Saturday, July 13, 2024
spot_img
spot_img
spot_img
spot_img
spot_img
spot_img

SSLC ಪಾಸಾದವರಿಗೆ ರೂ.29,000/- ಸಂಬಳ ; ಕರ್ನಾಟಕದಲ್ಲೇ ಉದ್ಯೋಗಾವಕಾಶ.!

spot_img

ಜನಸ್ಪಂದನ ನ್ಯೂಸ್, ನೌಕರಿ : SSLC ಪಾಸಾದವರಿಗೆ ಒಂದು ಸುವರ್ಣಾವಕಾಶ, ರೂ. 29,000/- ಸಂಬಳದೊಂದಿಗೆ ಕರ್ನಾಟಕದಲ್ಲೇ ಉದ್ಯೋಗಾವಕಾಶ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಒಂದು ವೇಳೆ ನೀವು SSLC ಪಾಸಾಗಿದ್ದು, ಕೆಲಸ ಹುಡುತಿರುವವರಾಗಿದ್ದರೆ ಇಲ್ಲಿದೆ ನೋಡಿ ಸುವರ್ಣಾವಕಾಶ.

ಇದನ್ನು ಓದಿ : ಕಾರ್ಮಿಕನಿಗೆ ಕಚ್ಚಿದ ಹಾವು : ಮರಳಿ ಹಾವಿಗೆ ಕಚ್ಚಿದ ಕಾರ್ಮಿಕ ; ಕಚ್ಚಾಟದಲ್ಲಿ ಗೆದ್ದರ್ಯಾರು, ಸೋತವರ್ಯಾರು.?

ಹೌದು, ಹಾವೇರಿ ಜಿಲ್ಲಾ ಕೋರ್ಟ್​ (Haveri District Court) ನಲ್ಲಿ ಒಟ್ಟು 26 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯ ಇಲ್ಲಿದೆ ಮಾಹಿತಿ.

ಹುದ್ದೆ ವಿವರ :
* ಟೈಪಿಸ್ಟ್​​​ – 03.
* ಟೈಪಿಸ್ಟ್​​ – ಕಾಪಿಸ್ಟ್​​ – 03.
* ಪ್ರೊಸೆಸ್​ ಸರ್ವರ್​ – 20.
ಒಟ್ಟು 26 ಹುದ್ದೆ ನೇಮಕಾತಿ.

ವಿದ್ಯಾರ್ಹತೆ :
ಟೈಪಿಸ್ಟ್​​​​, ಟೈಪಿಸ್ಟ್​​-ಕಾಪಿಸ್ಟ್​​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪೂರ್ವ ಪರೀಕ್ಷಾ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ಮೂರು ವರ್ಷದ ಡಿಪ್ಲೊಮಾ ಕಮರ್ಷಿಯಲ್​ ಪ್ರಾಕ್ಟೀಸ್​ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಹಾಗೇ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಹಿರಿಯ ಶ್ರೇಣಿಯ ಟೈಪಿಂಗ್​ನಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ :
ಅಭ್ಯರ್ಥಿಗಳ ವಯಸ್ಸು ಆಗಸ್ಟ್ 1, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಲಿಕೆ :
* SC/ST/ಪ್ರವರ್ಗ-I ಅಭ್ಯರ್ಥಿಗಳು : 05 ವರ್ಷಗಳು.
* ಪ್ರವರ್ಗ-IIA/IIB/IIIA/IIIB ಅಭ್ಯರ್ಥಿಗಳು : 03 ವರ್ಷಗಳು.
* PWD/ವಿಧವೆ ಅಭ್ಯರ್ಥಿಗಳು : 10 ವರ್ಷಗಳು.

ಅರ್ಜಿ ಶುಲ್ಕ:
* SC/ST/ಪ್ರವರ್ಗ-I/PWD ಅಭ್ಯರ್ಥಿಗಳು : ಯಾವುದೆ ಶುಲ್ಕ ಇಲ್ಲ.
* ಪ್ರವರ್ಗ-IIA/IIB/IIIA/IIIB ಅಭ್ಯರ್ಥಿಗಳು : ರೂ.100/-
* ಸಾಮಾನ್ಯ ಅಭ್ಯರ್ಥಿಗಳು : ರೂ.200/-
ಪಾವತಿ ವಿಧಾನ : ಆನ್‌ಲೈನ್.

ವೇತನ :
* ಮಾಸಿಕ ₹ 17,000 – ₹ 28,950.

ಉದ್ಯೋಗದ ಸ್ಥಳ:
* ಹಾವೇರಿ.

ಆಯ್ಕೆ ಪ್ರಕ್ರಿಯೆ :
* ಮೆರಿಟ್​ ಲಿಸ್ಟ್​.
* ಸಂದರ್ಶನ.

ಅರ್ಜಿ ಹಾಕೋದು ಹೇಗೆ.?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ಇದನ್ನು ಓದಿ : ನಿಮಗಿದು ಗೊತ್ತೇ : ಮುರಿದ ಮೂಳೆಯನ್ನೇ ಜೋಡಿಸುತ್ತೇ ಈ ಸಸ್ಯ ; ಬನ್ನಿ ಇದರ ಉಪಯೋಗ ತಿಳಿಯೋಣ.!

ಲಿಂಕ್‌ಗಳು :
ಆನ್‌ಲೈನ್‌ ಅರ್ಜಿ ಸಲ್ಲಿಸಲು ಲಿಂಕ್‌ : Apply Online
ವೆಬ್‌ಸೈಟ್ ವಿಳಾಸ : haveri.dcourt.gov.in

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಜುಲೈ 03, 2024.
ಅರ್ಜಿ ಸಲ್ಲಿಸಲು ಕೊನೆಯ ದಿನ : ಆಗಸ್ಟ್ 1, 2024.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ : ಆಗಸ್ಟ್ 2, 2024.

Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official website for official information.

spot_img
spot_img
- Advertisment -spot_img