೇ ಡಿವೈಎಸ್ಪಿ ರಾಸಲೀಲೆ.!

ಜನಸ್ಪಂದನ ನ್ಯೂಸ್, ತುಮಕೂರು : ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಹ ಘಟನೆ ನಡೆದಿದ್ದು, ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ತನ್ನ ಕಚೇರಿಯಲ್ಲೇ ಡಿವೈಎಸ್ಪಿ ರಾಮಚಂದ್ರಪ್ಪ ಲೈಂಗಿಕ ದೌರ್ಜನ್ಯ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನು ಓದಿ : Health : ಕಡಿಮೆ ಮಾತ್ರವಲ್ಲ, ನೀರು ಹೆಚ್ಚು ಕುಡಿಯುವುದು ಒಳ್ಳೆಯದಲ್ಲ; ಯಾಕೆ ಗೊತ್ತಾ?

ತುಮಕೂರು ಜಿಲ್ಲೆಯ ಮಧುಗಿರಿ ಡಿವೈಎಸ್ಪಿ (Madhugiri Dysp of Tumkur District) ರಾಮಚಂದ್ರಪ್ಪ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ (Sexual assault) ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆಯೊಬ್ಬರು ಜಮೀನು ವಿವಾದಕ್ಕೆ (Land dispute) ಸಂಬಂಧಿಸಿದಂತೆ ದೂರು ನೀಡಲು ಬಂದ ವೇಳೆ ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ರಾಮಚಂದ್ರಪ್ಪ ರಾಸಲೀಲೆ ನಡೆಸಿದ್ದಾರೆ.

ಇದನ್ನು ಓದಿ : ಖಾಲಿ ಇರುವ Anganwadi ಕಾರ್ಯಕರ್ತೆ/ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಹೀನಕೃತ್ಯದ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಡಿವೈಎಸ್‌ಪಿ ತಲೆಮರೆಸಿಕೊಂಡಿದ್ದಾರೆ (Hiding) ಎಂದು ತಿಳಿದು ಬಂದಿದೆ.

ಇನ್ನೂ ಮಹಿಳೆಯು ಪಾವಗಡ ಮೂಲದವರಾಗಿದ್ದು, ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ವಿಚಾರಣೆ ಸಲುವಾಗಿ ಮಹಿಳೆಯನ್ನು ಡಿವೈಎಸ್‌ಪಿ ಕಚೇರಿಗೆ ಕರೆಸಲಾಗಿತ್ತು.

ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!

ಡಿವೈಎಸ್‌ಪಿ ರಾಮಚಂದ್ರಪ್ಪ ಈ ವೇಳೆ ಮಹಿಳೆಯನ್ನು ಪುಸಲಾಯಿಸಿ ಆಕೆಯನ್ನು ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ಶುರು ಮಾಡಿದ್ದಾರೆ. ಮಹಿಳೆಯೊಂದಿಗೆ ಡಿವೈಎಸ್‌ಪಿ ರಾಮಚಂದ್ರಪ್ಪ ಬಲವಂತವಾಗಿ ನಡೆದುಕೊಳ್ಳುತ್ತಿರುವ ದೃಶ್ಯವನ್ನು ಸೆರೆ ಹಿಡಿದ ವ್ಯಕ್ತಿಯೊಬ್ಬರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!